newsfirstkannada.com

ಚಂದ್ರಯಾನ- 4 ಭೂಮಿಗೆ ವಾಪಸ್‌.. ಈ ಬಾರಿ ಮಹತ್ವದ ವಸ್ತುಗಳನ್ನ ಹೊತ್ತು ತರೋದೇ ಮುಖ್ಯ ಗುರಿ; ಇಸ್ರೋ ಪ್ಲಾನ್ ಏನು?

Share :

Published November 20, 2023 at 11:50am

    ಚಂದ್ರನಿಂದ ಮಿಷನ್ ವಾಪಸ್ ಬರುವಾಗ ಇದನ್ನು ತಂದೇ ತರಲಾಗುತ್ತೆ!

    ಈಗಾಗಲೇ ಚಂದ್ರಯಾನ- 3ರಲ್ಲಿ ಯಶಸ್ವಿಯಾಗಿರುವ ಇಸ್ರೋ ವಿಜ್ಞಾನಿಗಳು

    ಚಂದ್ರಯಾನ- 4ರಲ್ಲಿ ಮಹತ್ವದ ಕಾರ್ಯ ಕೈಗೊಂಡಿರುವ ಹೆಮ್ಮೆಯ ಇಸ್ರೋ

ಮುಂಬೈ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗಾಗಲೇ ಚಂದ್ರಯಾನ- 3ರಲ್ಲಿ ಯಶಸ್ವಿಯಾಗಿದ್ದು ಇಡೀ ವಿಶ್ವ ಬೆರಗಾಗುವಂತೆ ಮಾಡಿದೆ. ಚಂದ್ರನ ಅಂಗಳದಲ್ಲಿ ರೋವರ್ ಪ್ರಗ್ಯಾನ್​ ಅನ್ನು ಇಳಿಸಿ ಮಹತ್ವದ ಸಾಧನೆ ಮಾಡಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ಇಸ್ರೋ ಮತ್ತೊಂದು ಪ್ರಮುಖವಾದ ಯೋಜನೆ ಚಂದ್ರಯಾನ- 4ನ್ನು ಅನ್ನು ಉಡಾವಣೆ ಮಾಡುವ ಪ್ಲಾನ್​ನಲ್ಲಿದೆ. ಆದ್ರೆ ಈ ಬಾರಿ ಚಂದ್ರನಿಂದ ಕಲ್ಲು, ಮಣ್ಣಿನ ಮಾದರಿಗಳನ್ನ ಭೂಮಿಗೆ ತರಬೇಕು ಎನ್ನುವ ಯೋಚನೆಯಲ್ಲಿದೆ.

ಇಸ್ರೋದ ಸ್ಪೇಸ್​ ಅಪ್ಲಿಕೇಶನ್ ಸೆಂಟರ್​ನ (SAC/ISRO) ನಿರ್ದೇಶಕ ನಿಲೇಶ್ ದೇಸಾಯಿ ಅವರು ಪುಣೆಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೊರಾಲಜಿಯ 62ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಚಂದ್ರನ ಅಂಗಳದಿಂದ ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ಗುರಿಯನ್ನು ಚಂದ್ರಯಾನ- 4 ಯೋಜನೆಯಲ್ಲಿನ ಪ್ರಮುಖ ಅಂಶವಾಗಿದೆ. ಚಂದ್ರಯಾನ-3 ಲ್ಯಾಂಡಿಂಗ್ ಆದಂತೆ ಚಂದ್ರಯಾನ- 4 ಕೂಡ ಲ್ಯಾಂಡ್ ಆಗಲಿದೆ. ಆದ್ರೆ ಕಕ್ಷೆಯ ಮಾಡ್ಯೂಲ್‌ ಅನ್ನು ಅಲ್ಲಿ ಲ್ಯಾಂಡ್ ಮಾಡಿದ ನಂತರ ಕೇಂದ್ರ ಘಟಕವೊಂದು ವಾಪಸ್ ಭೂಮಿಗೆ ಹಿಂತಿರುಗುತ್ತದೆ. ಅದು ಭೂಮಿಗೆ ಬರಬೇಕಾದರೆ ಮಣ್ಣಿನ ಮಾದರಿಗಳನ್ನು ಹೊತ್ತು ಬರುತ್ತದೆ. ಈ ವೇಳೆ ಅದು ಬರುವಾಗ ಹಂತ ಹಂತವಾಗಿ ಪ್ರತ್ಯೇಕಗೊಳ್ಳುತ್ತದೆ. ಇದು ಮಿಷನ್​ನ ಅತ್ಯಂತ ಮಹತ್ವದ ಕಾರ್ಯವಾಗಿರುತ್ತದೆ. ಮುಂದಿನ 5 ರಿಂದ 7 ವರ್ಷಗಳಲ್ಲಿ ಈ ಯೋಜನೆ ಸಿದ್ಧವಾಗಲಿದೆ ಎಂದರು.

ಚಂದ್ರಯಾನ- 3

ಚಂದ್ರಯಾನ- 3ರಲ್ಲಿ ರೋವರ್ ಪ್ರಗ್ಯಾನ್ ಕೇವಲ 30 ಕೆ.ಜಿ ಮಾತ್ರ ಇತ್ತು. ಆದರೆ ಚಂದ್ರಯಾನ- 4ರಲ್ಲಿ ರೋವರ್ ಬರೋಬ್ಬರಿ 350 ಕೆ.ಜಿ ಇರಲಿದ್ದು ಇದನ್ನು ಚಂದ್ರನ ಮೇಲೆ ಇಳಿಸುವುದೇ ದೊಡ್ಡ ಸವಾಲು ಆಗಲಿದೆ. ಅಲ್ಲದೇ ಚಂದ್ರಯಾನ-3 ಯೋಜನೆ ಯಶಸ್ವಿಯಾದಂತೆ ಚಂದ್ರಯಾನ-4ರ ಯಶಸ್ಸು ಅದು ಭೂಮಿಗೆ ಹಿಂದಿರುಗುವಾಗ ಚಂದ್ರನ ಮೇಲ್ಮೈಯಿಂದ ಮಣ್ಣಿನ ಮಾದರಿಗಳನ್ನು ತರುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಇಸ್ರೋ ಹಾಗೂ ಜಪಾನಿನ ಬಾಹ್ಯಾಕಾಶ ಸಂಸ್ಥೆ JAXA ಲುಪೆಕ್ಸ್‌ ಯೋಜನೆಯಲ್ಲಿ ತೊಡಗಿಕೊಂಡಿವೆ. ಇದು ಕೂಡ ಚಂದ್ರನ ಅನ್ವೇಷಣೆ ಮಾಡುವ ಮಿಷನ್ ಆಗಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ- 4 ಭೂಮಿಗೆ ವಾಪಸ್‌.. ಈ ಬಾರಿ ಮಹತ್ವದ ವಸ್ತುಗಳನ್ನ ಹೊತ್ತು ತರೋದೇ ಮುಖ್ಯ ಗುರಿ; ಇಸ್ರೋ ಪ್ಲಾನ್ ಏನು?

https://newsfirstlive.com/wp-content/uploads/2023/11/ISRO_CHANDRAYANA_4.jpg

Load More