/newsfirstlive-kannada/media/post_attachments/wp-content/uploads/2025/06/rcb28.jpg)
ಕಣ್ಣೇದುರೆ ಪ್ರಾಣ ಹೋಗ್ತಿದ್ರು ಅಭಿಮಾನಿಗಳು ಜೈ RCB ಅಂತಿದ್ರು ಎಂದು ಗಾಯಕ ಚಂದನ್ ಶೆಟ್ಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಿನ್ನೆ ಆರ್ಸಿಬಿ 18 ವರ್ಷದ ಸಂಭ್ರಮೋತ್ಸವ ಕಣ್ತುಂಬಿಕೊಳ್ಳಲು ಗಾಯಕ, ನಟ ಚಂದನ್ ಶೆಟ್ಟಿ ಕೂಡ ಚಿನ್ನಸ್ವಾಮಿ ಮೈದಾನಕ್ಕೆ ಹೋಗಿದ್ದರು.
ಇದನ್ನೂ ಓದಿ: RCB ವಿಜಯೋತ್ಸವ, ಪ್ರಾಣ ಬಿಟ್ಟ ಅಭಿಮಾನಿಗಳು.. ಮಾತೇ ಬರ್ತಿಲ್ಲ, ವಿರಾಟ್ ಕೊಹ್ಲಿ ಸಂತಾಪ!
ಈ ವೇಳೆ ನಟ ಚಂದನ್ ಶೆಟ್ಟಿ ತಮಗಾದ ಅನುಭವದ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ್ದಾರೆ. ಟ್ರಾಫಿಕ್ ಇದ್ದಿದ್ರಿಂದ ಜೆ.ಸಿ ರಸ್ತೆಯಿಂದ ಚಿನ್ನಸ್ವಾಮಿಗೆ ನಡೆದುಕೊಂಡು ಹೋಗಿದ್ದೆ. ನಂ.3ನಲ್ಲಿ ಚಂದನ್ಗೆ ಎಂಟ್ರಿ ಸಿಕ್ಕಿತ್ತು. ಆದ್ರೆ ಅತಿಯಾದ ಜನರು ಇದ್ದುದ್ದರಿಂದ ಗೇಟ್ ಬಳಿಯೂ ತಲುಪೋಕೆ ಆಗಿಲ್ಲ. ಈ ಮಧ್ಯೆ ಗೇಟ್ ತೆರೆಯದ ಕಾರಣ ನೂಕು ನುಗ್ಗಲು ಜಾಸ್ತಿ ಆಯ್ತು. ಉಸಿರಾಟದ ತೊಂದರೆಯಿಂದ ಸಾಕಷ್ಟು ಮಂದಿ ಕೆಳಗೆ ಬಿದ್ದಿದ್ರು. ನನ್ನ ಕಣ್ಣೆದುರು ಹುಡುಗಿ ಒಬ್ಬಳನ್ನು ತುಳಿದುಕೊಂಡು ಹೋಗ್ತಿದ್ರು. ಯಾರೂ ಸಹಾಯಕ್ಕೆ ಬಾರದ ಸ್ಥಿತಿಯಿತ್ತು. ಕಣ್ಣೆದುರು ಶವ ಸಾಗಿಸ್ತಿದ್ರು. ಆದ್ರೆ ಜನರು ಆರ್ಸಿಬಿಗೆ ಜೈಕಾರ ಹಾಕ್ತಿದ್ರು. ಇಷ್ಟು ಮಟ್ಟದ ಹುಚ್ಚಾಟ ಬೇಡ. ದಯವಿಟ್ಟು ಕ್ರಿಕೆಟ್ ಅನ್ನು ಕ್ರಿಕೆಟ್ ರೀತಿಯಲ್ಲೇ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾಲ್ತುಳಿತ ದುರಂತದಲ್ಲಿ 14 ವರ್ಷದ ಬಾಲಕಿ ದಿವ್ಯಾನ್ಷಿ ಮೃತಪಟ್ಟಿದ್ದಾರೆ. ಯಲಹಂಕ ಕಣ್ಣೂರಿನ ನಿವಾಸಿ ಶಿವಕುಮಾರ್, ಅಶ್ವಿನಿ ದಂಪತಿ ಮಗಳಾದ ದಿವ್ಯಾನ್ಷಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು. ದಿವ್ಯಾನ್ಷಿ ಚಿನ್ನಸ್ವಾಮಿ ಸ್ಟೇಡಿಯಂಗೆ ಚಿಕ್ಕಮ್ಮ ರಚನಾ ಇನ್ನಿಬರ ಜೊತೆ ಬಂದಿದ್ರು. ದಿವಾನ್ಷಿ ಕಾಲ್ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ