newsfirstkannada.com

ಅಯೋಧ್ಯೆ ರಾಮ ಮಂದಿರದ ನೀಲನಕ್ಷೆ ರೆಡಿಯಾಗಿದ್ದು ಯಾವಾಗ? ಯಾರು ಈ ಚಂದ್ರಕಾಂತ್ ಸೋಂಪುರ್?

Share :

Published January 6, 2024 at 5:28pm

Update January 6, 2024 at 5:30pm

    ವಿಶ್ವ ಹಿಂದೂ ಮಹಾಸಭಾದ ಅಧ್ಯಕ್ಷರಿಗೆ ನೀಡಿದ್ದ ನೀಲ ನಕ್ಷೆ

    2020ರಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ನಕ್ಷೆ ತಯಾರಿ

    ಮೂರು ನಕ್ಷೆಯನ್ನು ತಯಾರು ಮಾಡಿದ್ದ ಚಂದ್ರಕಾಂತ್ ಸೋಂಪುರ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದೆ. ಆ ಶುಭ ಗಳಿಗೆಗೆ ಕೋಟ್ಯಾಂತರ ರಾಮನ ಭಕ್ತರು ಬೆರಗು ಕಣ್ಣುಗಳಿಂದ ಕಾಯುತ್ತಿದ್ದಾರೆ. ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿರುವಾಗಿರುವ ಹೊತ್ತಲ್ಲಿ ವಿಶೇಷವಾದ ಮಾಹಿತಿಯೊಂದು ಬೆಳಕಿಗೆ ಬಂದಿದೆ.

ಇದನ್ನು ಓದಿ: ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನಿಂದ ಸಿಂಹದ್ವಾರದ ಫೋಟೋ ಬಿಡುಗಡೆ; ಏನಿದರ ವಿಶೇಷ?

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರೋ ಶ್ರೀರಾಮ ಮಂದಿರ ಹೀಗೇ ಇರಬೇಕು ಅನ್ನೋ ನಕ್ಷೆಯನ್ನು ರಾಮಮಂದಿರದ ಆಂದೋಲನದ ವೇಳೆಯೇ ಸಿದ್ಧ ಮಾಡಲಾಗಿತ್ತು. ಆದರೆ ಈ ಕೇಸ್​​ ಕೋರ್ಟ್​​​ನಲ್ಲಿ ಇರುವ ಹಿನ್ನೆಲೆ ನಿರಾಕರಿಸಲಾಗಿತ್ತು. ಆಗ ಭೂಮಿ ಅಳತೆ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಅದರ ಮಧ್ಯೆಯು ರಾಮಮಂದಿರ ನಕ್ಷೆ ತಯಾರಿಸಿದ್ದರು. 2020ರಲ್ಲಿ ರಾಮಮಂದಿರ ಅಡಿಗಲ್ಲು ಹಾಕುವ ವೇಳೆ ದೇವಾಲಯವನ್ನು ಮೂಲ ಮಾದರಿಯ ಮೂರು ಅಂತಸ್ತಿಗೆ ಬದಲಾವಣೆ ಮಾಡಲಾಯಿತು.

ಗುಜರಾತ್​ನ ವಾಸ್ತು ಶಿಲ್ಪಿ ಚಂದ್ರಕಾಂತ ಸೋಂಪುರ ಅವರು ದೇವಾಲಯದ ನಕ್ಷೆಯನ್ನು ತಯಾರಿಸಿದ್ದರು. ವಿಶ್ವ ಹಿಂದೂ ಮಹಾಸಭಾ ಅಧ್ಯಕ್ಷರಿಗೆ 3 ನಕ್ಷೆಗಳನ್ನು ತಯಾರಿಸಿ ನೀಡಲಾಗಿತ್ತು. ಈ ಬಗ್ಗೆ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಚರ್ಚಿಸಿದ್ದರು. ಈಗ ಅದೇ ನಕ್ಷೆಯಲ್ಲೇ ಒಂದನ್ನು ಫೈನಲ್ ಮಾಡಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಆ ಮೂರು ಅಂತಸ್ತಿನ ನಕ್ಷೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನ ಮಾಡಿ ಅದನ್ನೇ ಫೈನಲ್​ ಮಾಡಲಾಗಿದೆ. ಅದರಂತೆ ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನಿಂದ ಮಂದಿರದ ಲೇಟೆಸ್ಟ್ ಫೋಟೋಗಳನ್ನು ರಿಲೀಸ್ ಮಾಡಲಾಗಿದೆ. ಅಯೋಧ್ಯೆಯ ರಾಮಮಂದಿರದ ಸಿಂಹ ದ್ವಾರ, ರಾಮ ಮಂದಿರದ ಪೂರ್ವ ದಿಕ್ಕಿನ ಮೆಟ್ಟಿಲುಗಳ ಪೋಟೋ ರಿಲೀಸ್​ ಮಾಡಲಾಗಿದೆ.

ಸಿಂಹ ದ್ವಾರದ ಮೆಟ್ಟಿಲುಗಳ ಎರಡು ಕಡೆ ಎರಡು ಸಿಂಹದ ಮೂರ್ತಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಎರಡು ಕಡೆ ಎರಡು ಆನೆಯ ಮೂರ್ತಿ ನಿರ್ಮಾಣ ಮಾಡಲಾಗಿದೆ. ಪೂರ್ವ ದಿಕ್ಕಿನ ಮೆಟ್ಟಿಲು ಹತ್ತಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪೂರ್ವ ದಿಕ್ಕಿನ ಮೊದಲ ಗೋಪುರ ಹಾಗೂ ಗೋಪುರದ ಮೇಲ್ಬಾಗದಲ್ಲಿ ಕಳಸ ಕೆತ್ತನೆಯ ಕೆಲಸ ಪೂರ್ಣಗೊಂಡಿದೆ. ಮಂದಿರದ ಪೂರ್ವ ದಿಕ್ಕಿನ ದ್ವಾರಕ್ಕೆ ಸಿಂಹ ದ್ವಾರ ಎಂದು ನಾಮಕರಣ ಮಾಡಲು ಸಿದ್ದತೆ ನಡೆಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮ ಮಂದಿರದ ನೀಲನಕ್ಷೆ ರೆಡಿಯಾಗಿದ್ದು ಯಾವಾಗ? ಯಾರು ಈ ಚಂದ್ರಕಾಂತ್ ಸೋಂಪುರ್?

https://newsfirstlive.com/wp-content/uploads/2024/01/ramamandira.png

Load More