ಉಸಿರಾಡೋಕೆ ಆಗಲಿಲ್ಲ.. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್​ ಬಳಿ ತಮಗಾದ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ

author-image
Bheemappa
Updated On
ಉಸಿರಾಡೋಕೆ ಆಗಲಿಲ್ಲ.. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್​ ಬಳಿ ತಮಗಾದ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
Advertisment
  • ಜೀವ ಕಳೆದುಕೊಂಡ ಆ 11 ಜನರಿಗೂ ಎಷ್ಟು ಕಷ್ಟ ಆಗಿರಬಹುದು?
  • ಎರಡು ದಿನ ಬಿಟ್ಟು ಕಾರ್ಯಕ್ರಮ ಆಯೋಜನೆ ಮಾಡಿದ್ರೆ ಚೆನ್ನಾಗಿತ್ತು
  • ಅಲೆದು ಅಲೆದು ಸಾಕಾಯ್ತು, ಕಷ್ಟ ಪಟ್ಟು ಗೇಟ್ ಒಳಗಡೆ ಹೋದೆ

ಬೆಂಗಳೂರು: ಆರ್​ಸಿಬಿ 18 ವರ್ಷದ ಸಂಭ್ರಮೋತ್ಸವ ಕಣ್ತುಂಬಿಕೊಳ್ಳಲು ನಟ, ರ್ಯಾಪರ್ ಚಂದನ್ ಶೆಟ್ಟಿ ಕೂಡ ಚಿನ್ನಸ್ವಾಮಿ ಮೈದಾನಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಆದ ಆತಂಕದ ಅನುಭವದ ಬಗ್ಗೆ ಮಾತನಾಡಿದ್ದಾರೆ.

18 ವರ್ಷದ ನಂತರ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟ್ರೋಫಿ ಗೆದ್ದಿದ್ದಕ್ಕೆ ಇಂದು ಬೆಳಗ್ಗೆಯಿಂದ ತುಂಬಾ ಖುಷಿ ಆಗಿದ್ದೆ. ನಿಜವಾಗಲೂ ನಾನು ಆ ಸಾಗರದಂತೆ ಇರೋ ಜನರ ಮಧ್ಯೆದಿಂದ ಹೋಗಿ ಬಂದೆ. ಮೈದಾನದ ಗೇಟ್​ ನಂಬರ್​ 3ಕ್ಕೆ ಹೋಗಲು ನನಗೆ ಪಾಸ್ ಸಿಕ್ಕಿತ್ತು. ಗೇಟ್​- 3 ಅಲ್ಲ, ಅದರ ಹತ್ತಿರಕ್ಕೂ ಹೋಗೋಕೆ ಆಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವರ್ಷದ ಹಿಂದೆ ಮದುವೆ ಆಗಿದ್ದ ಅಕ್ಷತಾ.. RCB ವಿಜಯೋತ್ಸವದಲ್ಲಿ ಗಂಡನ ಎದುರೇ ಜೀವ ಬಿಟ್ಟಳು

publive-image

ಗೇಟ್​ ನಂಬರ್​ 3ರಲ್ಲಿ ಹೋಗೋಕೆ ಆಗದಿದ್ದಕ್ಕೆ ಹೇಗೋ ಮಾಡಿ ಗೇಟ್​ ನಂಬರ್​- 10ರ ಬಳಿಗೆ ಬಂದೆ. ಅಲ್ಲಿ ಇನ್ನು ಹೆಚ್ಚಿನ ಜನಸಂಖ್ಯೆ ಇದ್ದರು. ಒಂದು ಮೂಮೆಂಟ್​ಗೆ ಉಸಿರಾಡೋಕೆ ನನಗೆ ಕಷ್ಟ ಆಗಿತ್ತು. ಆ 11 ಜೀವಗಳಿಗೂ ಎಷ್ಟೊಂದು ಕಷ್ಟ ಆಗಿರಬಹುದು. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರು ಯಾರಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಜವಾಗಲೂ ತುಂಬಾ ಬೇಸರ ಆಗುತ್ತಿದೆ ಎಂದು ಹೇಳಿದರು.

ನನಗೆ ಗೊತ್ತಿಲ್ಲ. ಈ ಘಟನೆಗೆ ಯಾರೂ ಹೊಣೆ ಎಂದು ಹೇಳುವುದಕ್ಕೆ ಕಷ್ಟ ಆಗುತ್ತದೆ. ಸರಿಯಾಗಿ ವ್ಯವಸ್ಥೆ ಮಾಡಲಿಲ್ವಾ?. 18 ವರ್ಷದ ನಂತರ ಕಪ್ ಬಂದರೆ ಅದರ ಖುಷಿ ಹೀಗಿರುತ್ತಾ ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಎರಡು ದಿನ ಬಿಟ್ಟು ಕಾರ್ಯಕ್ರಮ ಆಯೋಜನೆ ಮಾಡಿದ್ರೆ ಚೆನ್ನಾಗಿತ್ತು. ಪಾಸ್​ಗಳನ್ನು ಹಂಚಿಕೆ ಮಾಡಿ ಮಾಡಬಹುದಿತ್ತು. ಇನ್ನು ಐಸಿಯುನಲ್ಲಿ ಯಾರು ಯಾರು ಇದ್ದರೋ ಅವರೆಲ್ಲರೂ ಬೇಗ ಹುಷಾರ್ ಆಗಿ ಬೇಗ ಬರಲಿ. ಆ 11 ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment