/newsfirstlive-kannada/media/post_attachments/wp-content/uploads/2025/03/KL-RAHUL-1.jpg)
ಅಸಂಖ್ಯ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. 12 ವರ್ಷಗಳ ಬಳಿಕ ದುಬೈನಲ್ಲಿ ಚಾಂಪಿಯನ್ಸ್​ ಟ್ರೋಫಿಗೆ ಟೀಮ್​​ ಇಂಡಿಯಾ ಮುತ್ತಿಕ್ಕಿದೆ. ನ್ಯೂಜಿಲೆಂಡ್​ ನೀಡಿದ್ದು 252 ರನ್​ಗಳ ಟಾರ್ಗೆಟ್​ ಆದ್ರೂ ಟಫ್​ ಫೈಟ್​ ನೀಡ್ತು. ದಿಟ್ಟ ಹೋರಾಟ ನಡೆಸಿ ಟೀಮ್​ ಇಂಡಿಯಾ ರಣರೋಚಕ ಗೆಲುವು ಸಾಧಿಸಿತು. ಲೀಗ್​ನಲ್ಲಿ ಮಾಡಿದ್ದ ತಪ್ಪು.. ಫೈನಲ್​ನಲ್ಲಿ ಮಾಡ್ಬಾರದು ಅನ್ನೋ ಕಾರಣಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಲೆಕ್ಕಾಚಾರ ತಲೆಕಳೆಗಾಯ್ತು.
4 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ
ರೋಚಕ ಪಂದ್ಯದಲ್ಲಿ ಕಿವೀಸ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿದ ರೋಹಿತ್ ಪಡೆ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿದಿದೆ. ಭಾರತ ಮತ್ತೊಮ್ಮೆ ಚಾಂಪಿಯನ್ಸ್​ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ 25 ವರ್ಷಗಳ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿದೆ. 2000 ರಲ್ಲಿ ನಡೆದ ಇದೇ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತಿತ್ತು. ಇದೀಗ ಅದರ ಸೇಡನ್ನು ತೀರಿಸಿಕೊಂಡಿದೆ.
ಇದನ್ನೂ ಓದಿ: ಟೀಮ್​ ಇಂಡಿಯಾ ಗೆಲುವಿಗೆ ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್!
/newsfirstlive-kannada/media/post_attachments/wp-content/uploads/2025/03/Rohit-Sharma-fifty.jpg)
ರೋ‘ಹಿಟ್​’​​..!
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಬಳಗ, ಮೊದಲು ಬ್ಯಾಟಿಂಗ್ ಮಾಡಿತು. ಟೀಮ್ ಇಂಡಿಯಾ ಸ್ಪಿನ್ನರ್​​​ಗಳ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತ್ತು. 252 ರನ್​ಗಳ ಗುರಿ ಬೆನ್ನಟ್ಟಿದ ಟೀಮ್​ ಇಂಡಿಯಾ ಧಮ್​ಧಾರ್​ ಆರಂಭ ಪಡೆದುಕೊಳ್ತು. ಕ್ಯಾಪ್ಟನ್​ ರೋಹಿತ್​ ಶರ್ಮಾ ರಣಾರ್ಭಟ ನಡೆಸಿದ್ರು. ಹಿಟ್​​ಮ್ಯಾನ್​ ಸೂಪರ್​ಹಿಟ್​ ಬ್ಯಾಟಿಂಗ್​ಗೆ ನ್ಯೂಜಿಲೆಂಡ್​ ಬೌಲರ್ಸ್​ ಸುಸ್ತು ಹೊಡೆದ್ರು. ಗಿಲ್​ ಎಚ್ಚರಿಕೆಯ ಆಟವಾಡಿ ನ್ಯೂಜಿಲೆಂಡ್​ ಬೌಲರ್​ಗಳ ತಾಳ್ಮೆ ಪರೀಕ್ಷಿಸಿದ್ರು. ಗಿಲ್​ ನಿರ್ಗಮನದ ಬಳಿಕ ಕಣಕ್ಕಿಳಿದ ವಿರಾಟ್​​ ಕೊಹ್ಲಿ 1 ರನ್​ಗೆ ಔಟಾಗಿ ನಿರಾಸೆ ಮೂಡಿಸಿದ್ರು. ಕೊಹ್ಲಿ ಬೆನ್ನಲ್ಲೇ ರೋಹಿತ್​ ಶರ್ಮಾ 76 ರನ್​ಗೆ ಪೆವಿಲಿಯನ್​ ಸೇರಿದ್ರು. ​
/newsfirstlive-kannada/media/post_attachments/wp-content/uploads/2025/03/Team-India-win.jpg)
ಕನ್ನಡಿಗನ ಕೆಚ್ಚೆದೆಯ ಹೋರಾಟ..
ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಶ್ರೇಯಸ್​ ಅಯ್ಯರ್​-ಅಕ್ಷರ್​ ಪಟೇಲ್​ ತಂಡಕ್ಕೆ ಚೇತರಿಕೆ ನೀಡಿ 4ನೇ ವಿಕೆಟ್​ಗೆ 61 ರನ್​ಗಳ ಜೊತೆಯಾಟವಾಡಿದ್ರು. ಶ್ರೇಯಸ್​​ 48 ರನ್​ಗಳಿಸಿ ಔಟಾದ್ರೆ, ಅಕ್ಷರ್​ ಪಟೇಲ್​ 29 ರನ್​ಗಳ ಅತ್ಯಮೂಲ್ಯ ಕಾಣಿಕೆ ನೀಡಿದ್ರು. ಬಳಿಕ ಕಣಕ್ಕಿದ ಹಾರ್ದಿಕ್​​ ಪಾಂಡ್ಯ 18 ರನ್​ಗಳಿಸಿ ನಿರ್ಗಮಿಸಿದ್ರು. ಆಗ ಬಂದ ಕನ್ನಡಿಗ ಕೆ.ಎಲ್​ ರಾಹುಲ್​ ಕೆಚ್ಚೆದೆಯ ಹೋರಾಟ ನಡೆಸಿದ್ರು. ಕ್ರಿಸ್​ ಕಚ್ಚಿ ನಿಂತು ಅಬ್ಬರಿಸಿ ತಂಡವನ್ನ ಅಜೇಯವಾಗಿ ಗೆಲುವಿನ ದಡ ಸೇರಿಸಿದ್ರು. ಆ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ನಮ್ಮ ಕನ್ನಡಿಗ ಕೆಎಲ್ ರಾಹುಲ್ ಗೆದ್ದರು. 6 ಎಸೆತಗಳು ಬಾಕಿ ಇರುವಾಗಲೇ 254 ರನ್ ಬಾರಿಸಿ ಭಾರತ ಗೆಲುವು ಸಾಧಿಸಿತು. 48ನೇ ಓವರ್​ನ ಕೊನೆಯ ಎಸೆತವನ್ನ ಬೌಂಡರಿಗಟ್ಟಿದ ರವೀಂದ್ರ ಜಡೇಜಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಒಟ್ಟಾರೆ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಟೀಮ್​ ಇಂಡಿಯಾ ಆಟಗಾರರು ತೇಲಾಡಿದ್ರು. ಕಪ್​ ಗೆದ್ದ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡಿದ್ರು. ಕೋಟ್ಯಂತರ ಅಭಿಮಾನಿಗಳ ಕನಸನ್ನ ನನಸು ಮಾಡಿದ ತೃಪ್ತ ಬಾವ ಟೀಮ್​ ಇಂಡಿಯಾ ಆಟಗಾರರ ಕಣ್ಣಲ್ಲಿತ್ತು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us