ದೂರವಾದ ಚಂದನ್​-ನಿವೇದಿತಾ ಜೋಡಿಹಕ್ಕಿ.. ಇವ್ರ ಮೇಲೆ ಯಾರ ಕಣ್ಣು ಬಿತ್ತೋ ಎಂದ ಫ್ಯಾನ್ಸ್!

author-image
AS Harshith
Updated On
ದೂರವಾದ ಚಂದನ್​-ನಿವೇದಿತಾ ಜೋಡಿಹಕ್ಕಿ.. ಇವ್ರ ಮೇಲೆ ಯಾರ ಕಣ್ಣು ಬಿತ್ತೋ ಎಂದ ಫ್ಯಾನ್ಸ್!
Advertisment
  • ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ
  • ಕೈ ಕೈ ಹಿಡಿದುಕೊಂಡು ಕೋರ್ಟ್​ಗೆ ಬಂದ ನಿವ್ವಿ-ಕುಕ್ಕಿ
  • ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದೇವೆ ಎಂದ ಜೋಡಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರೋ ನಿವೇದಿತಾ ಗೌಡ ಹಾಗೂ ಚಂದನ್​​ ಶೆಟ್ಟಿ ಬಾಳಿನ ಗೀತೆ ತಾಳ ತಪ್ಪಿದೆ. ಕೋರ್ಟ್​ ಮೆಟ್ಟಿಲಿನಲ್ಲಿ ನಾಲ್ಕು ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದಿದೆ.

ಐ ಲವ್​ ಯೂ ನಿವಿ.. ಹೀಗೆ ನಾಲ್ಕು ವರ್ಷಗಳ ಹಿಂದೆ ಶುರುವಾಗಿದ್ದ ಇವರಿಬ್ಬರ ಪ್ರೀತಿ ಪಯಣ ಮುರಿದು ಬಿದ್ದಿದೆ. ಯಾವ ಖುಷಿ ಸಂತೋಷದಿಂದ ಏಳು ಹೆಜ್ಜೆ ಇಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರೋ ಅದೇ ಖುಷಿಯಲ್ಲಿ ಇಂದು ಕೈ ಕೈ ಹಿಡಿದು ಬಂದ ಜೋಡಿಯ ಅನುಬಂಧ ಕೋರ್ಟ್​ ಮೆಟ್ಟಿಲಿನಲ್ಲಿ ಕೊನೆಯಾಗಿದೆ.

ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯ ಪ್ರೀತಿ ಡಿವೋರ್ಸ್ ಮೂಲಕ ಅಂತ್ಯಗೊಂಡಿದೆ. ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಶಾಂತಿನಗರದ ಫ್ಯಾಮಿಲಿ ಕೋರ್ಟ್​ನಲ್ಲಿ ಎರಡನೇ ಹೆಚ್ಚುವರಿ ಪ್ರಿನ್ಸಿಪಲ್ ಜಡ್ಜ್ ಮುಂದೆ ಹಾಜರಾಗಿದ್ದ ನಿವ್ವಿ, ಚಂದು ತಮ್ಮ ಮುಂದಿನ ಕೆರಿಯರ್​ಗಾಗಿ ದೂರಾಗ್ತಿರೋದಾಗಿ ಹೇಳಿಕೊಂಡಿದ್ದಾರೆ.

ದೂರಾದ ಜೋಡಿ ಹಕ್ಕಿ!

ಈ ದಿನ, ನಿವೇದಿತಾ ಗೌಡ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು.
- ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ

ಇನ್ನು ಜಡ್ಜ್​ ಮುಂದೆ ಹೇಳಿಕೆ ನೀಡಿದ ಬಳಿಕ ದಂಪತಿ ಕೈ ಕೈ ಹಿಡಿದು ಹೊರ ನಡೆದಿದ್ದಾರೆ. ಅದೇನೆ ಇರಲಿ ಕರ್ನಾಟಕದ ಕ್ಯೂಟ್​ ಕಪಲ್​ ಅಂತಾನೇ ಫೇಮಸ್ ಆಗಿದ್ದ ಚಂದನ್​ ಮತ್ತು ನಿವೇದಿತಾ ಗೌಡ ದೂರವಾಗಿದ್ದಾರೆ. ಈ ವಿಚಾರ ಇಬ್ಬರ ಫ್ಯಾನ್ಸ್​ಗೂ ಶಾಕ್​ ನೀಡಿದ್ದಂತಾಗಿದೆ, ಅನೇಕರು ಈ ಕ್ಯೂಟ್​ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಾಲ್ಕು ವರ್ಷದ ಲವ್​ ಡಿವೋರ್ಸ್​ನಲ್ಲಿ ಎಂಡ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment