newsfirstkannada.com

ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

Share :

Published June 8, 2024 at 8:02pm

  ಚಂದನ್, ನಿವೇದಿತಾ ಡಿವೋರ್ಸ್ ಸುದ್ದಿ ಕೇಳಿ ಅಭಿಮಾನಿಗಳು ಶಾಕ್!

  ಡಿವೋರ್ಸ್ ಬಳಿಕವೂ ಇಬ್ಬರು ಒಟ್ಟಿಗೆ ನಟಿಸ್ತಾರಾ ಅನ್ನೋ ಬಗ್ಗೆ ಆತಂಕ

  ಒಂದು ವರ್ಷದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು ಎಂದ ವಕೀಲೆ

ಚಂದನವನದ ಚಂದದ ಜೋಡಿ ಚಂದನ್ ಮತ್ತು ನಿವೇದಿತಾ. ಆದ್ರೆ, ಈ ಕ್ಯೂಟ್ ಜೋಡಿ ಈಗ ನಾನೊಂದು ತೀರ ನೀನೊಂದು ತೀರ ಅಂತ ದೂರ, ದೂರ ಆಗಿದೆ. ಈ ವಿಚಾರ ಇಂಡಸ್ಟ್ರಿ ಮಾತ್ರವಲ್ಲ ಅವರ ಫ್ಯಾನ್ಸ್​ಗೂ ದೊಡ್ಡ ಶಾಕ್ ನೀಡಿದೆ. ಆದ್ರೆ ಯಾವ ಕಾರಣಕ್ಕೆ ಇವರು ದೂರವಾದ್ರೂ ಅನ್ನೋದು ಕೆಲ ಗೊಂದಲಗಳನ್ನ ಸೃಷ್ಟಿ ಮಾಡಿತ್ತು. ಈಗ ಇವರ ಲಾಯರ್​ ಡಿವೋರ್ಸ್​ ಕಾರಣಗಳೇನು ಅನ್ನೋದನ್ನ ಹೇಳಿದ್ದಾರೆ.

ಚಂದನ್ ನಿವೇದಿತಾ ಚಂದನವನದ ಚಂದದ ಜೋಡಿ. ಸ್ಯಾಂಡಲ್​ವುಡ್ ಕ್ಯೂಟ್ ಕಪಲ್​ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರೂ ದೂರ ಆಗಿದ್ರೂ ವಿಚ್ಛೇದನಕ್ಕೆ ಕೊಟ್ಟಿರುವ ಕಾರಣಗಳು ಸ್ವಲ್ಪ ಗೊಂದಲ ಸೃಷ್ಟಿ ಮಾಡಿತ್ತು. ಯಾಕಂದ್ರೆ ಮೂರು ವಾರದ ಹಿಂದಷ್ಟೆ ಚಂದನ್ ನಿವೇದಿತಾ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ರು. ಮೊನೆ ಮೊನ್ನೆಯಷ್ಟೇ ಕೋಟಿ ಸಿನಿಮಾದ ಕಾರ್ಯಕ್ರಮದಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ರು. ಸಡನ್ ಆಗಿ ಇಬ್ಬರು ದೂರ ಆಗ್ತಾರೆ ಅನ್ನೋದು ದೊಡ್ಡ ಶಾಕ್ ನೀಡಿತ್ತು. ಶುಕ್ರವಾರ ಶಾಂತಿನಗರದ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ಡಿವೋರ್ಸ್ ನೀಡಿದೆ.

ಇದನ್ನೂ  ಓದಿ: 6 ತಿಂಗಳ ಹಿಂದೆಯೇ ಡಿವೋರ್ಸ್​ಗೆ ನಿರ್ಧಾರ, ರಾಜಿ ಪಂಚಾಯ್ತಿ ಮಾಡಿದ್ರು; ವಕೀಲೆ ಅನಿತಾ ಏನಂದ್ರು ಗೊತ್ತಾ?

ಚಂದನ್ ಮತ್ತು ನಿವೇದಿತಾ ಡಿವೋರ್ಸ್​ ಶಾಕಿಂಗ್ ಆಗಿದೆ. ಇದು ಜನರಿಗೆ ಶಾಕ್ ಅಂತ ಅನಿಸಿದ್ರೂ ಇಬ್ಬರು ಪರಸ್ಪರ ಒಪ್ಪಿಗೆ ಪಡೆದುಕೊಂಡಿದ್ರು. ಅಸಲಿ ವಿಚಾರ ಏನಂದ್ರೆ ಒಂದು ವರ್ಷದ ಹಿಂದೆಯೇ ನಿವೇದಿತಾ ಮತ್ತು ಚಂದನ್​ ಡಿವೋರ್ಸ್ ಪಡೆದುಕೊಳ್ಳುವ ನಿರ್ಧಾರ ಮಾಡಿದ್ರು. ಈ ಒಂದು ವರ್ಷದಲ್ಲಿ ಇಬ್ಬರ ನಡುವಿದ್ದ ಮನಸ್ತಾಪ ಭಿನ್ನಾಬಿಪ್ರಾಯ ಸರಿಪಡಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ರೂ ಯಾವುದೇ ಫಲ ಕಂಡಿಲ್ಲ. ಹೀಗಾಗಿ ಯಾವುದು ಆಗದೇ ಇದ್ದಾಗ ಒಪ್ಪಿಗೆ ಮೇರೆಗೆ ದೂರು ಆಗೋದು ಒಳ್ಳೆಯದು ಅಂದುಕೊಂಡು ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಬೇರೆಯಾಗಿದ್ದಾರೆ. ಚಂದನ್ ನಿವೇದಿತಾ ಪ್ರೀತಿಸಿ ಕುಟುಂಬಸ್ಥರ ಸಮ್ಮುಖದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ದೂರಾಗೋ ಸಮಯದಲ್ಲಿ ಕುಟುಂಬಸ್ಥರ ಪಾತ್ರವೂ ಮುಖ್ಯವಾಗಿರುತ್ತೆ. ಹೀಗಾಗಿ ಎರಡು ಕುಟುಂಬದವರ ಇಬ್ಬರನ್ನ ಕೂರಿಸಿ ಮಾತುಕತೆ ಕೂಡ ನಡೆಸಿದ್ದರೂ. ದೂರ ಆಗೋ ಮುನ್ನ ಒಮ್ಮೆ ಯೋಚನೆ ಮಾಡುವಂತೆ ಹೇಳಿದ್ರು. ಆದ್ರ ನಿವೇದಿತಾ ಚಂದನ್ ನಿರ್ಧಾರ ಮಾಡಿ ಆಗಿತ್ತು. ಅದ್ರಂತೆ ತಮ್ಮ ನಿರ್ಧಾರದಂತೆ ನಾನೊಂದು ತೀರ ನೀನೊಂದು ತೀರ ಅಂತ ದೂರ ಆಗಿದ್ದಾರೆ.

ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ! ಡಿವೋರ್ಸ್​​ಗೆ ಏನೆಲ್ಲ ಕಾರಣ?

ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ವು. ಹೀಗಾಗಿ ಚಂದನ್ ಮತ್ತು ನಿವೇದಿತಾ ನಡುವೆ ಹೊಂದಾಣಿಕಯೂ ಮಿಸ್ ಆಗಿತ್ತು. ಇಬ್ಬರಿಗೂ ಅವರದೇ ಆದ ಐಡಿಯಾಗಳು ಥಾಟ್ಸ್ ಇರೋ ಕಾರಣ ಅವ್ಯಾವು ಮ್ಯಾಚ್ ಆಗಿಲ್ಲ. ಇದೇ ಕಾರಣಕ್ಕೆ ಇಬ್ಬರು ಬೇರೆ ಬೇರೆಯಾಗಿದ್ದರಂತೆ. ಚಂದನ್ ಮತ್ತು ನಿವೇದಿತಾ ಡಿವೋರ್ಸ್ ಸುದ್ದಿ ಹಲ್ ಚಲ್ ಎಬ್ಬಿಸುತ್ತಿದ್ದಂತೆ ಇಬ್ಬರು ಮಗು ವಿಚಾರಕ್ಕೆ ದೂರ ಆಗಿದ್ದಾರೆ ಅಂತಲೇ ಹೇಳಲಾಗಿತ್ತು. ಚಂದನ್​ಗೆ ಮಗು ಮಾಡಿಕೊಳ್ಳುವ ಆಸೆಯಿದ್ರೂ ನಿವೇದಿತಾ ಬೇಡ ಅಂದಿದ್ರು ಎನ್ನಲಾಗಿತ್ತು. ಆದ್ರೆ ಈಗ ಲಾಯರ್ ವಿಚ್ಚೇಧನಕ್ಕೆ ಅಸಲಿ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.

ಲಾಯರ್ ಹೇಳುವಂತೆ ಚಂದನ್​ ಮತ್ತು ನಿವೇದಿತಾ ಭವಿಷ್ಯದ ದೃಷ್ಟಿಯಿಂದ ಮಾತ್ರ ಬೇರೆಯಾಗಿರೋದು ಹೊರತು ಗಂಭೀರವಾದಂತ ಕಾರಣಗಳು ಯಾವುದು ಇಲ್ಲ. ಚಿಕ್ಕ ಚಿಕ್ಕ ಮನಸ್ತಾಪಗಳಿದ್ದ ಕಾರಣ ಅವುಗಳು ಮುಂದೆ ದೊಡ್ಡದಾಗುವುದು ಬೇಡ ಅನ್ನೋ ಕಾರಣಕ್ಕೆ ಈಗಲೇ ನಿರ್ಧಾರ ಮಾಡಿದ್ದಾರೆ ಅನ್ನೋದ ಲಾಯರ್ ಮಾತು. ಯಾಕಂದ್ರೆ ಸಾಮಾನ್ಯವಾಗಿ ವಿಚ್ಛೇದನ ಅಂದ್ರೆ ವರ್ಷಗಟ್ಟಲೇ ಕಾಯಬೇಕು. ಅದು ಇದು ಅಂತ ತಿರುಗಬೇಕು. ಈ ಕಿರಿಕಿರಿಗಳು ಬೇಡ ಅಂತ ಇಬ್ಬರು ಪರಸ್ಪರ ಒಪ್ಪಿ ಡಿವೋರ್ಸ್ ಪಡೆದಿದ್ದಾರೆ. ಒಂದ್ಕಡೆ ಚಂದನ್ ನಿವೇದಿತಾ ಡಿವೋರ್ಸ್ ವಿಚಾರ ಶಾಕಿಂಗ್ ಆಗಿದ್ರೆ. ಒಂದೇ ದಿನದಲ್ಲಿ ಹೇಗೆ ಡಿವೋರ್ಸ್ ಸಿಕ್ತು ಅನ್ನೋದು ಹಲವರನ್ನ ಶಾಕ್​ಗೊಳಿಸಿದೆ.

ಇದನ್ನೂ  ಓದಿ: ಚಂದನ್ ಶೆಟ್ಟಿಗೆ ಆ ವಿಡಿಯೋ ಕಳುಹಿಸ್ತೀನಿ -ಇಬ್ಬರೂ ಒಂದಾಗುವ ಬಗ್ಗೆ ಮಾತಾಡಿದ ಪ್ರಥಮ್..!

ಯಾಕಂದ್ರೆ ಗಂಡ ಹೆಂಡತಿ ದೂರ ಆಗ್ಬೇಕಾದ್ರೆ ನೂರೆಂಟು ತಾಪತ್ರಯಗಳ ಬಗ್ಗೆ ಕೇಳಿಯೇ ಇರ್ತಿರಾ. ಆದ್ರೆ ಚಂದನ್ ಮತ್ತು ನಿವೇದಿತಾಗೆ ಒಂದೇ ದಿನಕ್ಕೆ ಹೇಗೆ ವಿಚ್ಛೇದನ ಸಿಕ್ತು ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಚಂದನ್ ನಿವೇದಿತಾ ಈಗಾಗಲೇ ಕ್ಯಾಂಡಿ ಕ್ರಶ್ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸ್ತಿದ್ದಾರೆ. ಈ ಸಿನಿಮಾ ಮುಕ್ಕಾಲು ಭಾಗ ಶೂಟಿಂಗ್ ಕೂಡ ಮುಗಿದು ಹೋಗಿದೆ. ಹೀಗಾಗಿ ಈ ಸಿನಿಮಾ ಏನಾಗುತ್ತೆ? ಡಿವೋರ್ಸ್ ಬಳಿಕವೂ ಇಬ್ಬರು ಒಟ್ಟಿಗೆ ನಟಿಸ್ತಾರಾ ಅನ್ನೋ ಆತಂಕ ನಿರ್ದೇಶಕರಿಗೆ ಕಾಡಿತ್ತು. ಆದ್ರೆ ಈ ಬಗ್ಗೆ ಇಬ್ಬರು ಕೂಡ ನಿರ್ದೇಶಕರ ಜೊತೆ ಮಾತನಾಡಿದ್ದು ಸಿನಿಮಾ ಪೂರ್ತಿ ಮಾಡಿಕೊಡುವುದಾಗಿ ಹೇಳಿದ್ದಾರಂತೆ. ಈ ಸಿನಿಮಾದ ಶೂಟಿಂಗ್ ವೇಳೆ ಮತ್ತೆ ಇಬ್ಬರು ಮುಖಾಮುಖಿ ಆಗಿ ಒಟ್ಟಿಗೆ ಅಭಿನಯಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್‌.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?

https://newsfirstlive.com/wp-content/uploads/2024/06/chandan4.jpg

Load More