/newsfirstlive-kannada/media/post_attachments/wp-content/uploads/2024/06/New-Project.jpg)
ಹೈದರಾಬಾದ್: ದಕ್ಷಿಣ ಭಾರತದ ಧೀಮಂತ ಉದ್ಯಮಿ, ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥ, ರಾಮೋಜಿ ಫಿಲ್ಮ್ ಸಿಟಿಯ ಸೃಷ್ಟಿಕರ್ತ ರಾಮೋಜಿ ರಾವ್ ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಳಗ್ಗೆ ರಾಮೋಜಿ ಫಿಲ್ಮ್ ಸಿಟಿಯಲ್ಲೇ ರಾಮೋಜಿ ರಾವ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಇದನ್ನೂ ಓದಿ:ಲಕ್ಷಾಂತರ ಪತ್ರಕರ್ತರಿಗೆ ಅಕ್ಷರಾಭ್ಯಾಸ ಮಾಡಿಸಿದ ದಾರ್ಶನಿಕ; ರಾಮೋಜಿ ರಾವ್ ಅವರಿಗೆ ನುಡಿ ನಮನ
ರಾಮೋಜಿ ರಾವ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೇರಿದ್ದ ವಿವಿಧ ಕ್ಷೇತ್ರದ ಗಣ್ಯರು, ರಾಮೋಜಿ ರಾವ್ ಅವರ ಅಭಿಮಾನಿಗಳು ಧೀಮಂತ ವ್ಯಕ್ತಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ರಾಮೋಜಿ ರಾವ್ ಅಂತಿಮ ಯಾತ್ರೆಯಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಹೆಗಲು ಕೊಟ್ಟು ನೋವಿನಿಂದ ಹೆಜ್ಜೆ ಹಾಕಿದರು. ರಾಮೋಜಿ ಫಿಲ್ಮ್ ಸಿಟಿಗೆ ಆಗಮಿಸಿದ್ದ ಚಂದ್ರಬಾಬು ನಾಯ್ಡು ಅವರು ರಾಮೋಜಿ ರಾವ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು. ಇದರ ಜೊತೆಗೆ ರಾಮೋಜಿ ರಾವ್ ಅವರ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.
తెలుగు వెలుగు, అక్షర యోధుని అంతిమ సంస్కార కార్యక్రమంలో పాల్గొన్నాను. తెలుగువారి ఆత్మబంధువు రామోజీగారికి కడసారి వీడ్కోలు పలికాను. హృదయం బాధతో నిండిపోయింది. ఈనాడు ఆయన మన మధ్య లేకపోయినా... ఆ మహనీయుడు ఇచ్చిన స్ఫూర్తి మార్గదర్శిగా మనల్ని ముందుకు నడిపిస్తుంది. ఉషాకిరణాల్లాంటి ఆయన… pic.twitter.com/9ZiawYy9yi
— N Chandrababu Naidu (@ncbn)

— N Chandrababu Naidu (@ncbn) June 9, 2024
">June 9, 2024
ರಾಮೋಜಿ ರಾವ್ ಅವರು ಆಂಧ್ರಪ್ರದೇಶಕ್ಕೆ ಜ್ಯೋತಿಯಾಗಿದ್ದರು. ಆತ್ಮೀಯ ರಾಮೋಜಿ ಅವರಿಗೆ ನಾನು ವಿದಾಯ ಹೇಳುತ್ತಾ ಇರುವುದು ನೋವಿನ ಸಂಗತಿ. ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಆ ಮಹಾಪುರುಷ ನೀಡಿದ ಸ್ಫೂರ್ತಿ ನಮ್ಮನ್ನು ಮಾರ್ಗದರ್ಶಿಯಾಗಿ ಮುನ್ನಡೆಸುತ್ತದೆ. ಅವರ ಬದುಕಿನ ವೈಭವವು ಅರುಣೋದಯದ ಕಿರಣಗಳಂತೆ ಶಾಶ್ವತವಾಗಿ ಹೊಳೆಯುತ್ತದೆ ಎಂದು ಚಂದ್ರಬಾಬು ನಾಯ್ಡು ನೋವಿನಿಂದ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ