/newsfirstlive-kannada/media/post_attachments/wp-content/uploads/2025/02/ARMY_organ_1.jpg)
ಚಂಡೀಗಢ; ಅಪಘಾತದಲ್ಲಿ ನಿಧನ ಹೊಂದಿದ ತನ್ನ ಹದಿಹರೆಯದ ಪುತ್ರನ ಬಹು ಅಂಗಾಂಗಗಳನ್ನ ದಾನ ಮಾಡುವ ಮೂಲಕ ಸೈನಿಕರೊಬ್ಬರು, ಆರು ಜನರ ಬಾಳಿಗೆ ಬೆಳಕಾಗಿದ್ದಾರೆ. ಹರಿಯಾಣದ ಚಂಡಿಮಂದಿರ್ ನಗರದ ಕಮಾಂಡ್ ಆಸ್ಪತ್ರೆಯಲ್ಲಿ ಅಂಗಾಂಗಗಳನ್ನ ದಾನ ಮಾಡಲಾಗಿದೆ.
ಭಾರತ ಸೇನೆಯ ಮಹಾರ್ ರೆಜಿಮೆಂಟ್ನ ಹವಾಲ್ದಾರ್ ನರೇಶ್ ಕುಮಾರ್ ಅವರ ಪುತ್ರ ಅರ್ಷ್ದೀಪ್ ಸಿಂಗ್ ಅಪಘಾತ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದನು. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬ್ರೈನ್ ಡೆಡ್ (Brain Dead) ಆದ ಕಾರಣ ಸಿಂಗ್ ನಿಧನ ಹೊಂದಿದ್ದರು. ಹೀಗಾಗಿ ಹವಾಲ್ದಾರ್ ನರೇಶ್ ಕುಮಾರ್ ಮಗನ ಬಹು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಅರ್ಷ್ದೀಪ್ ಸಿಂಗ್ ದೇಹದ ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ ಮತ್ತು ಕಣ್ಣಿನ ಭಾಗ ಕಾರ್ನಿಯಾ ದಾನ ಮಾಡುವ ಮೂಲಕ ಆರು ಜನರ ಜೀವನಕ್ಕೆ ಬೆಳಕು ಆದಂತೆ ಆಗಿದೆ. ಸದ್ಯ ಯಕೃತ್ತು (liver) ಹಾಗೂ ಮೂತ್ರಪಿಂಡ (Kidney)ವನ್ನ ದೆಹಲಿಯ ಆರ್ಮಿ ಆಸ್ಪತ್ರೆಗೆ ಏರ್‌ಲಿಫ್ಟ್ ಮೂಲಕ ಸಾಗಿಸಲಾಗಿದೆ. ಚಂಡೀಗಢದಲ್ಲಿ ದೀರ್ಘಕಾಲದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ ಕಸಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು.. ಭಾರೀ ವಿರೋಧ
ಹವಾಲ್ದಾರ್ ನರೇಶ್ ಕುಮಾರ್ ಅವರ ತ್ಯಾಗ ಹಾಗೂ ಸೇನೆಯಲ್ಲೂ ಅವರಲ್ಲಿನ ಧೈರ್ಯ ಎಲ್ಲರೂ ಮೆಚ್ಚುವಂತದ್ದು ಆಗಿದೆ. ಸದ್ಯ ಇವರು ಮಾಡಿದ ಕೆಲಸ ಇತರರಿಗೆ ಮಾದರಿಯಾಗಿದೆ. ನಿಸ್ವಾರ್ಥ ಕಾರ್ಯ ಅಂಗಾಂಗ ದಾನ ಅನೇಕರನ್ನು ಉತ್ತೇಜಿಸುತ್ತದೆ. ವೈಯಕ್ತಿಕ ನಷ್ಟದ ನಡುವೆಯೂ ಒಬ್ಬರು ಇತರರ ಜೀವನದಲ್ಲಿ ಬೆಳಕು ತರಬಹುದು ಎಂದು ಅವರು ಸಾಬೀತುಪಡಿಸಿದ್ದಾರೆ ಎಂದು ಎಂದು ಸೇನೆ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ