/newsfirstlive-kannada/media/post_attachments/wp-content/uploads/2024/09/niveditha-gowda.jpg)
ಬಿಗ್‌ಬಾಸ್ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಖ್ಯಾತಿಯ ನಿವೇದಿತಾ ಗೌಡ ದಿನದಿಂದ ದಿನಕ್ಕೆ ಸಖತ್ ಆಗಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತದೆ. ಚಂದನ್​ ಶೆಟ್ಟಿಗೆ ಡಿವೋರ್ಸ್ ನೀಡಿದ ಬಳಿಕವೂ ಹಾಟ್ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತಾರೆ.
/newsfirstlive-kannada/media/post_attachments/wp-content/uploads/2024/09/niveditha-gowda-1.jpg)
ಬಿಗ್​ಬಾಸ್, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡು ಆಗಾಗ ನಿವೇದಿತಾ ಗೌಡ ಸುದ್ದಿಯಲ್ಲಿ ಇರುತ್ತಿದ್ದರು. ಅದರಲ್ಲೂ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಸ್​ ಹಾಗೂ ವಿಡಿಯೋಸ್​ ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಗಾಯಕ ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟ ಬಳಿಕವಂತೂ ಸಾಕಷ್ಟು ಸದ್ದು ಮಾಡುತ್ತಿದ್ದ ನಿವೇದಿತಾ ಅವರು ಇದೀಗ ಹೊರ ಹಾಟ್​ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ನಿವೇದಿತಾ ಗೌಡ ಅವರು ತುಂಡು ಮಿಡ್ಡಿಯಲ್ಲಿ ಫೇಮಸ್​ ಇಂಗ್ಲಿಷ್ ಸಾಂಗ್​ಗೆ​ ಸೊಂಟ ಬಳುಕಿಸಿದ್ದಾರೆ. ಅದೇ ವಿಡಿಯೋ ನೋಡಿದ ನಿವೇದಿತಾ ಗೌಡ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ನಿವ್ವಿ ಅಕ್ಕ ನೀವು ಈ ರೀತಿ ಬಟ್ಟೆ ಹಾಕಿ ರೀಲ್ಸ್​ ಮಾಡಬೇಡಿ, ಈ ಲುಕ್​ನಲ್ಲಿ ನಿಮ್ಮನ್ನು ನೋಡೋದಕ್ಕೆ ಆಗೋದಿಲ್ಲ ಪ್ಲೀಸ್​​ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಇನ್ನೂ ಕೆಲವರು ಏನ್​ ಇಷ್ಟು ಆ್ಯಕ್ವೀವ್ ಆಗಿದ್ದೀರಿ, ಬರೀ ಬಾತ್​ ರೂಂನಲ್ಲೆ ರೀಲ್ಸ್​ ಮಾಡ್ತಿರಲ್ಲಾ, ಸ್ವಲ್ಪ ಬಾತ್​ ರೂಂನಿಂದ ಆಚೆ ಬಾರಮ್ಮ, ಏನಾದ್ರೂ ಗುಡ್​ ನ್ಯೂಸ್​ ಇದೆಯಾ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us