/newsfirstlive-kannada/media/post_attachments/wp-content/uploads/2024/06/kn-rajanna1.jpg)
ಬೆಂಗಳೂರು: ಸಿದ್ದರಾಮಯ್ಯನವ್ರೇ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ಬಿಟ್ಟು ಕೊಡಿ ಎಂದಿದ್ದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಮತ್ತೆ ಕಿಡಿಕಾರಿದ್ದಾರೆ. ಸಚಿವ ಕೆ.ಎನ್ ರಾಜಣ್ಣ ಅವರ ಹೇಳಿಕೆ ತಿರುಗೇಟು ಕೊಟ್ಟು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಕೆಂಪೇಗೌಡ ಜಯಂತಿ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಚಿವ ಕೆ.ಎನ್ ರಾಜಣ್ಣ ಅವರು ಗರಂ ಆಗಿದ್ದರು. ಕುರ್ಚಿಯನ್ನು ಯಾರು ಬಿಟ್ಟು ಕೊಡೋದಕ್ಕೆ ಹೋಗ್ತಾರೆ. ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟು ಕೊಡ್ತಾರಾ? ಕೇಳಿ.. ನಾಳೆಯಿಂದ ನಾನೇ ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ ಅವರು ಬಿಟ್ಟು ಕೊಡುತ್ತಾರಾ ಎಂದು ಪ್ರಶ್ನಿಸಿದ್ದರು.
ಸಚಿವ ಕೆ.ಎನ್ ರಾಜಣ್ಣ ಅವರ ಈ ಹೇಳಿಕೆಗೆ ಚಂದ್ರಶೇಖರನಾಥ ಸ್ವಾಮೀಜಿ ತಿರುಗೇಟು ಕೊಟ್ಟಿದ್ದಾರೆ. ರಾಜಣ್ಣ ಆತ್ಮ ಪೂರ್ತಿಯಾಗಿ ಹೆಂಡತಿ, ಮಕ್ಕಳು ಮನೆ ಮಠ ಎಲ್ಲ ಬಿಟ್ಟು ಬಂದರೆ ಅವರಿಗೊಂದು ಮಠ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಆಯ್ತು ಅದನ್ನ ಪೀಠವನ್ನು ಕೊಡ್ತೀನಿ. ಅವರು ರಾಜ ತರ್ಲೆ, ಅವನ ಮಾತಲ್ಲಿ ತೂಕ ಇಲ್ಲ ಏನಿಲ್ಲ. ಅವನಿಗೆ ಯೋಗ್ಯತೆನೇ ಇಲ್ಲ ಮಾತಾಡೋಕೆ. ಅವನ್ನ ನಾನು ನೋಡಿಲ್ಲ, ಅವನು ಯಾರು ಗೊತ್ತಿಲ್ಲ. ಚಪಲವಾದ ಬಾಯಿ ಏನಾದ್ರು ಹೊಂದಿರಬೇಕು ಹೊದರ್ತಾನೆ. ಹೌದು ನಾನು ಪೀಠ ಮಾಡಿಕೊಡ್ತೀನಿ. 10 ಎಕರೆ ಕಾವೇರಿ ಹೊಳೆ ದಡದಲ್ಲಿ ಮಠ ಮಾಡಿಕೊಡ್ತೀನಿ ಎಂದು ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಏಕವಚನದಲ್ಲಿ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: VIDEO: ‘ಸಿಎಂ ಸೀಟ್ ಡಿಕೆಶಿಗೆ ಬಿಟ್ಟು ಕೊಡಿ’- ಕೆಂಪೇಗೌಡ ಜಯಂತಿಯಲ್ಲಿ ಶಾಕ್ ಆದ ಸಿದ್ದು; ಏನಂದ್ರು?
ಸಚಿವ ರಾಜಣ್ಣನವರಿಗೆ ಸಿದ್ದರಾಮಯ್ಯನವರ ಮೇಲೆ ಪ್ರೀತಿ ಜಾಸ್ತಿ. ಪ್ರೀತಿಗೋಸ್ಕರ ಹೇಳಿರಬಹುದು ಅಷ್ಟೇ. ಡಿ.ಕೆ ಶಿವಕುಮಾರ್ ಒಬ್ಬ ಒಕ್ಕಲಿಗ ಅನ್ನುವ ಕಾರಣಕ್ಕೆ ನಾನು ಹೇಳಿಲ್ಲ. ತೂಕವಾದ ಮನುಷ್ಯರು. ಈಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆಗೆ ಇದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಒಂದು ಸಲ ಸಿಎಂ ಸ್ಥಾನ ಸಿಕ್ಕರೆ ಅವರಿಗೆ ಸಂತೋಷ, ಎಲ್ಲರಿಗೂ ಸಂತೋಷ. ರಾಜ್ಯದ ಜನತೆಗೆ ಸಂತೋಷ ಎಂಬುದು ನಮ್ಮ ದೃಷ್ಟಿಯಾಗಿದೆ. ಬಹಳ ದಿನಗಳಿಂದ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತ ಅವರ ಮನದಾಳದಲ್ಲಿ ಇದೆ. ಬೇಗ ಅವರನ್ನ ಮುಖ್ಯಮಂತ್ರಿ ಮಾಡಿದ್ರೆ ಅವರ ಇಚ್ಛೆ ಈಡೇರುತ್ತೆ. ಆಮೇಲೆ ಬೇರೆಯವರ ಆಗಬಹುದು ಅಂತ ಹೇಳಿದ್ದೀನಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ