/newsfirstlive-kannada/media/post_attachments/wp-content/uploads/2024/11/ROHIT_SHARMA-5.jpg)
ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಬಿಸಿಸಿಐ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಅಳೆದು ತೂಗಿ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಮಾಡಲಾಗಿದೆ. ತಂಡದಲ್ಲಿ ಪ್ರಮುಖ ಐದು ದೊಡ್ಡ ಬದಲಾವಣೆ ಆಗಿದೆ.
ಐದು ದೊಡ್ಡ ಬೆಳವಣಿಗೆಗಳು..
- ಮೊಹ್ಮದ್ ಸಿರಾಜ್ ಅವರನ್ನು ಹೊರಗಿಟ್ಟಿರುವುದು ಆಘಾತಕಾರಿ
- ಶುಬ್ಮನ್ ಗಿಲ್ಗೆ ಸಿಹಿ ಸುದ್ದಿ ಸಿಕ್ಕಿದೆ, ತಂಡಕ್ಕೆ ಆಯ್ಕೆ ಜೊತೆಗೆ ಉಪನಾಯಕನ ಪಟ್ಟ
- ಯಶಸ್ವಿ ಜೈಸ್ವಾಲ್ಗೆ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡುವ ದೊಡ್ಡ ಅವಕಾಶ
- ವಾಷಿಂಗ್ಟನ್ ಸುಂದರ್ ಅಚ್ಚರಿಯ ರೀತಿಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ
- ಬರೋಬ್ಬರಿ 14 ತಿಂಗಳ ನಂತರ ಮೊಹ್ಮದ್ ಶಮಿ ತಂಡಕ್ಕೆ ಕಂಬ್ಯಾಕ್
ತಂಡದಲ್ಲಿ ಯಾರೆಲ್ಲ ಇದ್ದಾರೆ..?
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ.
ಇದನ್ನೂ ಓದಿ: ಟೀಂ ಇಂಡಿಯಾಗೆ ಹೊಸ ಬ್ಯಾಟಿಂಗ್ ಕೋಚ್.. ರೇಸ್ನಲ್ಲಿ ಇಬ್ಬರು ದಿಗ್ಗಜರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್