‘ಎಷ್ಟು ದಿನ ಮಾನಸಿಕ ನೋವು ಅನುಭವಿಸೋದು’- ಡಿವೋರ್ಸ್​ಗೆ ಅಸಲಿ ಕಾರಣ ಬಿಚ್ಚಿಟ್ಟ ಚಂದನ್​​

author-image
Ganesh Nachikethu
Updated On
ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್​​ ಕುರಿತು ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ
Advertisment
  • ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್..!
  • ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಸುಂದರ ಜೋಡಿ
  • ಡಿವೋರ್ಸ್​ಗೆ ಮತ್ತೆ ಸ್ಪಷ್ಟನೆ ಕೊಟ್ಟ ಗಾಯಕ ಚಂದನ್​ ಶೆಟ್ಟಿ, ನಿವೇದಿತಾ ಗೌಡ!

ಇತ್ತೀಚೆಗಷ್ಟೇ ಬಿಗ್‌ಬಾಸ್‌ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಡಿವೋರ್ಸ್​ ಮಾಡಿಕೊಂಡಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರ ಡಿವೋರ್ಸ್​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವು ವದಂತಿಗಳು ಹಬ್ಬಿದ್ದವು. ಇದರ ಬಗ್ಗೆ ಇಬ್ಬರು ಒಟ್ಟಿಗೆ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದಲೇ ಡಿವೋರ್ಸ್​ ಮಾಡಿಕೊಂಡಿದ್ದೇವೆ. ಮದುವೆ ಆಗೋ ಮುನ್ನ ಇಬ್ಬರ ಆಲೋಚನೆಗಳು ಒಂದೇ ರೀತಿ ಇದ್ದವು. ಮ್ಯಾರೇಜ್​ ಬಳಿಕ ನಮ್ಮಿಬ್ಬರ ಆಲೋಚನೆಗಳು ಬೆಳೆಯುತ್ತಾ ಹೋದವು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾಯ್ತು. ಎಷ್ಟು ದಿನ ಎಂದು ಹೊಂದಾಣಿಕೆ ಮಾಡಿಕೊಂಡು ಮಾನಸಿಕವಾಗಿ ನೋವು ಅನುಭವಿಸಲು ಸಾಧ್ಯ ಎಂದು ಬೇರೆಯಾದವು ಎಂದರು.

ಸುಮಾರು 4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment