newsfirstkannada.com

Chandrayaan-3: ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್​, ರೋವರ್​ನಲ್ಲಿ ಏನೆಲ್ಲ ಉಪಕರಣಗಳು ಇವೆ..? ಅವು ಏನೇನು ಅಧ್ಯಯನ ಮಾಡುತ್ತವೆ..?

Share :

Published July 14, 2023 at 9:20am

Update July 14, 2023 at 9:24am

  ಇಂದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಭಾರತ

  ಇಸ್ರೋದ ಮಹತ್ವಕಾಂಕ್ಷಿಯ ಚಂದ್ರಯಾನ-3 ಉಡಾವಣೆ

  ನೌಕೆ ಹೊತ್ತು ನಭಕ್ಕೆ ಹಾರಲಿದೆ ಹೆಮ್ಮೆಯ ಬಾಹುಬಲಿ ರಾಕೆಟ್

ನಮ್ಮ ಹೆಮ್ಮೆಯ ಇಸ್ರೋ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ದೇಶದ ವಿಜ್ಞಾನಿಗಳ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಧ್ಯಾಹ್ನ 2.30ಕ್ಕೆ ಉಡಾವಣೆಗೊಳ್ಳಲಿದೆ. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಊರಲಿದೆ.

ಬಾಹುಬಲಿ ಎಂದೇ ಖ್ಯಾತಿಯಾಗಿರುವ ರಾಕೆಟ್ LVM-III (Launch Vehicle Mark-III) ಪ್ರೊಪುಲ್ಷನ್ ಮಾಡ್ಯೂಲ್, ಲ್ಯಾಂಡರ್​ ಮತ್ತು ರೋವರ್​​ಗಳನ್ನು ಹೊತ್ತು ನಭಕ್ಕೆ ಚಿಮ್ಮಲಿದೆ. 45 ರಿಂದ 48 ದಿನಗಳ ಸುದೀರ್ಘ ಜರ್ನಿ ಬಳಿಕ ಪ್ರಫುಲ್ಷನ್ ಮಾಡ್ಯೂಲ್​​ನಿಂದ ಬೇರ್ಪಟ್ಟು ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ. ಈ ಮೂಲಕ ಭಾರತದ ವಿಜ್ಞಾನಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ.

ಚಂದ್ರಯಾನದಲ್ಲಿರುವ ಅಧ್ಯಯನದ ಉಪಕರಣಗಳು..!

ಲ್ಯಾಂಡರ್ ವಿಕ್ರಂ: 

ಈ ಲ್ಯಾಂಡರ್​​ಗೆ ಕಳೆದ ಬಾರಿಯಂತೆ ವಿಕ್ರಂ ಎಂದು ಹೆಸರು ಇಡಲಾಗಿದೆ. ಇದು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆದ ಮೇಲೆ ತನ್ನೊಳಗೆ ಇರುವ ರೋವರ್​​ ಅನ್ನು ಚಂದ್ರನ ಅಂಗಳಕ್ಕೆ ಇಳಿಸಲಿದೆ. ಲ್ಯಾಂಡರ್​ನಲ್ಲಿ ರಂಭಾ (RAMBHA), ChaSTE, ಇಲ್ಸಾ (ILSA), ಎಲ್​ಆರ್​ಎ ಎಂಬ ಉಪಕರಣಗಳಿವೆ.

 • ರಂಭಾ: (Radio Anatomy of Moon Bound Hypersensitive ionosphere and Atmosphere) ಈ ತಂತ್ರಜ್ಞಾನವು ಚಂದ್ರನಲ್ಲಿ ಪ್ಲಾಸ್ಮಾದ ಸಾಂದ್ರತೆ ಇದೆಯಾ ಎಂದು ಗುರುತಿಸಲಿದೆ. ಜೊತೆಗೆ ಕಾಲ ಕಾಲಕ್ಕೆ ಅದು (ಪ್ಲಾಸ್ಮಾ) ಯಾವೆಲ್ಲ ರೀತಿ ಬದಲಾಗುತ್ತದೆ ಎಂದು ತಿಳಿಸಲಿದೆ.
 • ChaSTE: (Chandra’s Surface Thermophysical Experiment) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್​ಗೆ ಸಹಾಯ ಮಾಡುವ ಈ ಲ್ಯಾಂಡರ್​​ ಪ್ಲೇಲೋಡ್​ಗೆ ಚಂದ್ರನ ಮೇಲ್ಮೈನ ಥರ್ಮೋಫಿಸಿಕಲ್ ಮಾಡೆಲ್ ಅಳವಡಿಸಲಾಗಿದೆ. ಇದು ಚಂದ್ರನ ಮೇಲ್ಮೈ ತಾಪಮಾನವನ್ನು ತಿಳಿದುಕೊಳ್ಳಲಿದೆ. ಇದನ್ನು ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಪಿಆರ್ ಎಲ್ ಲ್ಯಾಬ್ ಸಿದ್ಧಪಡಿಸಲಾಗಿದೆ. ಚಂದ್ರನ ಕಿರಣಗಳ ಅಧ್ಯಯನಕ್ಕಾಗಿ ಪ್ಯಾಸೀವ್ ಲೇಸರ್ ರೆಟ್ರೋರೇಪ್ಲೆಕ್ಟರ್​​​ ಒತ್ತು ನೀಡಲಾಗಿದೆ.
 • ILSA: (Instrument for Lunar Seismic Activity) ಇದನ್ನು ಇನ್ ಸ್ಟ್ರುಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಅಂತಾ ಕರೆಯುತ್ತಾರೆ. ಇದು ಚಂದ್ರನ ಮೇಲ್ಮೈನ ಕಂಪನಗಳ ಬಗ್ಗೆ ಮಾಹಿತಿ ನೀಡಲಿದ್ಯಂತೆ. ಲ್ಯಾಗ್ಮುಯಿರ್ ಪ್ರೋಬ್ (Langmuir Probe): ಈ ಯಂತ್ರವನ್ನೂ ಕೂಡ ಲ್ಯಾಂಡರ್​ನಲ್ಲಿಯೇ ಅಳವಡಿಸಲಾಗಿದ್ದು, ಇದು ಚಂದ್ರನ ಮೇಲಿನ ಸಾಂದ್ರತೆ ಮತ್ತು ಅದರಲ್ಲಿನ ವ್ಯತ್ಯಾಸವನ್ನು ಪತ್ತೆಹಚ್ಚಲಿದೆ.

ರೋವರ್​​ನಲ್ಲಿ ಏನೇನಿದೆ..?
ವಿಕ್ರಂ ಲ್ಯಾಂಡ್​​ನಿಂದ ಹೊರಬರುವ ರೋವರ್​​ನಲ್ಲಿ ಎಲ್​​ಐಬಿಎಸ್ (LIBS)​, ಎಪಿಎಕ್ಸ್​​ಎಸ್ (APXS)​​ ಎಂಬ ಎರಡು ಉಪಕರಣಗಳಿವೆ. ರೊವರ್​ಗೆ ಪ್ರಗ್ಯಾನ್ ಎಂದು ಹೆಸರಿಡಲಾಗಿದೆ. ಇದರ ಜೀವಿತಾವದಿ ಭೂಮಿಯ 14 ದಿನ. ಅಂದರೆ ಚಂದ್ರನ ಒಂದು ದಿನ.

 • APXS (Alpha Particle X-ray): ಇದು ರೋವರ್ ಪೆಲೋಡ್​​ಗೆ ಸಂಬಂಧಿಸಿದ್ದಾಗಿದೆ. ರೋವರ್​​ನಲ್ಲಿ ಅಲ್ಫಾ ಪಾರ್ಟಿಕಲ್ ಎಕ್ಸ್ ರೇ ಸ್ಟೋಕೊಮೀಟರ್ ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ ಅಳವಡಿಕೆಯಾಗಿದೆ. ಲ್ಯಾಂಡಿಂಗ್ ಸ್ಥಳದಲ್ಲಿನ ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನಿಸಲಿದೆ. ಇನ್ನು ಪ್ರೊಪುಲ್ಷನ್ ಮಾಡೆಲ್ ಚಂದ್ರನ ಕಕ್ಷೆಯಲ್ಲಿ ಅಂದರೆ ಸುಮಾರು 100 ಕಿಲೋ ಮೀಟರ್ ದೂರವೇ ಉಳಿಯಲಿದ್ದು, ಅದರು ಉಪಗ್ರಹ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.
 • LIBS: (LASER Induced Breakdown Spectroscope): ಚಂದ್ರನ ಆಳದಲ್ಲಿರುವ ಖನೀಜಗಳು, ಲೋಹಗಳನ್ನು ಪತ್ತೆ ಹಚ್ಚಲಿದೆ. ಇನ್ನು ಪ್ರಫುಲ್ಷನ್ ಮಾಡ್ಯೂಲ್, ಲ್ಯಾಂಡರ್​ಗೆ ಚಂದ್ರನ ಮೇಲ್ಮೈ ಮೇಲೆ ಇಳಿಯಲು ಸಹಾಯ ಮಾಡಲಿದೆ. ಜೊತೆಗೆ ಅದು ಚಂದ್ರನ ಸುತ್ತ ತಿರುಗುತ್ತ ಉಪಗ್ರಹವಾಗಿ ಕೆಲಸ ಮಾಡಲಿದೆ.

ಒಟ್ಟಾರೆ ನಮ್ಮ ವಿಜ್ಞಾನಿಗಳು ಚಂದ್ರಯಾನ-2ನಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದುಕೊಂಡು ನಾಲ್ಕು ವರ್ಷಗಳ ಬಳಿಕ ಮತ್ತೆ ಇಡೀ ವಿಶ್ವವನ್ನೇ ತನ್ನತ್ತ ತಿರುಗುವಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಒಂದು ವೇಳೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್​ ಸುರಕ್ಷಿತವಾಗಿ ಲ್ಯಾಂಡ್ ಆದರೆ, ವಿಶ್ವದಲ್ಲಿ ಚಂದ್ರನ ಅಂಗಳಕ್ಕೆ ಸುರಕ್ಷಿತವಾಗಿ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದಕ್ಕಲಿದೆ. ಇದುವರೆಗೆ ರಷ್ಯಾ, ಅಮೆರಿಕ, ಚೀನಾ ಮಾತ್ರ ಇಂತಹ ಸಾಧನೆ ಮಾಡಿವೆ. ಇಸ್ರೋದ ಈ ಸಾಹಸಕ್ಕೆ ಒಳ್ಳೆಯದಾಗಲಿ.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

—-

ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

ಇದನ್ನೂ ಓದಿ: Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?

ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ಡಿಸೈನರ್​​ನಲ್ಲಿ ಹೊಸ ಸೂತ್ರ: ಈ ಬಾರಿ ‘Failure-Based ವಿನ್ಯಾಸ’; ಇದು ಯಾಕೆ ಗೊತ್ತಾ?

ಇದನ್ನೂ ಓದಿ: Chandrayaan-3: ಐತಿಹಾಸಿಕ ಕ್ಷಣಕ್ಕೆ ಕಾದು ಕೂತ ಭಾರತ.. ಬಾನಂಗಳದ ಚಂದಿರನತ್ತ ನಮ್ಮ ಚಿತ್ತ.. ಆಲ್​ ದಿ ಬೆಸ್ಟ್ ಇಸ್ರೋ

ಇದನ್ನೂ ಓದಿ: ಕಾಪಾಡು ತಿಮ್ಮಪ್ಪ.. ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ದೇವರ ಮೊರೆ ಹೋದ ಇಸ್ರೋ ಮುಖ್ಯಸ್ಥ ಸೋಮನಾಥ್

Chandrayaan-3: ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್​, ರೋವರ್​ನಲ್ಲಿ ಏನೆಲ್ಲ ಉಪಕರಣಗಳು ಇವೆ..? ಅವು ಏನೇನು ಅಧ್ಯಯನ ಮಾಡುತ್ತವೆ..?

https://newsfirstlive.com/wp-content/uploads/2023/07/CHANDRAYANA.jpg

Load More