ಇಂದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಭಾರತ
ಇಸ್ರೋದ ಮಹತ್ವಕಾಂಕ್ಷಿಯ ಚಂದ್ರಯಾನ-3 ಉಡಾವಣೆ
ನೌಕೆ ಹೊತ್ತು ನಭಕ್ಕೆ ಹಾರಲಿದೆ ಹೆಮ್ಮೆಯ ಬಾಹುಬಲಿ ರಾಕೆಟ್
ನಮ್ಮ ಹೆಮ್ಮೆಯ ಇಸ್ರೋ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದೇಶದ ವಿಜ್ಞಾನಿಗಳ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಧ್ಯಾಹ್ನ 2.30ಕ್ಕೆ ಉಡಾವಣೆಗೊಳ್ಳಲಿದೆ. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಊರಲಿದೆ.
ಬಾಹುಬಲಿ ಎಂದೇ ಖ್ಯಾತಿಯಾಗಿರುವ ರಾಕೆಟ್ LVM-III (Launch Vehicle Mark-III) ಪ್ರೊಪುಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ಗಳನ್ನು ಹೊತ್ತು ನಭಕ್ಕೆ ಚಿಮ್ಮಲಿದೆ. 45 ರಿಂದ 48 ದಿನಗಳ ಸುದೀರ್ಘ ಜರ್ನಿ ಬಳಿಕ ಪ್ರಫುಲ್ಷನ್ ಮಾಡ್ಯೂಲ್ನಿಂದ ಬೇರ್ಪಟ್ಟು ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಈ ಮೂಲಕ ಭಾರತದ ವಿಜ್ಞಾನಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ.
ಚಂದ್ರಯಾನದಲ್ಲಿರುವ ಅಧ್ಯಯನದ ಉಪಕರಣಗಳು..!
ಲ್ಯಾಂಡರ್ ವಿಕ್ರಂ:
ಈ ಲ್ಯಾಂಡರ್ಗೆ ಕಳೆದ ಬಾರಿಯಂತೆ ವಿಕ್ರಂ ಎಂದು ಹೆಸರು ಇಡಲಾಗಿದೆ. ಇದು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆದ ಮೇಲೆ ತನ್ನೊಳಗೆ ಇರುವ ರೋವರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಲಿದೆ. ಲ್ಯಾಂಡರ್ನಲ್ಲಿ ರಂಭಾ (RAMBHA), ChaSTE, ಇಲ್ಸಾ (ILSA), ಎಲ್ಆರ್ಎ ಎಂಬ ಉಪಕರಣಗಳಿವೆ.
ರೋವರ್ನಲ್ಲಿ ಏನೇನಿದೆ..?
ವಿಕ್ರಂ ಲ್ಯಾಂಡ್ನಿಂದ ಹೊರಬರುವ ರೋವರ್ನಲ್ಲಿ ಎಲ್ಐಬಿಎಸ್ (LIBS), ಎಪಿಎಕ್ಸ್ಎಸ್ (APXS) ಎಂಬ ಎರಡು ಉಪಕರಣಗಳಿವೆ. ರೊವರ್ಗೆ ಪ್ರಗ್ಯಾನ್ ಎಂದು ಹೆಸರಿಡಲಾಗಿದೆ. ಇದರ ಜೀವಿತಾವದಿ ಭೂಮಿಯ 14 ದಿನ. ಅಂದರೆ ಚಂದ್ರನ ಒಂದು ದಿನ.
ಒಟ್ಟಾರೆ ನಮ್ಮ ವಿಜ್ಞಾನಿಗಳು ಚಂದ್ರಯಾನ-2ನಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದುಕೊಂಡು ನಾಲ್ಕು ವರ್ಷಗಳ ಬಳಿಕ ಮತ್ತೆ ಇಡೀ ವಿಶ್ವವನ್ನೇ ತನ್ನತ್ತ ತಿರುಗುವಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಒಂದು ವೇಳೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆದರೆ, ವಿಶ್ವದಲ್ಲಿ ಚಂದ್ರನ ಅಂಗಳಕ್ಕೆ ಸುರಕ್ಷಿತವಾಗಿ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದಕ್ಕಲಿದೆ. ಇದುವರೆಗೆ ರಷ್ಯಾ, ಅಮೆರಿಕ, ಚೀನಾ ಮಾತ್ರ ಇಂತಹ ಸಾಧನೆ ಮಾಡಿವೆ. ಇಸ್ರೋದ ಈ ಸಾಹಸಕ್ಕೆ ಒಳ್ಳೆಯದಾಗಲಿ.
ವಿಶೇಷ ವರದಿ: ಗಣೇಶ್ ಕೆರೆಕುಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
—-
ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!
ಇದನ್ನೂ ಓದಿ: Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?
ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!
ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ಡಿಸೈನರ್ನಲ್ಲಿ ಹೊಸ ಸೂತ್ರ: ಈ ಬಾರಿ ‘Failure-Based ವಿನ್ಯಾಸ’; ಇದು ಯಾಕೆ ಗೊತ್ತಾ?
ಇದನ್ನೂ ಓದಿ: Chandrayaan-3: ಐತಿಹಾಸಿಕ ಕ್ಷಣಕ್ಕೆ ಕಾದು ಕೂತ ಭಾರತ.. ಬಾನಂಗಳದ ಚಂದಿರನತ್ತ ನಮ್ಮ ಚಿತ್ತ.. ಆಲ್ ದಿ ಬೆಸ್ಟ್ ಇಸ್ರೋ
ಇದನ್ನೂ ಓದಿ: ಕಾಪಾಡು ತಿಮ್ಮಪ್ಪ.. ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ದೇವರ ಮೊರೆ ಹೋದ ಇಸ್ರೋ ಮುಖ್ಯಸ್ಥ ಸೋಮನಾಥ್