ಮತ್ತೆ ಬಹಿರಂಗವಾಗಿ ತನ್ನ ನೋವನ್ನು ತೋಡಿಕೊಂಡ ನಟ ಚಂದನ್​ ಶೆಟ್ಟಿ.. ಮತ್ತೇನಾಯ್ತು?

author-image
Ganesh Nachikethu
Updated On
ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
Advertisment
  • ನಾಳೆ ಚಂದನ್‌ ಶೆಟ್ಟಿ ನಟನೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ರಿಲೀಸ್​​
  • ಇನ್​ಸ್ಟಾಗ್ರಾಮ್​ ಲೈವ್​ ಬಂದು ತನ್ನ ನೋವನ್ನು ತೋಡಿಕೊಂಡ ನಟ ಚಂದನ್​​!
  • ತಿಂಗಳ ಹಿಂದಷ್ಟೇ ಚಂದನ್​ ನಿವೇದಿತಾ ಗೌಡ ಜತೆ ಡಿವೋರ್ಸ್​ ಮಾಡಿಕೊಂಡಿದ್ರು

ಇತ್ತೀಚೆಗಷ್ಟೇ ಸ್ಟಾರ್​ ಸಿಂಗರ್​​ ನಟ ಚಂದನ್​ ಶೆಟ್ಟಿ ನಿವೇದಿತಾ ಗೌಡ ಅವರೊಂದಿಗೆ ಡಿವೋರ್ಸ್​ ಮಾಡಿಕೊಂಡು ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ಚಂದನ್​ ಶೆಟ್ಟಿ ತನ್ನ ಸಿನಿ ಕರಿಯರ್​ ಬಗ್ಗೆ ಮಹತ್ವದ ಅಪ್ಡೇಟ್​​ ಒಂದು ನೀಡಿದ್ದು, ಹೊಸ ಹೆಜ್ಜೆ ಇಡುತ್ತಿರುವುದಾಗಿ ಹೇಳಿದ್ದಾರೆ.

ನಾಳೆ ಚಂದನ್‌ ಶೆಟ್ಟಿ ನಟನೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ನನ್ನ ಮೊದಲ ಸಿನಿಮಾ. ಈ ಚಿತ್ರವನ್ನು ನೋಡಬೇಕು, ಮೊದಲ ದಿನವೇ ಥಿಯೇಟರ್​ಗೆ ಹೋಗಿ ನೋಡಿ. ನಾನು ಒಂದು ಒಳ್ಳೆ ರೋಲ್​ ಮಾಡಿದ್ದೇನೆ ಎಂದು ಇನ್​ಸ್ಟಾಗ್ರಾಮ್ ಲೈವ್​ ಬಂದು ಮನವಿ ಮಾಡಿದ್ದಾರೆ.

publive-image

ಜೀವನದಲ್ಲಿ ಸಾಕಷ್ಟು ಏಳುಬೀಳುಗಳು ಕಂಡಿದ್ದೇನೆ ಎಂದ ಚಂದನ್​ ಶೆಟ್ಟಿ

ನಾನು ಜೀವನದಲ್ಲಿ ಸಾಕಷ್ಟು ಏಳುಬೀಳುಗಳು ಕಂಡಿದ್ದೇನೆ. ನನ್ನ ಪಾಸ್ಟ್​ ಬಗ್ಗೆ ಮಾತಾಡಕ್ಕೆ ಇಷ್ಟ ಇಲ್ಲ. ಫ್ಯೂಚರ್​ ಬಗ್ಗೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಜೀವನದಲ್ಲಿ ಮೊದಲ ಬಾರಿಗೆ ನಟನಾಗಿ ಅಭಿನಯ ಮಾಡಿದ್ದೇನೆ. ನನಗೆ ನಿಮ್ಮ ಬೆಂಬಲ ಬೇಕು. ನಾನು ಕಷ್ಟದಲ್ಲಿದ್ದಾಗ ನನ್ನ ಜೊತೆ ನಿಂತಿದ್ದೀರಿ. ಹಳೆಯ ಘಟನೆಯಿಂದ ಹೊರಬರಲು ನಿಮ್ಮ ಸಹಕಾರ ಅಗತ್ಯ. ಜೀವನದಲ್ಲಿ ಸಾಕಷ್ಟು ಉತ್ತುಂಗಕ್ಕೆ ಹೋಗಬೇಕು ಎಂಬ ಕನಸು ಕಂಡಿದ್ದೇನೆ. ನನ್ನ ಸಿನಿಮಾ ನೋಡಿ ಒಳ್ಳೆಯದು ಕೆಟ್ಟದು ಏನೇ ಇರಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: YSR ಕಾಂಗ್ರೆಸ್​​ ನಾಯಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ.. ತುಟಿ ಬಿಚ್ಚದ DCM ಪವನ್​​ ವಿರುದ್ಧ ಭಾರೀ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment