/newsfirstlive-kannada/media/post_attachments/wp-content/uploads/2024/11/Bigg-boss-Chandana-Ananthkrishna.jpg)
ಲಕ್ಷ್ಮೀ ನಿವಾಸ ಸೀರಿಯಲ್ ನಟಿ, ಬಿಗ್‌ಬಾಸ್ ಖ್ಯಾತಿಯ ಚಂದನಾ ಅನಂತಕೃಷ್ಣಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದೇ ತಿಂಗಳು ನಟಿ ಚಂದನಾ ಅವರು ಸಪ್ತಪದಿ ತುಳಿಯುತ್ತಿದ್ದಾರೆ.
ಚಂದನಾ ಅನಂತಕೃಷ್ಣ ಅವರು ಬಿಗ್‌ಬಾಸ್ ಸೀಸನ್-7, ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗಳ ಸ್ಪರ್ಧಿ ಆಗಿದ್ದರು. ಹಾಡು ಕರ್ನಾಟಕ ಸಿಂಗಿಂಗ್ ಶೋನಲ್ಲಿ ಚಂದನಾ ಆ್ಯಂಕರ್ ಆಗಿದ್ದರು.
ಇದನ್ನೂ ಓದಿ: ಮತ್ತೆ ಲವ್ನಲ್ಲಿ ಬಿದ್ದ ಶಿಖರ್ ಧವನ್! ವಿದೇಶಿ ಬೆಡಗಿಯೊಂದಿಗೆ ಡೇಟಿಂಗ್..?
ರಾಜಾರಾಣಿ, ಹೂಮಳೆ ಸೀರಿಯಲ್‌ನಲ್ಲಿ ನಟಿಸಿದ್ದ ನಟಿ ಚಂದನಾ ಅವರು ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ಗಾಯನದ ಮೂಲಕವೂ ರಂಜಿಸಿರುವ ನಟಿ ಚಂದನಾ ಅನಂತಕೃಷ್ಣ ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ