newsfirstkannada.com

ಆಂಧ್ರದಲ್ಲಿ ಜಗನ್​ಗೆ ಹೀನಾಯ ಸೋಲು; ಪವನ್​ ಕಲ್ಯಾಣ್​​, ನಾಯ್ಡು ಮೈತ್ರಿಗೆ ಭರ್ಜರಿ ಜಯ

Share :

Published June 4, 2024 at 1:00pm

Update June 4, 2024 at 1:21pm

  ಕರ್ನಾಟಕ ನೆರೆರಾಷ್ಟ್ರ ಆಂಧ್ರಪ್ರದೇಶದ ರಾಜಕೀಯಕ್ಕೆ ಹೊಸ ಟ್ವಿಸ್ಟ್

  ಸಿಎಂ ಜಗನ್​ ಮೋಹನ್​ ರೆಡ್ಡಿ ವೈಎಸ್​ಆರ್​​ ಕಾಂಗ್ರೆಸ್​​ಗೆ ಸೋಲು!

  ಪವನ್​ ಕಲ್ಯಾಣ್​​, ಚಂದ್ರಬಾಬು ನಾಯ್ಡು ಮೈತ್ರಿಗೆ ಭರ್ಜರಿ ಗೆಲುವು

ಅಮರಾವತಿ: ಕರ್ನಾಟಕ ನೆರೆರಾಷ್ಟ್ರ ಆಂಧ್ರಪ್ರದೇಶದ ರಾಜಕೀಯಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಬರೋಬ್ಬರಿ 5 ವರ್ಷಗಳ ಬಳಿಕ ಜನಸೇನಾ, ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ಗೆಲುವಾಗಿದೆ. ಸಿಎಂ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​​ ಕಾಂಗ್ರೆಸ್​​​ಗೆ ಹೀನಾಯ ಸೋಲಾಗಿದೆ.

ಆಂಧ್ರಪ್ರದೇಶದಲ್ಲಿ ಲೋಕಸಭಾ ಜೊತೆಗೆ ವಿಧಾನಸಭಾ ಚುನಾವಣೆ ಕೂಡ ನಡೆದಿದೆ. 175 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಜನಸೇನಾ, ಟಿಡಿಪಿ ಮತ್ತು ಜನಸೇನಾ ಮೈತ್ರಿಗೆ ಭರ್ಜರಿ ಜಯ ಸಿಕ್ಕಿದೆ. ಟಿಡಿಪಿ ಬರೋಬ್ಬರಿ 130 ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಪವನ್​ ಕಲ್ಯಾಣ್​ ನೇತೃತ್ವದ ಜನಸೇನಾ ಪಕ್ಷ 20 ಮತ್ತು ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿದೆ. ವೈಎಸ್​ಆರ್​​ ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ.

ಜೂನ್​​ 9ನೇ ತಾರೀಕಿನಂದು ಆಂಧ್ರಪ್ರದೇಶದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ನಟ ಪವನ್​ ಕಲ್ಯಾಣ್​ ಡಿಸಿಎಂ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿಗೆ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು; ಕಾಂಗ್ರೆಸ್​​ಗೆ ಹೀನಾಯ ಸೋಲು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಂಧ್ರದಲ್ಲಿ ಜಗನ್​ಗೆ ಹೀನಾಯ ಸೋಲು; ಪವನ್​ ಕಲ್ಯಾಣ್​​, ನಾಯ್ಡು ಮೈತ್ರಿಗೆ ಭರ್ಜರಿ ಜಯ

https://newsfirstlive.com/wp-content/uploads/2024/06/TDP_jansena-1.jpg

Load More