/newsfirstlive-kannada/media/post_attachments/wp-content/uploads/2024/06/CHANDAN_SHETTY_VINEDITHA.jpg)
ಬೆಂಗಳೂರು: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸುದ್ದಿಗೋಷ್ಟಿ ನಡೆಸಿದ್ದು, ಎಲ್ಲಾ ವದಂತಿಗಳಿಗೂ ಉತ್ತರ ನೀಡಿದ್ದಾರೆ. ಕೆಲವು ಊಹಾಪೋಹಗಳಿಗೆ ಉತ್ತರಿಸಿದ ಚಂದನ್ ಶೆಟ್ಟಿ ಅವರು ನಿವೇದಿತಾ ಹಾಗೂ ನಾನು ವಿಚ್ಛೇದನ ಪಡೆದಿದ್ದು ಯಾಕೆ ಅನ್ನೋ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮೊದಲು ಮಾತನಾಡಿದ ಚಂದನ್ ಅವರು ಡಿವೋರ್ಸ್ ಪಡೆಯಲು ಬೇರೆ ಯಾವುದೇ ಕಾರಣಗಳಿಲ್ಲ. ನಾವು ಮದುವೆಯಾದ 4 ವರ್ಷಗಳಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆಗಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ‘ಎಷ್ಟು ದಿನ ಮಾನಸಿಕ ನೋವು ಅನುಭವಿಸೋದು’- ಡಿವೋರ್ಸ್ಗೆ ಅಸಲಿ ಕಾರಣ ಬಿಚ್ಚಿಟ್ಟ ಚಂದನ್
ನಾನು ಬೆಳೆದ ರೀತಿನೇ ಬೇರೆ. ನನ್ನ ಜೀವನ ಶೈಲಿನೇ ಬೇರೆಯಾಗಿದೆ. ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರೋ ರೀತಿಯೇ ಬೇರೆ. ನಿವಿ ಜೀವನ ಶೈಲಿ ಬೇರೆ ಇದೆ. ಈ ಬೇರೆ, ಬೇರೆ ರೀತಿ ವರ್ಷಗಳೇ ಕಳೆದರೂ ಹೊಂದಾಣಿಕೆ ಆಗಲಿಲ್ಲ. ಈ ಕಾರಣಕ್ಕೆ ದೂರಾಗಲು ಮುಂದಾದ್ವಿ ಅಷ್ಟೇ ಬೇರೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.
ಹಲವು ವದಂತಿಗಳಿಗೆ ತೆರೆ ಎಳೆದಿರುವ ಚಂದನ್ ಹಾಗೂ ನಿವೇದಿತಾ ಅವರು ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಏನೂ ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ ವಿಚ್ಛೇದನ ಬೇಕಿತ್ತು. ಈ ಕಾರಣಕ್ಕೆ ನಾವು ಬೇರೆ, ಬೇರೆ ಆಗಿದ್ದೇವೆ. ಇಬ್ಬರು ಒಮ್ಮತದಿಂದ ದೂರ ಆಗಿದ್ದೀವಿ ಎಂದು ಸುದ್ದಿಗೋಷ್ಟಿಯಲ್ಲಿ ಇಬ್ಬರು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ