newsfirstkannada.com

6 ದಿನದ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದ ನಿವೇದಿತಾ, ಚಂದನ್​​.. ಡಿವೋರ್ಸ್​ಗೆ ಕಾರಣ ಇದೇನಾ?

Share :

Published June 7, 2024 at 4:27pm

  ಸಖತ್​ ಹಾಟ್​​ ಆಗಿ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಬದುಕಿನಲ್ಲಿ ಆಗಿದ್ದೇನು?  

  ಬಿಗ್​ಬಾಸ್​ ಸೀಸನ್​ 5ಕ್ಕೆ ಎಂಟ್ರಿ ಕೊಟ್ಟಿದ್ದ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ

  ಮದುವೆಯಾಗಿ 4 ವರ್ಷದ ಬಳಿಕ ಈ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮುಡಿದ್ದೇಕೆ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 5ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದರು ನಿವೇದಿತಾ ಗೌಡ. ಅಂದಿನಿಂದ ಇಂದಿನವರೆಗೂ ನಿವೇದಿತಾ ಗೌಡ ಸಖತ್​​ ಸುದ್ದಿಯಲ್ಲಿ ಇದ್ದಾರೆ. ಬಿಗ್​ಬಾಸ್​ ಸೀಸನ್​ 5ಕ್ಕೆ ಕನ್ನಡ ರಾಪರ್, ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ: BREAKING: ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು; ಅಸಲಿಗೆ ಆಗಿದ್ದೇನು?

ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಬಳಿಕ ಈ ಇಬ್ಬರು ತುಂಬಾ ಆತ್ಮೀಯರಾಗಿ ಇದ್ದರು. ಜೊತೆಗೆ ಇರುತ್ತಿದ್ದರು. ಎಲ್ಲ ರೀತಿಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹೀಗಾಗಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರಲ್ಲಿ ದಿನ ಕಳೆದಂತೆ ಆ ಸ್ನೇಹ ಪ್ರೀತಿಗೆ ತಿರುಗಿತು. ಹೀಗಾಗಿ ಬಿಗ್​ಬಾಸ್ ಶೋನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಪರ್ಧಿಸಿದ್ದರು. ಅಲ್ಲಿಂದಲೇ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಬಿಗ್​ಬಾಸ್ ಶೋ ಮುಕ್ತಾಯಗೊಳ್ಳುತ್ತಿದ್ದಂತೆ 2019ರಂದು ಮೈಸೂರು ದಸರಾ ಈವೆಂಟ್‌ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು.

ಈ ವಿಚಾರ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಂದನ್ ಶೆಟ್ಟಿ ಸಾರ್ವಜನಿಕವಾಗಿ ನಿವೇದಿತಾ ಗೌಡಗೆ ಲವ್ ಪ್ರಪೋಸ್ ಮಾಡಿ ಸಖತ್​ ಕಾಂಟ್ರೋವರ್ಸಿ ಮಾಡಿಕೊಂಡಿದ್ದರು. ಆದರೆ ಇದಾದ ಬಳಿಕ ಈ ಇಬ್ಬರು ಬಹಳ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ 2020ರ ಫೆಬ್ರವರಿ ತಿಂಗಳಿನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಇಬ್ಬರು ಸಖತ್​ ರೀಲ್ಸ್​ ಮಾಡುತ್ತಿದ್ದರು. ಅದರಲ್ಲೂ ನಿವೇದಿತಾ ಗೌಡ ರೀಲ್ಸ್​ ಮಾಡಿ ಸಖತ್​ ಟ್ರೋಲ್​ ಆಗುತ್ತಿದ್ದರು.

ಆದರೆ ಇದೀಗ ಮದುವೆಯಾಗಿ ನಾಲ್ಕು ವರ್ಷದ ಬಳಿಕ ಈ ಇಬ್ಬರು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಈ ಸಂಬಂಧ ವಿಚ್ಛೇದನಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಇನ್ನು ಈ ಮುಂದೆ 6 ದಿನಗಳ ಹಿಂದೆ ಕೂಡ ಖಾಸಗಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಒಟ್ಟಿಗೆ ಸಿನಿಮಾ ಕೂಡ ಮಾಡಿದ್ದರು. ಮೊದಲ ಬಾರಿಗೆ ಕ್ಯಾಂಡಿ ಕ್ರಷ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಆದರೆ ಈ ವಿಚಾರ ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ದಿನದ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದ ನಿವೇದಿತಾ, ಚಂದನ್​​.. ಡಿವೋರ್ಸ್​ಗೆ ಕಾರಣ ಇದೇನಾ?

https://newsfirstlive.com/wp-content/uploads/2024/06/nivedita.jpg

Load More