Champions Trophy; ಸೆಮಿಸ್​ನಲ್ಲಿ ಭಾರತದ ವಿರುದ್ಧ ಅಫ್ಘಾನ್ ಅಖಾಡಕ್ಕೆ ಇಳಿದ್ರೆ ಭಾರೀ ಸಂಕಷ್ಟ!

author-image
Bheemappa
Updated On
ಕ್ಯಾಪ್ಟನ್ ರೋಹಿತ್​ರಿಂದಲೇ ದೊಡ್ಡ ಮಿಸ್ಟೇಕ್ಸ್; ಅದೇ ತಪ್ಪು ಮುಂದುವರಿದ್ರೆ ಪಾಕ್ ವಿರುದ್ಧ ಕಷ್ಟ..!
Advertisment
  • ಭಾರತದ ಅಜೇಯ ಗೆಲುವಿನ ಗುರಿ ಹಿಂದಿದೆ ಈ ಮೇನ್ ರೀಸನ್
  • ನ್ಯೂಜಿಲೆಂಡ್​ ವಿರುದ್ಧದ ಪಂದ್ಯ ಕೂಡ ಭಾರತಕ್ಕೆ ಇಂಪಾರ್ಟೆಂಟ್​
  • ಸೆಮೀಸ್​ಗೆ ಯಾರೇ ಬಂದ್ರು ಭಾರತಕ್ಕೆ ಅಡ್ವಾಂಟೇಜ್ ಇದೆಯಾ?

ಟೀಮ್ ಇಂಡಿಯಾ ಈಗ ಫುಲ್​​ ಟೆನ್ಶನ್ ಫ್ರೀ. ಸೆಮಿಫೈನಲ್ ಪ್ರವೇಶದ ಒತ್ತಡ ಇಲ್ಲದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ಎದುರಿನ ಕೊನೆ ಲೀಗ್​​ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದರೂ, ಈ ಮ್ಯಾಚ್ ಗೆಲ್ಲಲೇಬೇಕು ಅನ್ನೋ ಗುರಿ ಟೀಮ್ ಇಂಡಿಯಾದ್ದು. ಅದು ಯಾಕೆ ಗೊತ್ತಾ?.

ಚಾಂಪಿಯನ್ಸ್​ ಟ್ರೋಫಿಯ ಲೀಗ್​ ಹಂತದ ಪಂದ್ಯಗಳು ಅಂತ್ಯಕ್ಕೆ ಬಂದಾಗಿದೆ. ಈಗಾಗಲೇ ಗ್ರೂಪ್ Aನಿಂದ ಸೆಮೀಸ್​ಗೆ ಅರ್ಹತೆ ಪಡೆದುಕೊಂಡ ಟೀಮ್ ಇಂಡಿಯಾ, ನ್ಯೂಜಿಲೆಂಡ್ ರಿಲ್ಯಾಕ್ಸ್​ ಆಗಿವೆ. ಆದರೆ, ಗ್ರೂಪ್​​​​​- ಬಿನಿಂದ ನಾಕೌಟ್ ತಲುಪುವುದು ಯಾರು?. ಯಾರಿಗೆ ಯಾರ್ ಎದುರಾಳಿ ಆಗ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಕೆಟ್​ ಅಭಿಮಾನಿಗಳಲ್ಲಿ ಹೆಚ್ಚಾಗ್ತಿದೆ. ಇದ್ರ ನಡುವೆ ಈಗಾಗಲೇ ಸೆಮಿಸ್​ಗೆ ಎಂಟ್ರಿ ಕೊಟ್ಟಿದ್ರೂ ಕೂಡ, ಟೀಮ್​ ಇಂಡಿಯಾ ನ್ಯೂಜಿಲೆಂಡ್ ಎದುರಿನ ಕೊನೆ ಲೀಗ್ ಮ್ಯಾಚ್ ಆಡಲು ಪಣತೊಟ್ಟಿದೆ.

publive-image

ನಂ.1 ಸ್ಥಾನದ ಮೇಲಿದೆ ಟೀಮ್ ಇಂಡಿಯಾದ ಕಣ್ಣು..!

ಸತತ ಎರಡು ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮೀಸ್​ಗೆ ಎಂಟ್ರಿ ನೀಡಿದ್ದಾಗಿದೆ. ಹೀಗಾಗಿ ಮುಂದಿನ ಭಾನುವಾರ ಉಭಯ ತಂಡಗಳ ನಡುವೆ ನಡೆಯುವ ಕೊನೆ ಲೀಗ್ ಮ್ಯಾಚ್ ಆಟಕ್ಕಂಟು ಲೆಕ್ಕಕ್ಕಿಲ್ಲ. ಉಭಯ ತಂಡಗಳಿಗೆ ಪಾಲಿಗೆ ಪ್ರತಿಷ್ಠೆ ಅಲ್ಲದಿದ್ದರೂ, ಟೀಮ್ ಇಂಡಿಯಾಗೆ ಮಾತ್ರ ಇದು ಮೋಸ್ಟ್ ಇಂಪಾರ್ಟ್​ಟೆಂಟ್ ಗೇಮ್. ಸತತವಾಗಿ ಗೆದ್ದು ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಳ್ಳೋಕೆ ಹಾಗೂ ಮೊದಲ 2 ಪಂದ್ಯಗಳಲ್ಲಿ ಗೆದ್ದರೂ ಆನ್​ಫೀಲ್ಡ್​​ನಲ್ಲಿ ಮಾಡಿದ ತಪ್ಪುಗಳನ್ನ ತಿದ್ದಿಕೊಳ್ಳೋಕೆ ಈ ಪಂದ್ಯ ವೇದಿಕೆಯಾಗಲಿದೆ. ಜೊತೆಗೆ ಗ್ರೂಪ್​​-Aನ ನಂಬರ್​.1 ಸ್ಥಾನವೂ ಕೂಡ ಟೀಮ್​ ಇಂಡಿಯಾ ಟಾರ್ಗೆಟ್​ ಆಗಿದೆ.

ಸೆಮೀಸ್​ನಲ್ಲಿ ಯಾರ್ ಆಗ್ತಾರೆ ಟೀಮ್ ಇಂಡಿಯಾ ಎದುರಾಳಿ..?

ಕೊನೆ ಲೀಗ್​ನಲ್ಲಿ ಗೆದ್ದು ಅಜೇಯವಾಗಿ ಸೆಮೀಸ್​ಗೇರಲು ಭಾರತ ತಂಡ ಪಣ ತೊಟ್ಟಿದೆ. ಟೀಮ್ ಇಂಡಿಯಾ ನಂ.1 ಸ್ಥಾನಿಯಾಗಿ ಎಂಟ್ರಿ ನೀಡಿದಲ್ಲಿ, ಗ್ರೂಪ್​​-ಬಿನ 2ನೇ ಸ್ಥಾನಿಯ ಎದುರು ಟೀಮ್ ಇಂಡಿಯಾ ಸೆಮಿಸ್​ನಲ್ಲಿ ಸೆಣೆಸಾಡಲಿದೆ. ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್​​ನಂಥ ತಂಡಗಳು ಬಿ ಪೋಲ್​ನಲ್ಲಿವೆ. ಆದ್ರೆ, ಈ ನಾಲ್ಕರ ಪೈಕಿ ಯಾರು ನಾಕೌಟ್​ಗೆ​ ಎಂಟ್ರಿ ನೀಡ್ತಾರೆ ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಇದಕ್ಕೆ ಮಾರ್ಚ್ 1ರ ಬಳಿಕ ಆನ್ಸರ್​ ಸಿಗಲಿದೆ.

ಯಾರೇ ಬಂದರೂ ಭಾರತಕ್ಕೆ ಅಡ್ವಾಂಟೇಜ್..!

ಸದ್ಯಕ್ಕೆ ಗ್ರೂಪ್​-ಬಿನಿಂದ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಸೆಮಿಸ್​​ಗೇರುವ ಫೇವರಿಟ್​ ಅನಿಸಿದೆ. ಹಾಗಂತ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ಅಫ್ಘಾನ್ ತಂಡವನ್ನು ಸುಲಭಕ್ಕೆ ಪರಿಗಣಿಸುವಂತಿಲ್ಲ. ಅಕಸ್ಮಾತ್, 2ನೇ ಸ್ಥಾನಿಯಾಗಿ ಅಫ್ಘಾನ್ ಎಂಟ್ರಿ ನೀಡಿದ್ರೆ, ಟೀಮ್ ಇಂಡಿಯಾಗೆ ಬಿಗ್​ ಚಾಲೆಂಜ್​ ಎದುರಾಗಲಿದೆ. ದುಬೈ ಕಂಡೀಷನ್ಸ್​ ಅಫ್ಘಾನ್ ತಂಡಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿನ ಪಿಚ್ ಸ್ಪಿನ್ ಫ್ರೆಂಡ್ಲಿಯಾಗಿದೆ. ಇದು ಅಫ್ಘಾನ್ ಪಾಲಿಗೆ ಅಡ್ವಾಂಟೇಜ್​ ಆಗಲಿದೆ. ಅಫ್ಘಾನ್​ ಬದಲು ಸೇನಾ ದೇಶಗಳೇ ಎದುರಾಳಿಯಾದ್ರೆ, ಟೀಮ್​ ಇಂಡಿಯಾಗೆ ಅಡ್ವಾಂಟೇಜ್ ಜಾಸ್ತಿ.

ಪಾಕ್​ಗೆ ಪ್ರಯಾಣಿಸದೇ ರೋಹಿತ್​ ಪಡೆ ದುಬೈನಲ್ಲಿ 2 ಪಂದ್ಯಗಳನ್ನಾಡಿದೆ. ಒಂದೇ ಮೈದಾನದಲ್ಲಿ 2 ಲೀಗ್​ ಮ್ಯಾಚ್​ಗಳನ್ನು ಆಡಿರುವ ರೋಹಿತ್ ಪಡೆಗೆ ಸೆಮೀಸ್ ಹಾಗೂ ಫೈನಲ್​​ನಲ್ಲಿ ಇದೇ ದುಬೈ ಪಿಚ್​ ಅನುಕೂಲ ಸಿಕ್ಕೇ ಸಿಗುತ್ತೆ. ಈ ಕಾರಣಕ್ಕೆ ಯಾರೇ ಎದುರಾಳಿಯಾದರು, ಟೀಮ್ ಇಂಡಿಯಾಗೆ ಬಿಗ್ ಅಡ್ವಾಂಟೇಜ್​ ಆಗೋದು ಅಂತೂ ಫಿಕ್ಸ್.

ಇದನ್ನೂ ಓದಿ: 325 ರನ್ ಟಾರ್ಗೆಟ್, ಕೇವಲ 8 ರನ್​ನಿಂದ ಸೋತ ಇಂಗ್ಲೆಂಡ್.. ಅಫ್ಘಾನ್​ಗೆ ರಣರೋಚಕ ಗೆಲುವು

publive-image

ಮೂರಲ್ಲ.. ಚಾಂಪಿಯನ್ಸ್ ಟ್ರೋಫಿ​ ಕಿರೀಟಕ್ಕೆ ಎರಡೇ ಹೆಜ್ಜೆ..!

ಸತತ ಎರಡು ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ಪಾಲಿಗೆ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಸಹಿತ 3 ಪಂದ್ಯಗಳು ಬಾಕಿ ಉಳಿದಿವೆ. ಆದ್ರೆ, ಟೀಮ್ ಇಂಡಿಯಾಗೆ ಕೊನೆ ಲೀಗ್​ ಪಂದ್ಯಕ್ಕಿಂತ ನಾಕೌಟ್​ ಗೇಮ್​​ಗಳೇ ಕ್ರೂಶಿಯಲ್. ಸೆಮೀಸ್ ಹಾಗೂ ಫೈನಲ್​​​​​​​​​​ ಪಂದ್ಯ ಗೆದ್ದರಷ್ಟೇ ಐಸಿಸಿ ಚಾಂಪಿಯನ್ಸ್​ ಕಿರೀಟದ ಕನಸು ನನಸಾಗೋದು.

ದುಬೈನಲ್ಲಿ ಆಡ್ತಿರೋದು ಟೀಮ್ ಇಂಡಿಯಾಗೆ ಪರೋಕ್ಷವಾಗೇ ಅಡ್ವಾಂಟೇಜ್. ಲೀಗ್​ ಪಂದ್ಯಗಳನ್ನಾಡಿದ ಮೈದಾನದಲ್ಲೇ ನಾಕೌಟ್ ಗೇಮ್ಸ್​ ಆಡ್ತಿರೋದು ಆಟಗಾರರ ಕಾನ್ಫಿಡೆನ್ಸ್​ ಹೆಚ್ಚಿಸಿದೆ. ಇದೇ ಕಾನ್ಫಿಡೆನ್ಸ್​ನ​ ಲಾಭದೊಂದಿಗೆ ದುಬೈನಲ್ಲಿ ದರ್ಬಾರ್ ನಡೆಸಿ 12 ವರ್ಷಗಳ ಬಳಿಕ ಚಾಂಪಿಯನ್ಸ್​ ಟ್ರೋಫಿ ಗೆಲ್ಲೋ ಕನಸು ನನಸಾಗಿಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment