newsfirstkannada.com

ಕೊನೆ ಬಾರಿ ತಮ್ಮ ಲವ್​ ಸ್ಟೋರಿ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ ಚಂದನ್​​, ನಿವೇದಿತಾ..!

Share :

Published June 7, 2024 at 4:16pm

Update June 7, 2024 at 4:44pm

  ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್..!

  ಮದುವೆ ಆಗಿ 4 ವರ್ಷಗಳ ಬಳಿಕ ಡಿವೋರ್ಸ್​ ಮಾಡಿಕೊಂಡ ಸುಂದರ ಜೋಡಿ

  ಬಿಗ್​ಬಾಸ್​ ಮನೆಯಲ್ಲಿ ಇಬ್ಬರು ಮಧ್ಯೆ ಲವ್​ ಶುರುವಾಗಿದ್ದು ಹೇಗೆ ಗೊತ್ತಾ?

ಬರೋಬ್ಬರಿ 4 ವರ್ಷಗಳ ಬಳಿಕ ಬಿಗ್​ಬಾಸ್​ ಖ್ಯಾತಿಯ ಗಾಯಕ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಡಿವೋರ್ಸ್​ ಮಾಡಿಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್​ ಸುದ್ದಿ ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್​ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಇಬ್ಬರು ಮಧ್ಯೆ ಲವ್​ ಆಗಿದ್ದು ಹೇಗೆ?

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರು ಬಿಗ್​ಬಾಸ್​ ಸ್ನೇಹಿತರು. ಬಿಗ್​ಬಾಸ್​​ನಿಂದ ಶುರುವಾದ ಪ್ರೀತಿ ಮದುವೆ ಹಂತಕ್ಕೆ ಬಂದು 4 ವರ್ಷಗಳ ಸಂಸಾರವು ಮಾಡಿದ್ರು. ಚಂದನ್ ಶೆಟ್ಟಿ 2019ರಲ್ಲಿ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್ ಸಾಂಗ್ ಹಾಡಿದ ಬಳಿಕ ನಿವೇದಿತಾಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಇದು ಭಾರೀ ವಿವಾದಕ್ಕೆ ಒಳಗಾಗಿತ್ತು.

ಇದಾದ ಬಳಿಕ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆ್ಯಕ್ಟೀವ್​ ಆಗಿದ್ರು. ಚಂದನ್​​, ನಿವೇದಿತಾ ಇಬ್ಬರು ರೀಲ್ಸ್​ ಮಾಡಿ ಪೋಸ್ಟ್​ ಮಾಡಿದ್ರೆ ಸೋಷಿಯಲ್​ ಮೀಡಿಯಾದಲ್ಲಿ ಸಾವಿರಾರು ಲೈಕ್ಸ್​ ಲಕ್ಷಗಟ್ಟಲೇ ವೀವ್ಸ್​ ಬರೋದು. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರಾಜಾ ರಾಣಿ ಸೀಸನ್​ ಒಂದರಲ್ಲೂ ಕಾಣಿಸಿಕೊಂಡಿದ್ರು. ಅಲ್ಲೇ ಪ್ರಪೋಸ್ ಕಾಂಟ್ರವರ್ಸಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು.

2020ರಲ್ಲಿ ಮದುವೆ ಆಗಿದ್ದ ಜೋಡಿ

4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು.

ಇದನ್ನೂ ಓದಿ: BREAKING: ಚಂದನ್ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು; ಅಸಲಿಗೆ ಆಗಿದ್ದೇನು?

ಕೊನೆ ಬಾರಿ ತಮ್ಮ ಲವ್​ ಸ್ಟೋರಿ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ ಚಂದನ್​​, ನಿವೇದಿತಾ..!

https://newsfirstlive.com/wp-content/uploads/2024/06/chandan-shetty3.jpg

Load More