/newsfirstlive-kannada/media/post_attachments/wp-content/uploads/2024/05/Chandu-1.jpg)
ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ತೆಲುಗು ನಟ ಚಂದು ಆತ್ಮಹತ್ಯೆ ಮೂಲಕ ಬದುಕು ಮುಗಿಸಿದ್ದಾರೆ. ಶುಕ್ರವಾರದಂದು ತಮ್ಮ ಫ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಾರ ಇಬ್ಬರು ನಟ-ನಟಿಯರ ಸಾವು ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.
ಪವಿತ್ರಾ ಕಾರಿನಲ್ಲಿದ್ರಾ ಚಂದು?
ತ್ರಿನಯನಿ ಸೇರಿ ಹಲವು ಸೀರಿಯಲ್ಗಳನ್ನು ಮಾಡಿದ್ದ ಪವಿತ್ರಾ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದೇ ಕಾರಿನಲ್ಲಿದ್ದ ಚಂದು ಗಾಯಗೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಪವಿತ್ರಾ ಜಯರಾಂ ಸಾವಿನ ಸುದ್ದಿ ಮರೆಯುವ ಮುನ್ನವೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
[caption id="attachment_64651" align="alignnone" width="800"]ನಟಿ ಪವಿತ್ರಾ ಜಯರಾಂ[/caption]
ಅಪಘಾತದಲ್ಲಿ ಪವಿತ್ರಾ ಸಾವು
ಪವಿತ್ರಾ ಜಯರಾಂ ಬೆಂಗಳೂರಿಗೆ ತೆರಳುವಾಗ ಅವರ ಕಾರು ಅಪಘಾತವಾಗಿತ್ತು. ಚಂದು ಕಣ್ಣೇದುರೇ ಪವಿತ್ರ ಸಾವನ್ನಪ್ಪಿದ್ದರು. ಆದರೆ ಇದನ್ನು ಕಂಡು ಚಂದು ಬೆಚ್ಚಿಬಿದ್ದಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲೂ ಚಂದು ಹೇಳಿಕೊಂಡಿದ್ದಾರಂತೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಡಾರ್ಲಿಂಗ್ ಪ್ರಭಾಸ್; ಇನ್ಸ್ಟಾ ಪೋಸ್ಟ್ ಏನ್ ಹೇಳುತ್ತೆ?
[caption id="attachment_64637" align="alignnone" width="800"]ನಟಿ ಪವಿತ್ರಾ ಜಯರಾಂ ಮತ್ತು ಚಂದು[/caption]
ಮೊದಲೊಂದು ಮದುವೆ, ಇಬ್ಬರು ಮಕ್ಕಳು
ಕಿರುತೆರೆ ನಟ ಚಂದು 2015ರಲ್ಲಿ ಶಿಲ್ಪಾ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಪವಿತ್ರಾ ಜಯರಾಂ ಪರಿಚಯದ ಬಳಿಕ ಶಿಲ್ಪಾ ಜೊತೆಗೆ ದೂರ ಉಳಿದರು. ಆ ಬಳಿಕ ಪವಿತ್ರಾ ಜಯರಾಂ ಮತ್ತು ಚಂದು ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗುತ್ತಿದೆ. ಪವಿತ್ರಾ ಸಾವನ್ನು ಅರಗಿಸಿಕೊಳ್ಳಲಾಗದೆ ಚಂದು ತನ್ನ ಮಣಿಕೊಂಡದಲ್ಲಿರುವ ಫ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕರೆಂಟ್ ಹೊಡೆದು ರಸ್ತೆಯಲ್ಲಿ ಬಿದ್ದಿದ್ದ ಬಾಲಕ.. ದೇವತೆಯಂತೆ ಬಂದು ಮರುಜೀವಕೊಟ್ಟ ಮಹಾತಾಯಿ.. ಹೇಗೆ ಗೊತ್ತಾ?
[caption id="attachment_64652" align="alignnone" width="800"]ನಟ ಚಂದು[/caption]
ತನಿಖೆ ಮುಂದುವರೆದಿದೆ
ಚಂದು ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಇದೀಗ ಚಂದು ಆತ್ಮಹತ್ಯೆ ಅವರ ಮನೆಯವರನ್ನು ಕಣ್ಣೀರ ಕಡಲಿನಲ್ಲಿ ತೇಲುವಂತೆ ಮಾಡಿದೆ. ಸದ್ಯ ಪೊಲೀಸರು ಚಂದು ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ