Champions Trophy; ತಂಡ ಸೇಫ್​ ಆಗಿರಬೇಕು ಎಂದ್ರೆ ಕೊಹ್ಲಿ, ರೋಹಿತ್ ಹೀಗೆ ಮಾಡಬಾರದು!

author-image
Bheemappa
Updated On
Champions Trophy; ತಂಡ ಸೇಫ್​ ಆಗಿರಬೇಕು ಎಂದ್ರೆ ಕೊಹ್ಲಿ, ರೋಹಿತ್ ಹೀಗೆ ಮಾಡಬಾರದು!
Advertisment
  • ತಂಡದಲ್ಲಿ ಹಿರಿಯ ಆಟಗಾರರಿಗಿಂತ ಕಿರಿಯರ ಚಾಣಕ್ಷತೆ ಶ್ರೇಷ್ಠ
  • ಬಾಂಗ್ಲಾ ವಿರುದ್ಧ ಪಂದ್ಯ ಗೆದ್ದಿರುವುದಕ್ಕೆ ಮುಖ್ಯ ಕಾರಣವೇನು?
  • ಸುಲಭಕ್ಕೆ ವಿಕೆಟ್ ಕೈಚೆಲ್ಲುತ್ತಿರುವ ವಿರಾಟ್ ಕೊಹ್ಲಿ, ರೋಹಿತ್

ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಆದರೆ, ಬ್ಯಾಟರ್​ಗಳ ಅವಸರವೇ ಟೀಮ್ ಇಂಡಿಯಾ ಪಾಲಿಗೆ ಅಪಾಯವಾಗುವ ಲಕ್ಷಣ ಘೋಚರಿಸುತ್ತಿದೆ. ಇದಕ್ಕೆ ಕಾರಣ ಟಾಪ್​​​ ಬ್ಯಾಟರ್ಸ್​ ವಿಕೆಟ್ ಒಪ್ಪಿಸಿದ ರೀತಿ.

ಅವಸರವೇ ಅಪಘಾತಕ್ಕೆ ಕಾರಣ. ಜಾಗರೂಕವಾಗಿ ಚಾಲಯಿಸಿ.. ರಸ್ತೆ ಪ್ರಯಾಣದ ವೇಳೆ ಇಂಥಹ ಬೋರ್ಡ್ಸ್​ಗಳನ್ನ ನಾವ್ ನೋಡುತ್ತೇವೆ. ಪ್ರತಿ ತಿರುವುಗಳಲ್ಲಿ, ಸ್ಫಿಡ್ ಬ್ರೇಕರ್​ ಬಳಿ ಟ್ರಾಫಿಕ್ ಸಿಗ್ನಲ್ಸ್​ ಜೊತೆ ಜೊತೆಗೆ ಎಚ್ಚರಿಕೆಯ ಸಂದೇಶ ಟ್ರಾಫಿಕ್ ಪೋಲಿಸರು ಅಳವಡಿಸ್ತಾರೆ. ಇದಕ್ಕೆ ಕಾರಣ ಪ್ರಯಾಣಿಕರ ಸೇಫ್ಟಿ.. ಆದ್ರೀಗ ಟೀಮ್ ಇಂಡಿಯಾಗೂ ಈ ಸಂದೇಶ ನೀಡಬೇಕಿದೆ. ಇದಕ್ಕೆ ಕಾರಣ ಚಾಂಫಿಯನ್ಸ್​ ಟ್ರೋಫಿ ಪ್ರಯಾಣ.

publive-image

ಚಾಂಪಿಯನ್ಸ್​ ಟ್ರೋಫಿ ಎಂಬ ಬಸ್ ಏರಿರುವ ಟೀಮ್ ಇಂಡಿಯಾ, ಮೊದಲ ಸ್ಟಾಪ್​ ತಲುಪಿದ್ದಾಗಿದೆ. ಆದ್ರೆ, ಮೊದಲ ಬಸ್​ಸ್ಟಾಪ್​ನಲ್ಲೇ ಇಂಡಿಯನ್ ಬ್ಯಾಟರ್ಸ್​ ಮಾಡಿದ ತಪ್ಪುಗಳು, ಇಡೀ ತಂಡವನ್ನು ಡೇಂಜರ್ ಝೋನ್​ಗೆ ತಳ್ಳುವಂತಿದೆ.

ಅಟ್ಯಾಕಿಂಗ್​ ಬ್ಯಾಟಿಂಗ್.. 2 ಬಾಲ್​ ಡಾಟ್.. ಬೇಕಿತ್ತಾ ಈ ಆತುರ..?

ಬಾಂಗ್ಲಾ ಎದುರು ರೋಹಿತ್, ಟೀಮ್ ಇಂಡಿಯಾಗೆ ಸಾಲಿಡ್ ಓಪನಿಂಗ್ ನೀಡಿದರು. ಅಟ್ಯಾಕಿಂಗ್ ಬ್ಯಾಟಿಂಗ್ ಮೂಲಕ ರಂಜಿಸಿದರು. ಆದ್ರೆ, ಟಸ್ಕಿನ್ ಎಸೆದ 10ನೇ ಓವರ್​​ನಲ್ಲಿ ಸತತ ಎರಡು ಬಾಲ್ ಡಾಟ್ ಮಾಡಿದ ರೋಹಿತ್​​ಗೆ, 5ನೇ ಎಸೆತವನ್ನು ಮುನ್ನುಗ್ಗಿ ಬಂದು ಹೊಡೆಯೋ ಅವಶ್ಯಕತೆ ಇರಲಿಲ್ಲ. ಆದ್ರೆ, 2 ಬಾಲ್ ಟಾಟ್​ ಆಯ್ತಾಲ್ಲ ಅನ್ನೋ ಕೋಪಕ್ಕೆ ಗುಡ್ ಲೆನ್ತ್​ ಬಾಲ್​ನ ದಂಡಿಸಿ ಕೈಸುಟ್ಟುಕೊಂಡರು.

ಲೆಗ್ ಸ್ಪಿನ್ನರ್​ಗೆ ಮತ್ತೆ ವಿಕೆಟ್ ಒಪ್ಪಿಸಿದ ವಿರಾಟ್..!

ಬಾಂಗ್ಲಾ ಎದುರು ವಿರಾಟ್ ವಿಕ್ನೇಸ್ ಮತ್ತೊಮ್ಮೆ ಬಟಾಬಯಲಾಗಿದೆ. ಲೆಗ್ ಸ್ಪಿನ್ನರ್ ರಿಷದ್ ಎಸೆದ ಚೆಂಡನ್ನು ಲೇಟ್ ಕಟ್​​​​​​​​​​​​​​​​​​ ಮಾಡುವುದರೊಂದಿಗೆ ಸುಲಭಕ್ಕೆ ಕ್ಯಾಚ್ ನೀಡಿ ಔಟಾದರು. ಇದಕ್ಕೆ ಕಾರಣ ಕೊಹ್ಲಿಯ ಅವಸರವೇ ಆಗಿತ್ತು.

ಇದನ್ನೂ ಓದಿ:ಗೆಳೆಯನ ಜೊತೆ ಸಪ್ತಪದಿ ತುಳಿದ ಮಾರ್ಟಿನ್ ಬ್ಯೂಟಿ; ಹುಡುಗ ಯಾರು..?

publive-image

ಜವಾಬ್ದಾರಿ ಮರೆತ ಶ್ರೇಯಸ್ ಅಯ್ಯರ್..!

112 ರನ್​ಗೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್​ಗೆ ಬಂದಿದ್ದ ಶ್ರೇಯಸ್​​​​​​​ ಸಾಲಿಡ್ ಟಚ್​ನಲ್ಲಿರುವಂತೆ ಕಂಡರು. ಆದ್ರೆ, ಮುಸ್ತಾಫಿಜುರ್ ರಹಮಾನ್​ರ ಸ್ಲೋವರ್ ಕಟರ್​ಗೆ ಶ್ರೇಯಸ್, ಬಿಗ್ ಶಾಟ್ ಪ್ಲೇ ಮಾಡಲು ಮುಂದಾಗಿ ಔಟಾದರು.

ಇನ್ನಿಂಗ್ಸ್​ ಬಿಲ್ಡ್​ ಮಾಡೋ ಟೈಮ್​ನಲ್ಲಿ ಬೇಕಿತ್ತಾ ಅಕ್ಷರ್..?

133 ರನ್​ಗೆ 3 ವಿಕೆಟ್. ಈ ಟೈಮ್​ನಲ್ಲಿ ಅಕ್ಷರ್, ಗಿಲ್​ ಜೊತೆ ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಬೇಕಿತ್ತು. ಆದ್ರೆ, ಇದನ್ನೆಲ್ಲ ಮೈಮರೆತ ಅಕ್ಷರ್ ಪಟೇಲ್, ಅನಾವಶ್ಯಕ ಶಾಟ್​​ ಪ್ಲೇ ಮಾಡಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಅವಸರಕ್ಕೆ ಬ್ಯಾಟ್ ಬೀಸಿದ್ರೆ ಕೈಚೆಲ್ಲಬೇಕಿರುತ್ತೆ ವಿಕೆಟ್..!

ಬ್ಯಾಟ್ಸ್​ಮನ್​ ಎಂದಾಕ್ಷಣ.. ಪ್ರತಿ ಬಾಲ್​ನ ಬೌಂಡರಿ ಬಾರಿಸೋದು ಅಲ್ಲ. ಪ್ರತಿ ಎಸೆತವನ್ನು ಹಿಟ್ ಮಾಡೋದು ಅಲ್ಲ. ಉತ್ತಮ ಎಸೆತಗಳಿಗೆ ಗೌರವ ನೀಡಬೇಕು. ತಾಳ್ಮೆಯಿಂದ ಕ್ರೀಸ್​ನಲ್ಲಿ ನೆಲೆಯೂರಬೇಕು. ಬ್ಯಾಡ್​ ಬಾಲ್ಸ್​ನ ಬೌಂಡರಿ ಸಿಡಿಸಬೇಕು. ಇಲ್ಲ ಅವಸರಕ್ಕೆ ಬ್ಯಾಟ್ ಬೀಸಿದ್ರೆ, ವಿಕೆಟ್ ಬೀಳೋದ್ರ ಜೊತೆಗೆ ಟೀಮ್ ಸಂಕಷ್ಟಕ್ಕೆ ಸಿಲುಕಬೇಕಿರುತ್ತೆ. ಹೀಗಾಗಿಯೇ ಹೇಳ್ತಿರೋದು ಅವಸರವೇ ಅಪಾಯ.. ತಾಳ್ಮೆ ಇರಲಿ ಅಂತ.

publive-image

ಮಾದರಿಯಾಗಬೇಕಿದೆ ಶುಭ್​ಮನ್ ಬ್ಯಾಟಿಂಗ್..!

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್​​​ ಅನುಭವಿಗಳು ನಿಜ. ಆದ್ರೆ, ಬಾಂಗ್ಲಾ ಎದುರು ಶುಭ್​ಮನ್​​​​​​ ಗಿಲ್​​​​​​​​​​​​​​​​​​​​​​​​​​​​​​​​​​ ಬ್ಯಾಟಿಂಗ್​ನಲ್ಲಿದ್ದ ಪ್ರಬುದ್ಧತೆ. ಪರಿಸ್ಥಿತಿಗೆ ತಕ್ಕಂತೆ ಗೇರ್ ಬದಲಿಸುವ ಚಾಣಾಕ್ಷತೆ ಇತರರಲ್ಲಿ ಇರಲಿಲ್ಲ. ಅವಸರಕ್ಕೆ ಬ್ಯಾಡ್ ಶಾಟ್​ಗೆ ಕೈಹಾಕಿ ಕೈಸುಟ್ಟುಕೊಳ್ಳಲಿಲ್ಲ. ಹೀಗಾಗಿ ಶುಭ್​ಮನ್ ಬ್ಯಾಟಿಂಗ್ ನೋಡಿ, ಈ ಸೀನಿಯರ್ಸ್ ಕಲಿಯಬೇಕಾದ ಅಗತ್ಯತೆ ನಿಜಕ್ಕೂ ಇದ್ದೇ ಇದೆ.

ಅವಸರಕ್ಕೆ ಬ್ಯಾಟ್ ಬೀಸಿ ಅಪಾಯಕ್ಕೆ ಸಿಲುಕುವುದರ ಬದಲಿಗೆ, ತಾಳ್ಮೆ ವಹಿಸಿ.. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವಿಕೆಯನ್ನು ಮುಂದಿನ ಪಂದ್ಯಗಳಲ್ಲಾದರು ರೂಢಿಸಿಕೊಳ್ಳಬೇಕಿದೆ. ಇಲ್ಲ ಟೀಮ್ ಇಂಡಿಯಾ ಡೇಂಜರ್ ಝೋನ್​ಗೆ ಸಿಲುಕೋದು ಫಿಕ್ಸ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment