/newsfirstlive-kannada/media/post_attachments/wp-content/uploads/2023/09/N_CHANDRABABU_NAYDU.jpg)
ಭಾರತದ ಜನಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗಿದ್ದು, ಆತಂಕಕ್ಕೆ ಕಾರಣವಾಗ್ತಿದೆ. ಈ ನಡುವೆ ಆಂಧ್ರ ಪ್ರದೇಶದ ಸಿಎಂ ಅಚ್ಚರಿಯ ಆಫರ್ ಒಂದನ್ನ ಕೊಟ್ಟಿದ್ದಾರೆ. ಜಾಸ್ತಿ ಮಕ್ಕಳು ಮಾಡ್ಕೊಳ್ಳಿ ಅಂತಾ ಕರೆ ಕೊಟ್ಟಿದ್ದಾರೆ. ಅಲ್ಲದೇ ಮಕ್ಕಳು ಮಾಡ್ಕೊಂಡ್ರೆ, ಸರ್ಕಾರದ ಸಪೋರ್ಟ್ ಕೂಡ ಸಿಗಲಿದೆಯಂತೆ. ಮಕ್ಕಳನ್ನ ಮಾಡಿಕೊಳ್ಳಿ, ಮಕ್ಕಳನ್ನ ಮಾಡಿಕೊಳ್ಳಿ ಹೀಗೊಂದು ಧ್ವನಿ ಆಂಧ್ರಪ್ರದೇಶದಲ್ಲಿ ಎದ್ದಿದೆ. ಈ ಧ್ವನಿ ಬೇರೆ ಯಾರದ್ದೂ ಅಲ್ಲ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರದ್ದು
ಭಾರತದ ಹಿತಕ್ಕಾಗಿ ದಂಪತಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು ಅಂತ ಆಂಧ್ರಪ್ರದೇಶ ಸಿಎಂ ಯುವಕರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಹೀಗೆ ಮಕ್ಕಳು ಮಾಡಿಕೊಳ್ಳೋರಿಗೆ ಸರ್ಕಾರದಿಂದ ಒಂದಷ್ಟು ಯೋಜನೆಗಳನ್ನ ನೀಡಲು ಚಿಂತನೆ ನಡೆದಿದೆ ಅಂತಾ ನಾಯ್ಡು ತಿಳಿಸಿದ್ದಾರೆ. ಇನ್ನು, ಹೀಗೆ ಮಕ್ಕಳು ಮಾಡಿಕೊಳ್ಳಿ ಅಂತಿರೋದು ದೇಶದ ಹಿತಕ್ಕಾಗಿಯಂತೆ.
ಜಾಸ್ತಿ ಮಕ್ಕಳು ಮಾಡಿಕೊಳ್ಳಿ, ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಕರೆ
ದಕ್ಷಿಣ ಭಾರತದಲ್ಲಿ ಅದರಲ್ಲೂ ಆಂಧ್ರಪ್ರದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳವಾಗಿದ್ದು, ದಂಪತಿಗಳು 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು.. ಈ ಮೂಲಕ ಯುವಶಕ್ತಿ ದೇಶದಲ್ಲಿ ಹೆಚ್ಚಾಗಬೇಕು ಅನ್ನೋದು ಚಂದ್ರ ಬಾಬು ನಾಯ್ಡು ಅಭಿಪ್ರಾಯ. ದೇಶದ ಅಭಿವೃದ್ಧಿಯಲ್ಲಿ ಯುವಕರು ಪ್ರಮುಖ ಪಾತ್ರ ವಹಿಸ್ತಾರೆ.. ಹಾಗಾಗಿ ರಾಷ್ಟ್ರದ ಹಿತಕ್ಕಾಗಿ ಹೆಚ್ಚು ಮಕ್ಕಳನ್ನು ಹೊಂದಬೇಕು ಅಂತ ಚಂದ್ರಬಾಬು ನಾಯ್ಡು ರಾಜ್ಯದ ಯುವಕರಿಗೆ ಸಲಹೆ ನೀಡಿದ್ದಾರೆ. ಇನ್ನು ಹೀಗೆ ಹೆಚ್ಚು ಮಕ್ಕಳು ಮಾಡಿಕೊಂಡವರಿಗೆ ಸರ್ಕಾರದಿಂದ ಒಂದಷ್ಟು ಲಾಭವೂ ಸಿಗಲಿದೆಯಂತೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅವಕಾಶ ನೀಡಲಾಗುತ್ತೆ. ಅಷ್ಟೇ ಅಲ್ಲದೆ, ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ಪ್ರೋತ್ಸಾಹಧನವನ್ನೂ ಕೊಡಲಾಗುತ್ತೆ. ಅಂತಾ ಸಿಎಂ ನಾಯ್ಡು ಬಹಿರಂಗವಾಗಿ ಹೇಳಿದ್ದಾರೆ.
ಇನ್ನು ಸಿಎಂ ಚಂದ್ರಬಾಬು ನಾಯ್ಡುರ ಇಂಥಾ ಮಾತು ಇದೇ ಮೊದಲೇನಲ್ಲ. 2018ರಲ್ಲೂ ನಾಯ್ಡು ಆಂಧ್ರ ಪ್ರದೇಶದ ಜನರಿಗೆ ಇದೇ ಮಾತನ್ನು ಹೇಳಿದ್ದರು. ಈಗ ದೇಶದ ಹಿತದೃಷ್ಟಿಯಿಂದ ಮತ್ತೆ ತಮ್ಮ ಹೇಳಿಕೆಯನ್ನು, ಕಳಕಳಿಯನ್ನು ಪುನರುಚ್ಛರಿಸಿದ್ದಾರೆ. ಹೆಚ್ಚು ಹೆಚ್ಚು ಮಕ್ಕಳು ಮಾಡಿಕೊಳ್ಳಿ ಅಂತಿದ್ದಾರೆ. ಆದ್ರೆ ಸದ್ಯ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನಾನಾ ಚರ್ಚೆಗೂ ದಾರಿ ಮಾಡಿಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ