/newsfirstlive-kannada/media/post_attachments/wp-content/uploads/2025/03/CHANDRAGITRI-TRAIN.jpg)
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ವಿಶ್ವದೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗ್ತಿದೆ. ಮಹಿಳೆಯರ ಪಾಲಿಗೆ ವಿಶೇಷ ದಿನ. ಈ ಸ್ಪೆಷಲ್ ಡೇ ಅಂಗವಾಗಿ ಇಲ್ಲೊಂದು ಸ್ಫೂರ್ತಿದಾಯ ಸ್ಟೋರಿ ಇದೆ. ಅದೆನೆಂದರೆ..
ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಚಂದ್ರಗಿರಿಯಲ್ಲಿ ರೈಲು ನಿಲ್ದಾಣ ಇದೆ. ಅದು ತುಂಬಾನೇ ವಿಶೇಷತೆಯಿಂದ ಕೂಡಿದೆ. ಅಲ್ಲಿ ಇರೋರೆಲ್ಲ ಮಹಿಳಾ ಉದ್ಯೋಗಿಗಳು. ಇಲ್ಲಿರುವ ಮಹಿಳಾ ಸಿಬ್ಬಂದಿ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಆಪರೇಟ್ ಮಾಡ್ತಿದೆ. ರೈಲ್ವೆ ಮಹಿಳಾ ಸಬಲೀಕರಣಕ್ಕೆ ಇದು ಸಾಕ್ಷಿಯಾಗಿದೆ.
ಇದನ್ನೂ ಓದಿ: ನಿದ್ದೆಗಾಗಿ 70% ದಂಪತಿಗಳು ಡಿವೋರ್ಸ್​.. ಅದರಲ್ಲಿ ಭಾರತವೇ ಫಸ್ಟ್; ನಿಮಗೂ ಈ ಸಮಸ್ಯೆ ಇದ್ಯಾ?
/newsfirstlive-kannada/media/post_attachments/wp-content/uploads/2025/03/CHANDRAGITRI-TRAIN-2.jpg)
ರೈಲ್ವೆ ಇಲಾಖೆಯಲ್ಲಿ ‘ನಿಲ್ದಾಣ ನಿರ್ವಹಣೆ’ ನಿರ್ಣಾಯಕ. ದಕ್ಷಿಣ ಮಧ್ಯ ರೈಲ್ವೆಯಲ್ಲಿ ಮೂರು ರೈಲು ನಿಲ್ದಾಣಗಳನ್ನು ಮಹಿಳಾ ಉದ್ಯೋಗಿಗಳು ನಿರ್ವಹಿಸ್ತಿದ್ದಾರೆ. ಅವುಗಳಲ್ಲಿ ಒಂದು ಗುಂಟಕಲ್ ವಿಭಾಗದ ಚಂದ್ರಗಿರಿ ರೈಲ್ವೇ ನಿಲ್ದಾಣ. ಚಂದ್ರಗಿರಿ ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್‌ನಿಂದ ಹಿಡಿದು ಎಲ್ಲಾ ಕೆಲಸಕ್ಕೂ ಮಹಿಳೆಯರನ್ನೇ ನೇಮಿಸಿಕೊಳ್ಳಲಾಗುತ್ತದೆ. ಮೂವರು ಸ್ಟೇಷನ್ ಮಾಸ್ಟರ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಲ್ವರು ಪಾಯಿಂಟ್ ಮಹಿಳಾ ಸಿಬ್ಬಂದಿ, ಓರ್ವ ಭದ್ರತಾ ಸಿಬ್ಬಂದಿ ಕೂಡ ಇದ್ದಾರೆ.
ಇದನ್ನೂ ಓದಿ: ಈ ದೇಶದ ಯುವತಿಯರಿಗೆ ಈ ಹಣೆಪಟ್ಟಿ ಬೀಳುತ್ತೆ.. ಲೆಫ್ಟ್​ ಓವರ್, ಹೀಗಂದ್ರೆ ಏನು?
ಚಂದ್ರಗಿರಿ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಮತ್ತು 13 ಪ್ಯಾಸೆಂಜರ್ ರೈಲುಗಳು ಹಾಗೂ ಗುಂಟಕಲ್ ಮತ್ತು ಕಟ್ಪಾಡಿ ಕಡೆಗೆ ಚಲಿಸುವ ಸರಕು ಹಾಗೂ ತರಬೇತಿ ರೈಲುಗಳು ನಿಂತು ಹೋಗುತ್ತವೆ. ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಮಾರಾಟ, ಭದ್ರತೆ, ಹಸಿರು ಬಾವುಟ ತೋರಿಸುವುದು, ನೈರ್ಮಲ್ಯ ಮುಂತಾದ ಎಲ್ಲಾ ಕೆಲಸಗಳನ್ನೂ ಮಹಿಳಾ ಉದ್ಯೋಗಿಗಳೇ ಮಾಡ್ತಿದ್ದಾರೆ. ರೈಲ್ವೆ ಇಲಾಖೆಯು ತನ್ನ ಉದ್ಯೋಗಿಗಳಲ್ಲಿ ಶೇಕಡಾ 20 ರಷ್ಟು ಮಹಿಳೆಯರು ಎಂದು ಅಂದಾಜಿಸಿದ್ದರೂ, ಪುರುಷರಿಗೆ ಯಾವುದೇ ಅನಾನುಕೂಲವಾಗದಂತೆ ರೈಲ್ವೆ ನಿಲ್ದಾಣವನ್ನು ನಿರ್ವಹಿಸುತ್ತೇವೆ ಎಂದು ಸ್ಟೇಷನ್ ಮಾಸ್ಟರ್ ಸಂಗೀತಾ ಲಕ್ಷ್ಮಿ ಮತ್ತು ಆರ್‌ಪಿಎಫ್ ಕಾನ್ಸ್‌ಟೇಬಲ್ ಕಾವ್ಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ದಯವಿಟ್ಟು ಗಮನಿಸಿ..’ ನಮ್ಮ ಮೆಟ್ರೋ ಸೇವೆಯಲ್ಲಿ ಅಡಚಣೆ.. BMRCL ಮಹತ್ವದ ಪ್ರಕಟಣೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us