newsfirstkannada.com

ಇಸ್ರೋ ಸಕ್ಸಸ್​ ಹಿಂದಿದೆ ಬಿಸಿ, ಬಿಸಿ ಕಾಫಿ, ಮಸಾಲೆ ದೋಸೆಯ ಕಥೆ; ಏನಿದು ವಿಜ್ಞಾನಿಗಳ ಹೊಸ ಉಪಾಯ?

Share :

Published September 3, 2023 at 8:19am

Update September 3, 2023 at 10:55am

    ಒಂದರ ಹಿಂದೆ ಒಂದರಂತೆ ಯಶಸ್ವಿ ಇಸ್ರೋದಿಂದ ಉಡಾವಣೆ

    ವಿಜ್ಞಾನಿಗಳ ಕೆಲಸಕ್ಕೆ ನೆರವಾಗಿದ್ದೆ ಈ ಬಿಸಿ ಬಿಸಿ ಕಾಫಿ, ದೋಸೆ

    ಮಸಾಲೆ ದೋಸೆ, ಫಿಲ್ಟರ್ ಕಾಫಿಯಿಂದ ಇಸ್ರೋ ಸಾಧಿಸಿದ್ದೇನು?

ಅತ್ತ ಸೂರ್ಯನಿಗೆ ಟಾರ್ಚ್ ಹಿಡಿದಿರೋ ಇಸ್ರೋ, ಆದಿತ್ಯಯಾನದ ಮೂಲಕ ಹೊಸ ಇತಿಹಾಸ ಸೃಷ್ಟಿಗೆ ಸಜ್ಜಾಗಿದೆ. ಇತ್ತ ಚಂದ್ರನ ಮೇಲೆ ಭಾರತದ ಸೆಂಚುರಿಯೂ ದಾಖಲಾಗಿದೆ. ಈ ನಡುವೆ ಲ್ಯಾಂಡರ್​, ರೋವರ್ ನಿದ್ರಾವಸ್ಥೆಗೆ ಜಾರಿದೆ. ಆದ್ರೆ ಇದು ಅಂತ್ಯನಾ ಖಂಡಿತಾ ಅಲ್ಲ..

ಇಸ್ರೋ ಚಂದ್ರಯಾನದ ಸಾಧನೆ ಬಗ್ಗೆ ಇಡೀ ವಿಶ್ವವೇ ಮಾತಾಡ್ತಿದೆ. ಭಾರತೀಯ ವಿಜ್ಞಾನಿಗಳ ಸಕ್ಸಸ್​ ಬಗ್ಗೆ ಜಗತ್ತಿನ ಮೂಲೆ ಮೂಲೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ. ಈ ನಡುವೆ ಸೂರ್ಯಯಾನವನ್ನೂ ಯಶಸ್ವಿಯಾಗಿ ಆರಂಭಿಸಿದೆ. ಚಂದ್ರನ ಮೇಲೆ ಮೊದಲ ಹಂತದ ಅಧ್ಯಾಯ ಮುಕ್ತಾಯವಾಗಿದ್ರೆ, ಸೂರ್ಯನ ಮೇಲೆ ಅಧ್ಯಯನಕ್ಕೂ ಭರದ ಸಿದ್ಧತೆ ಶುರುವಾಗಿದೆ. ಹೀಗೆ ಒಂದರ ಹಿಂದೆ ಒಂದರಂತೆ ಯಶಸ್ವಿ ಉಡಾವಣೆಗಳನ್ನ ಕೈಗೊಳ್ತಿರೋ ಇಸ್ರೋದ ಈ ಮಹಾ ಸಕ್ಸಸ್​ನ ಹಿಂದೆ ಮಸಾಲೆ ದೋಸೆ ಪಾತ್ರ ಕೂಡ ಇದೆ.

ಇಸ್ರೋ ಕಚೇರಿ

ಎಲ್ಲಿನ ಮಸಾಲೆ ದೋಸೆ? ಎಲ್ಲಿನ ಇಸ್ರೋ? ಎಲ್ಲಿನ ಬಾಹ್ಯಾಕಾಶ ಅನ್ಕೋಬೇಡಿ. ಇದು ವಿಜ್ಞಾನಿಗಳೇ ಬಿಚ್ಚಿಟ್ಟಿರೋ ಇಂಟ್ರೆಸ್ಟಿಂಗ್ ಮಾಹಿತಿ.

ಇಸ್ರೋ ವಿಜ್ಞಾನಿಗಳನ್ನ ಹುರಿದುಂಬಿಸಿದ್ದೇ ಇದು!

ಇಸ್ರೋ ಯಶಸ್ಸಿನ ಗುಟ್ಟು ಬೇರೇನೂ ಅಲ್ಲ. ಒಂದೇ ಇಂದು ಫಿಲ್ಟರ್​ ಕಾಫಿ, ಹಾಗೂ ಬಿಸಿ ಬಿಸಿ ಮಸಾಲೆ ದೋಸೆ. ಏನು ದೋಸೆ ಕಾಫಿ ಇಸ್ರೋ ಯಶಸ್ಸಿನ ಗುಟ್ಟಾ..? ಇದು ನಿಜಾನಾ ಅನ್ನಿಸ್ತಿದ್ಯಾ? ನಂಬೋಕೆ ಕಷ್ಟ ಅನ್ನಿಸಿದ್ರೂ ಇದು ನಿಜ. ಹಗಲೆನ್ನದೇ ರಾತ್ರಿ ಎನ್ನದೇ ಕಷ್ಟ ಪಟ್ಟು ದುಡಿಯುತ್ತಿದ್ದ ವಿಜ್ಞಾನಿಗಳಿಗೆ ಇಸ್ರೋ ಸಂಸ್ಥೆಯಿಂದ ಆಗಲಿ ಕೇಂದ್ರ ಸರ್ಕಾರದಿಂದಾಗಲಿ ಯಾವುದೇ ಸ್ಪೆಷಲ್ ಇನ್ಸೆಂಟೀವ್ ಸಿಗ್ತಿರಲಿಲ್ಲ. ಹೀಗಿದ್ರೂ ವಿಜ್ಞಾನಿಗಳು ಉತ್ಸಾಹ ಕಳೆದುಕೊಂಡಿರಲಿಲ್ಲ. ಅದಕ್ಕೆ ಕಾರಣ ಇದೇ ಮಸಾಲೆ ದೋಸೆ, ಫಿಲ್ಟರ್ ಕಾಫಿ.

ಇಸ್ರೋ ಮತ್ತು ಮಸಾಲೆ ದೋಸೆ!

  • ಚಂದ್ರಯಾನ, ಸೂರ್ಯಯಾನದಂತ ದೊಡ್ಡ ಯೋಜನೆ
  • ಅವಧಿ ಮೀರಿಯೂ ಕೆಲಸ ಮಾಡ್ತಿದ್ದ ವಿಜ್ಞಾನಿಗಳು
  • ತನ್ನದೇ ಮಾರ್ಗದಲ್ಲಿ ಹುರಿದುಂಬಿಸಿದ ಇಸ್ರೋ ಸಂಸ್ಥೆ
  • ವಿಜ್ಞಾನಿಗಳಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದ ಇಸ್ರೋ
  • ಉಚಿತ ಮಸಾಲ ದೋಸೆ, ಫಿಲ್ಟರ್ ಕಾಫಿ ನೀಡಲು ಶುರು
  • ಪ್ರತಿ ನಿತ್ಯ ಸಂಜೆ 5 ಗಂಟೆಗೆ ಕಾಫಿ, ಮಸಾಲಾ ದೋಸೆ
  • ಇದ್ರಿಂದ ದೀರ್ಘ ಸಮಯದವರೆಗೆ ಕೆಲಸ ಮಾಡ್ತಿದ್ರು

ಹೀಗೆ ಇಸ್ರೋದ ಸಾಧನೆಯ ಹಿಂದೆ ಮಸಾಲೆ ದೋಸೆ, ಫಿಲ್ಟರ್ ಕಾಫಿಯ ಶ್ರಮ ಇದೆ ಅಂತಾ ಖುದ್ದು, ಇಸ್ರೋ ವಿಜ್ಞಾನಿ ವೆಂಕಟೇಶ್ವರ್ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

ಚಂದ್ರಯಾನ-3

ಮಸಾಲೆ ದೋಸೆ, ಫಿಲ್ಟರ್ ಕಾಫಿಯಿಂದ ಸಾಧ್ಯ

ಪ್ರತಿದಿನ ಸಂಜೆ 5 ಗಂಟೆಗೆ ಉಚಿತ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ನೀಡುವ ಮೂಲಕ ನಾವು ಇದನ್ನೆಲ್ಲ ಸಾಧಿಸಿದ್ದೇವೆ. ಈ ಆಹಾರ ಪದ್ಧತಿ ಪ್ರತಿಯೊಬ್ಬರೂ ಸ್ವಇಚ್ಛೆಯಿಂದ ಹೆಚ್ಚುವರಿ ಸಮಯ ಇರೋದಕ್ಕೆ ಪ್ರೇರೇಪಿಸಿತು. ಎಲ್ಲರೂ ಹೆಚ್ಚು ಕಾಲ ಆಫೀಸ್​ನಲ್ಲಿ ಉಳಿಯೋದಕ್ಕೆ, ಕೆಲಸ ಮಾಡೋದಕ್ಕೆ ಸಂತೋಷಪಡ್ತಿದ್ರು

ಬೆಂಗಳೂರು ಮೊದಲೇ ಮಸಾಲಾ ದೋಸೆ ಹಾಗೂ ಫಿಲ್ಟರ್​ ಕಾಫಿಗೆ ಫೇಮಸ್. ಇದೀಗ ಇಸ್ರೋ ಸಕ್ಸಸನಲ್ಲೂ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಇದೆ ಅನ್ನೋದು ವಿಶೇಷ.

ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ನ್ಯೂಸ್ ಫಸ್ಟ್

ಇಸ್ರೋ ಸಕ್ಸಸ್​ ಹಿಂದಿದೆ ಬಿಸಿ, ಬಿಸಿ ಕಾಫಿ, ಮಸಾಲೆ ದೋಸೆಯ ಕಥೆ; ಏನಿದು ವಿಜ್ಞಾನಿಗಳ ಹೊಸ ಉಪಾಯ?

https://newsfirstlive.com/wp-content/uploads/2023/09/ISRO_DOSE.jpg

Load More