newsfirstkannada.com

ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್​​ ಕುರಿತು ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ

Share :

Published June 10, 2024 at 4:15pm

  ಬೇರೆ ಬೇರೆಯಾಗಿ ಮಾಧ್ಯಮಗೋಷ್ಠಿಗೆ ಬಂದ ಚಂದನ್, ನಿವೇದಿತಾ

  ಈಗಾಗಲೇ ಮನಸಲ್ಲಿ ಬೇಜಾರ್ ಇದೆ, ಇದರಿಂದ ಹೊರ ಬರಬೇಕಿದೆ

  ಡಿವೋರ್ಸ್ ಬಗ್ಗೆ ಕ್ಲಾರಿಟಿ ಕೊಟ್ರಾ ಚಂದನ್ ಶೆಟ್ಟಿ, ನಿವೇದಿತಾ ಗೌಡ?

ಬೆಂಗಳೂರು: ಕ್ಯೂಟ್ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಈಗ ನಾನೊಂದು ತೀರ ನೀನೊಂದು ತೀರವೆಂದು ದೂರ, ದೂರವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಗುಡ್ ಬಾಯ್ ಹೇಳಿರುವ ಈ ಜೋಡಿಯ ವಿಚಾರ ಇಂಡಸ್ಟ್ರಿ ಮಾತ್ರವಲ್ಲ ಫ್ಯಾನ್ಸ್​ಗೂ ಹರ್ಟ್​ ಮಾಡಿತ್ತು. ಆದ್ರೆ ಯಾವ ಕಾರಣಕ್ಕೆ ಇವರು ದೂರವಾದ್ರೂ ಅನ್ನೋದು ಗೊಂದಲಗಳನ್ನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಚಂದನ್ ಶೆಟ್ಟಿ- ನಿವೇದಿತಾ.. ಇಂದು ಸಂಜೆ ಬಿಗ್ ಅಪ್​ಡೇಟ್

ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರ ಮಧ್ಯೆ ಡಿವೋರ್ಸ್​​ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಕುರಿತು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಎಂಎಂಬಿ ಲೆಗಸಿಯಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಮೊದಲು ಮಾತನಾಡಿದ ಚಂದನ್ ಶೆಟ್ಟಿ ಅವರು, ಇಡೀ ಕರ್ನಾಟಕಕ್ಕೆ ನಿಜವಾದ ಮಾಹಿತಿ ಕೊಡೋಕೆ ಈ ಪ್ರೆಸ್​ಮೀಟ್ ಮಾಡುತ್ತಿದ್ದೇವೆ. ಕೋರ್ಟ್ ನಮಗೆ ಈಗಾಗಲೇ ವಿಚ್ಚೇದನ ಕೊಟ್ಟಿದೆ. ಎಲ್ಲರಿಗೂ ಒಂದು ಪ್ರಶ್ನೆ ಕಾಡ್ತಿದೆ. ಅದು ಯಾಕೆ ಈ ಜೋಡಿ ದೂರ ದೂರಾದರು ಅಂತ. ಅದಕ್ಕೆ ಕ್ಲಾರಿಫಿಕೇಷನ್ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಕೊಡಲಾಗಿದೆ. ಕೆಲವರು ಬೇಡದ ವಿಚಾರ ಸೃಷ್ಟಿ ಮಾಡಿ ಹಂಚುತ್ತಿದ್ದಾರೆ. ಇದಕ್ಕೆ ಕ್ಲಾರಿಟಿ ಈಗ ಜೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: MS ಧೋನಿಯನ್ನ ಹೊಗಳಿದ ರಿಷಬ್​ ಪಂತ್.. ಯಂಗ್ ಪ್ಲೇಯರ್ ಬಗ್ಗೆ ನಾಯಕ ರೋಹಿತ್ ಬೇಜಾರ್ ಆದ್ರಾ?

ನಾನು ಬೆಳೆದ ರೀತಿನೇ ಬೇರೆ. ನಾನು – ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರೋ ರೀತಿನೇ ಬೇರೆ ಇದೆ. ಇಬ್ಬರ ಜೀವನ ಶೈಲಿ ಬೇರೆ ಇದೆ. ಇದು ವರ್ಷಗಳು ಕಳೆದರೂ ಹೊಂದಾಣಿಕೆ ಆಗಲಿಲ್ಲ. ಈ ಕಾರಣಕ್ಕಾಗಿಯೇ ಮುಂದಾಗಿದ್ದೇವೆ. ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಯಾವುದು ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ, ವಿಚ್ಚೇದನ ಬೇಕಿತ್ತು. ಈ ಕಾರಣಕ್ಕೆ ನಾವು ಈಗ ದೂರ ದೂರ ಆಗಿದ್ದೇವೆ. ಇಬ್ಬರು ಮಾತನಾಡಿಕೊಂಡು, ಒಪ್ಪಿಕೊಂಡು ಒಮ್ಮತದಿಂದಲೇ ಬೇರೆ ಬೇರೆ ಆಗಿದ್ದೇವೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್​​ ಕುರಿತು ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ

https://newsfirstlive.com/wp-content/uploads/2024/06/CHANDAN_SHETTY_VINEDITHA_4.jpg

Load More