ಭಾರತಕ್ಕೆ ಮತ್ತೊಂದು ಗರಿಮೆ, ಯಶಸ್ವಿಯಾದ್ರೆ ದೇಶಕ್ಕೆ 4ನೇ ಸ್ಥಾನ
ಚಂದ್ರಯಾನ- 2 ವೈಫಲ್ಯ, ಚಂದ್ರಯಾನ-3 ಉಡಾವಣೆಗೆ ಕಾರಣ
ಲ್ಯಾಂಡರ್, ರೋವರ್ ಚಂದ್ರನ ಮೇಲ್ಮೈ ಕಾರ್ಯ, ಡೇಟಾ ಸಂಗ್ರಹ
ಚಂದಮಾಮ.. ಚಂದಿರನ ಅಂಗಳದಲ್ಲಿ ಏನಿದೆಯೆಂದು ಜಗತ್ತಿಗೆ ತೋರಿಸಬೇಕು ಅಂತ ನಮ್ಮ ವಿಜ್ಞಾನಿಗಳು ಹೊರಟು ನಿಂತಿದ್ದಾರೆ. ಚಂದ್ರಯಾನ- 2 ವೈಫಲ್ಯ ಬಳಿಕ ಇದೀಗ ಚಂದ್ರಯಾನ- 3 ಮೇಲೆ ಭಾರತ ಮಾತ್ರವಲ್ಲ ಇಡೀ ಜಗತ್ತೇ ಎದುರು ನೋಡುತ್ತಿದೆ. ಇದೇ ನಿಟ್ಟಿನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಸಜ್ಜಾಗಿದ್ದು ಬಾನಂಗಳಕ್ಕೆ ಚಂದ್ರಯಾನ ನೌಕೆ ಚಿಮ್ಮಿಸಲು ಕ್ಷಣಗಣನೆ ಶುರುವಾಗಿದೆ.
ಚಂದ್ರಯಾನ- 3 ಕೇವಲ ಭಾರತ ಮಾತ್ರವಲ್ಲದೇ ಇಡೀ ಜಗತ್ತೇ ಕುತೂಹಲ, ನೀರಿಕ್ಷೆಗಳಿಂದ ಎದುರು ನೋಡುತ್ತಿರುವ ಯೋಜನೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಗಗನನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2:30ಕ್ಕೆ ಚಂದ್ರನನ್ನು ಅಧ್ಯಯನ ಮಾಡಲು ಚಂದ್ರಯಾನ- 3 ರಾಕೆಟ್ ನಭಕ್ಕೆ ಚಿಮ್ಮಲಿದೆ. 2019ರಲ್ಲಿ ಚಂದ್ರಯಾನ- 2 ವೈಫಲ್ಯದಿಂದ ಪಾಠ ಕಲಿತಿರುವ ಇಸ್ರೋದ ವಿಜ್ಞಾನಿಗಳು ನಭೋ ಮಂಡಲದಲ್ಲಿ ಹೊಸ ಮೈಲಿಗಲ್ಲು ಬರೆಯಲು ಸಿದ್ಧರಾಗಿದ್ದಾರೆ.
ಚಂದ್ರಯಾನ 3ನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಸಜ್ಜು
ಚಂದ್ರಯಾನ- 2 ಫೇಲ್ಯೂರ್ ಆದ ಬಳಿಕ ಇದೀಗ ಚಂದ್ರಯಾನ- 3ನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಸಜ್ಜಾಗಿದೆ. ಇಸ್ರೋ ವಿಜ್ಞಾನಿಗಳ ಬಹುನಿರೀಕ್ಷಿತ ಪ್ರಾಜೆಕ್ಟ್ ಚಂದ್ರಯಾನ- 3 ಇಂದು ಆಗಸಕ್ಕೆ ನೆಗೆಯಲಿದೆ. ಮಧ್ಯಾಹ್ನ 2:30ಕ್ಕೆ ಮಾಡ್ಯೂಲ್ಗಳನ್ನ ಹೊತ್ತು ರಾಕೆಟ್ ನಭಕ್ಕೆ ಹಾರಲಿದೆ. ಚಂದ್ರನ ಅಂಗಳಕ್ಕೆ ತಲುಪುವ ಗುರಿಯೊಂದಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಲಾಂಚಿಂಗ್ ವೆಹಿಕಲ್ ಗಗನದತ್ತ ಸವಾರಿ ಮಾಡಲಿದೆ.
ಚಂದ್ರಯಾನ-3ಗೆ ಕ್ಷಣಗಣನೆ
ಚಂದ್ರಯಾನ 2 ರ ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಭಾರೀ ಶ್ರಮವಹಿಸಿದೆ. ಇಂದು ಮಧ್ಯಾಹ್ನ 2:30ಕ್ಕೆ ಚಂದ್ರಯಾನ-3 ಅನ್ನು ಎಲ್ವಿಎಂ-3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದೆ.
4 ಕಿಮೀ ಉದ್ದ, 2 ಕಿ.ಮೀ ಅಗಲದ ಪ್ರದೇಶದಲ್ಲಿ ನೌಕೆ ಲ್ಯಾಂಡ್
ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗ ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಇದನ್ನು ಓದಿ: ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ನ್ಯೂಸ್ ಫಸ್ಟ್ ಹೊಸ ಕ್ರಾಂತಿ
ಚಂದ್ರಯಾನ-3 ಅಧ್ಯಯನ
ಕಳೆದ ಬಾರಿ ಮಾಡಿದ ತಪ್ಪುಗಳಿಂದ ತಿದ್ದುಕೊಂಡಿರುವ ಇಸ್ರೋ ವಿಜ್ಞಾನಿಗಳು, ‘ಈ ಬಾರಿ ಗೆಲುವು ನಮ್ಮದೇ ಎನ್ನುತ್ತಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಸರಿಯಾಗಿ ಚಂದ್ರಯಾನ-3 ಮಿಷನ್ ನಭದತ್ತ ಚಿಮ್ಮಲಿದ್ದು ಕ್ಷಣಗಣನೆ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Best wishes to @isro for the #Chandrayaan-3 Launch Mission tomorrow. Congratulations to thousands of scientists, engineers, and technicians who have worked day and night to make this mission possible. 🚀🌙🇮🇳 #IADN pic.twitter.com/zgmFJ3VkI2
— News IADN (@NewsIADN) July 13, 2023
The launch of Chandrayaan 3 under visionary leadership, of PM Shri @narendramodi ji, stands as a remarkable testament to India's unwavering spirit. It transcends boundaries and showcases our technological prowess.
This significant milestone propels our nation forward, serving… pic.twitter.com/I5GGIB3W7F
— Anurag Thakur (@ianuragthakur) July 13, 2023