ನಟಿ ಪವಿತ್ರಾ ಸಹವಾಸದಿಂದ ಹೆಂಡತಿ, ಮಕ್ಕಳಿಂದ ದೂರ ಇದ್ದ; ಚಂದು ಬಗ್ಗೆ ತಾಯಿಯ ಆರೋಪವೇನು?

author-image
AS Harshith
Updated On
ನಟಿ ಪವಿತ್ರಾ ಸಹವಾಸದಿಂದ ಹೆಂಡತಿ, ಮಕ್ಕಳಿಂದ ದೂರ ಇದ್ದ; ಚಂದು ಬಗ್ಗೆ ತಾಯಿಯ ಆರೋಪವೇನು?
Advertisment
  • ಆಕ್ಸಿಡೆಂಟ್​ ಆದ್ಮೇಲೆ ಕೂಡ ನನ್ನ ಬಳಿ ಮಾತಾಡಿಲ್ಲ, ಮುಖನೂ ನೋಡ್ತಿರಲಿಲ್ಲ
  • ಶಿಲ್ಪಾನ ತುಂಬಾ ಹೊಡೆದಿದ್ದಾನೆ, ಬೈಯ್ದಿದ್ದಾನೆ ಎಂದು ಆರೋಪಿಸಿದ ತಾಯಿ
  • ಪವಿತ್ರಾ ನನ್ನ ಪತ್ನಿ, ಅವಳನ್ನೇ ಸರ್ವಸ್ವ ಅಂತ ಹೇಳ್ತಿದ್ದ ಎಂದ ನಟನ ತಾಯಿ

ತೆಲುಗು ಕಿರುತೆರೆ ನಟ ಚಂದ್ರಕಾಂತ್ ಆತ್ಮಹತ್ಯೆ ಬಗ್ಗೆ ಅವರ ತಾಯಿ ಮಾತನಾಡಿದ್ದಾರೆ. ಪವಿತ್ರಾ ಸಹವಾಸದಿಂದ ಚಂದು ನನ್ನ ಸೊಸೆಯಿಂದ ದೂರ ಇದ್ದಳು. ಆಕೆ ನನ್ನ ಬಳಿ, ಮಕ್ಕಳ ಬಳಿ ಮಾತಾಡೋಕೆ ಬಿಟ್ಟಿಲ್ಲ. ನನ್ನ ಸೊಸೆ, ಮಕ್ಕಳನ್ನ ಭೇಟಿ ಆಗೋಕೆ ಬಿಡಲಿಲ್ಲ ಎಂದು ಹೇಳಿ ಕಣ್ಣೀರು ಸುರಿಸಿದ್ದಾರೆ.

ನಾವು ಮದುವೆ ಆಗಿದ್ದೇವೆ ಎಂದು ಇಬ್ಬರು ಹೇಳಿದ್ದರು. ಎಲ್ಲರನ್ನೂ ಬಿಟ್ಟು ಅವಳನ್ನೇ ಪತ್ನಿ ಅಂತ ಹೇಳಿದ್ದ. ಅವಳನ್ನೇ ಸರ್ವಸ್ವ ಅಂತ ಹೇಳ್ತಿದ್ದ. ಆಕ್ಸಿಡೆಂಟ್​ ಆದ್ಮೇಲೆ ಕೂಡ ನನ್ನ ಬಳಿ ಮಾತಾಡಿಲ್ಲ. ಮನೆಗೆ ಬಂದರೂ ಮಾತಾಡ್ತಿರಲಿಲ್ಲ. ಮುಖನೂ ನೋಡ್ತಿರಲಿಲ್ಲ. ಶಿಲ್ಪಾನ ತುಂಬಾ ಹೊಡೆದಿದ್ದಾನೆ, ಬೈಯ್ದಿದ್ದಾನೆ. ಕುಡಿದು ಎಷ್ಟೋ ತೊಂದರೆ ಕೊಟ್ಟರೂ ಸಹಿಸಿಕೊಂಡ್ವಿ. ನಮ್ಮ ಮೊಮ್ಮಕ್ಕಳು ಅನಾಥರಾದರು ಎಂದು ಚಂದು ತಾಯಿ ಹೇಳಿದ್ದಾರೆ.

publive-image

ಇದನ್ನೂ ಓದಿ: ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ.. ಚಂದು ಕೊನೆಯ ಮಾತುಗಳನ್ನ ನೆನಪಿಸಿಕೊಂಡ ನಟಿಯ ಸಂಬಂಧಿ.. ಏನಂದ್ರು?

ಪವಿತ್ರಾ ನಿಧನದ ನಂತರವೂ ನೋವಲ್ಲೇ ಇದ್ದ. ಯಾರು ಫೋನ್ ಮಾಡಿದ್ರು ರಿಸೀವ್ ಮಾಡಿಲ್ಲ. ಪತ್ನಿ ತುಂಬಾ ಸಲ ಫೋನ್ ಮಾಡಿದ್ದರು ರಿಸೀವ್ ಮಾಡಿಲ್ಲ. ಸಂಜೆ ಮನೆ ಹತ್ರಾ ಸ್ನೇಹಿತರನ್ನ ಕಳುಹಿಸಿದ್ವಿ. ಚಂದ್ರಕಾಂತ್​ಗೆ ಒಬ್ಬ ಸಹೋದರ, ಸಹೋದರಿ ಇದ್ದಾಳೆ ಎಂದು ತಾಯಿ ಅಳುತ್ತಾ ಸಾವನ್ನಪ್ಪಿದ ಮಗನ ಬಗ್ಗೆ ಮಾತನಾಡಿದ್ದಾರೆ.

publive-image

ಇದನ್ನೂ ಓದಿ: ಚಂದು ನನ್ನ ಗಂಡ ಕಣೇ ಎಂದಿದ್ದಳು ಪವಿತ್ರಾ! ನಟನ ಸಾವಿನ ಬಗ್ಗೆ ಪತ್ನಿ ಶಿಲ್ಪಾ ಏನಂದ್ರು?

ಚಂದ್ರಕಾಂತ್​. ತ್ರಿನಯನಿ ಧಾರಾವಾಹಿ ಮೂಲಕ ತೆಲುಗು ರಾಜ್ಯದಲ್ಲಿ ಮನೆಮಾತಾದವರು. ಆದ್ರೆ ನಿನ್ನೆ ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 13ರಂದು ಮಂಡ್ಯದಲ್ಲಿ ನಡೆದ ಮೃತ ಪವಿತ್ರಾ ಜಯರಾಂ ಅಂತ್ಯಕ್ರಿಯೆಯಲ್ಲಿ ಚಂದು ಕೂಡ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment