newsfirstkannada.com

ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!

Share :

Published June 20, 2024 at 6:53am

Update June 20, 2024 at 6:54am

  ಮ್ಯೂಸಿಕ್ ಜೊತೆ ನಟನೆಗೂ ಇಳಿದ ಚಂದನ್ ಶೆಟ್ಟಿ

  ಜುಲೈ 19ಕ್ಕೆ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ರಿಲೀಸ್

  ಌಕ್ಟಿಂಗ್​ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದ ಚಂದನ್ ಶೆಟ್ಟಿ

ಚಂದನವನದ ಕ್ಯೂಟ್​ ಜೋಡಿ.. ಮಾಡ್ರನ್ ಪ್ರೇಮಿಗಳಿಗೆ ರೋಲ್ ಮಾಡೆಲ್ ಆಗಿದ್ದ ಚಂದನ್ ಶೆಟ್ಟಿ- ನಿವೇದಿತಾ ಜೋಡಿ‌ ಥಟ್ ಅಂತ ದೂರಾಗಿ ಎಲ್ಲರಿಗೂ ಶಾಕಿಂಗ್ ಸುದ್ದಿ ಕೊಟ್ಟಿದ್ರು. ಈ ಜೋಡಿ ಅಫಿಶಿಯಲ್ಲಾಗಿ ವಿಚ್ಛೇದನ ಕೂಡ ಪಡೆದಿದ್ರು. ಆದ್ರೆ ವಿಚ್ಛೇದನದ ಬಳಿಕವೂ ನಾವು ಕ್ಲೋಸ್ ಫ್ರೆಂಡ್ಸ್ ಆಗಿಯೇ ಇರ್ತೀವಿ ಅನ್ನೋದನ್ನ ಮತ್ತೆ ಮತ್ತೆ ಈ ಜೋಡಿ ಪ್ರೂವ್ ಮಾಡ್ತಿದೆ.

ನಿಜಕ್ಕೂ ಇಂಥದ್ದೊಂದು ಜೋಡಿ ಇಷ್ಟು ಬೇಗ ದೂರಾಗುತ್ತೆ ಅಂತ ಯಾರೂ ಕನಸು-ಮನಸ್ಸಲ್ಲೂ ಊಹಿಸಿರಲಿಲ್ಲ. ಇಷ್ಟು ಮುದ್ದಾಗಿದ್ದ ಈ ಜೋಡಿ ಯಾಕಾದ್ರೂ ದೂರಾಗ್ತಿದೆಯೋ ಅಂತ ಮರುಗಿದವ್ರೇ ಜಾಸ್ತಿ. ಅಷ್ಟರ ಮಟ್ಟಿಗೆ ಖುಷಿಯಾಗಿದ್ದ ಶೆಟ್ಟಿ – ನಿವಿ ಜೋಡಿ. ತಾವು ದೂರಾಗ್ತಿರೋ ಕಾರಣವನ್ನ ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟಪಡಿಸಿದ್ರು.

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ಡಿವೋರ್ಸ್ ವಿಚಾರ ಬಂದಾಗ ಗಂಡ-ಹೆಂಡತಿ ಮಧ್ಯೆ ಕೆಸರೆರಚಾಟ ಕಾಮನ್‌. ಗಂಡ ಹೆಂಡ್ತಿ ಮೇಲೆ ಕಂಪ್ಲೆಂಟ್ ಮಾಡೋದು. ಹೆಂಡ್ತಿ ಗಂಡನ್ ಮೇಲೆ ಕಂಪ್ಲೆಂಟ್ ಮಾಡೋದು ಸಾಮಾನ್ಯ. ಅದರಲ್ಲೂ ಕೆಲವು ಜೋಡಿಗಳು ವಿಚ್ಛೇದನ ಪಡೆಯುವ ಮುಂಚೆ ಒಬ್ಬರನ್ನೊಬ್ಬರು ಕಂಡ್ರೆ ಹಾವು-ಮುಂಗುಸಿಯಂತೆ ಆಡೋರು ಆಮೇಲೆ ನೀನ್ಯಾರೋ ನಾನ್ಯಾರೋ ಅಂತ ದೂರಾಗ್ತಾರೆ. ಆದ್ರೆ ಈ ಜೋಡಿ ವಿಚ್ಛೇದನ ಪಡೆದ ಪರಿಯನ್ನ ಮೆಚ್ಚಲೇಬೇಕು. ಯಾಕೆಂದ್ರೆ ಇಬ್ಬರಿಬ್ಬರೂ ಎಲ್ಲಿಯೂ ಒಬ್ಬರಿಗೊಬ್ಬರು ಗ್ರೇಟ್ ಅಂದ್ಕೊಂಡು ಕಿತ್ತಾಟ ನಡೆಸ್ಲಿಲ್ಲ. ಬೀದಿ ರಂಪ ಮಾಡ್ಲಿಲ್ಲ. ತುಂಬಾ ಮೆಚ್ಯೂರ್ ಆಗಿ ಪರಸ್ಪರ ಗೌರವಾಧಾರದಿಂದ ದೂರವಾದ್ರು.

ಇದನ್ನೂ ಓದಿ:ಶವ ಬಿಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಡಾಟ.. ಎಣ್ಣೆ ಪಾರ್ಟಿ..!

ಮ್ಯೂಸಿಕ್ ಜೊತೆ ನಟನೆಗೂ ಇಳಿದ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಈಗಾಗಲೇ ಱಪರ್ ಆಗಿ ಗುಡುತಿಸಿಕೊಂಡಿದ್ದಾರೆ. ಈ ಮಧ್ಯೆ ವಿಚ್ಚೇದನ ಬಳಿಕ ಌಕ್ಟಿಂಗ್​ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿನಿಮಾ ವೇದಿಕೆಯಲ್ಲಿ ಸಿಕ್ಕಿದ್ದ ಚಂದನ್ ಶೆಟ್ಟಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡ್ರು. ನಾನು-ನಿವಿ ನಾಲ್ಕು ವರ್ಷ ಜರ್ನಿ ಮಾಡಿದ್ದೀನಿ. ನಾವು ದೂರಾಗ್ತಿರೋದು ನಮ್ಮಲ್ಲಿಯೂ ಬೇಜಾರಿದೆ.‌ ಆದ್ರೆ ಭಿನ್ನಾಭಿಪ್ರಾಯಗಳು ಇದ್ದಾಗ ತುಂಬಾ ಕಷ್ಟ ಪಟ್ಟು ಜೀವನ ಸಾಗಿಸೋದು ಸರಿಯಲ್ಲ ಅನ್ನಿಸ್ತು, ಆದ್ರಿಂದ ದೂರಾದ್ವಿ ಅನ್ನೋದನ್ನು ತಿಳಿಸಿದ್ರು. ಜೊತೆಗೆ ನಾನು – ನಿವಿ ಈಗಲೂ ಗುಡ್ ಫ್ರೆಂಡ್ಸ್ ಅನ್ನೋದನ್ನು ಪುನರುಚ್ಛರಿಸಿದ್ದಾರೆ.

ನಿವಿ ಸಿನಿಮಾ ಭವಿಷ್ಯದ ಮೇಲೆ ಕನಸು ಕಂಡಿದ್ದ ಚಂದನ್, ನಿವೇದಿತಾ ಸಿನಿಮಾ ಜರ್ನಿಗೆ ಹಾರೈಸೋದ್ರ ಜೊತೆಗೆ ತಮ್ಮ ಸಿನಿಮಾದ ಹಾದಿಯ ಬಗ್ಗೆಯೂ ಕ್ಲಾರಿಟಿ ಇಟ್ಕೊಂಡಿದ್ದಾರೆ. ಸದ್ಯಕ್ಕೆ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್​​ಗಳಲ್ಲಿ ಚಂದನ್ ಶೆಟ್ಟಿ ಬ್ಯುಸಿಯಾಗಿದ್ದು, ನಾಯಕನಾಗಿ ಗೆಲ್ಲೋ ಸೂಚನೆ ಕೊಡ್ತಿದ್ದಾರೆ.

ಇದನ್ನೂ ಓದಿ:36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!

https://newsfirstlive.com/wp-content/uploads/2024/06/chandan-shetty1-1.jpg

Load More