/newsfirstlive-kannada/media/post_attachments/wp-content/uploads/2025/07/BABA_UP.jpg)
ಒಳಗೊಂದು ಹೊರಗೊಂದು ಮುಖ ಇಟ್ಕೊಳ್ಳುವ ವ್ಯಕ್ತಿಗಳಿಗೆ ನಾವು ಗೋಮುಖ ವ್ಯಾಘ್ರ ಎನ್ನುತ್ತಾರೆ. ಈ ಚಂಗೂರ್ ಬಾಬಾ ಅದೇ ಲಿಸ್ಟ್‌ಗೆ ಸೇರಿದ್ದ ವ್ಯಕ್ತಿಯಾಗಿದ್ದ. ಈತ ಅರೆಸ್ಟ್ ಆಗ್ತಾ ಇದ್ದಂತೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಬಾಬಾ ಇಷ್ಟೊಂದ್ ಖತರ್ನಾಕ್ ಇದ್ದಾನಾ ಅಂತಾ ಜನ ಆಡಿಕೊಂಡಿದ್ರು. ಆದ್ರೆ, ಇಲ್ಲಿಯವರೆಗೂ ಚಂಗೂರ್ ಬಾಬಾ ಬಗ್ಗೆ ಕೇಳಿದ್ದು ಏನೇನೂ ಅಲ್ಲ. ಆತ ಲವ್ ಜಿಹಾದ್‌ಗಾಗಿ 1,000 ಮುಸ್ಲಿಂ ಯುವ ಸೈನ್ಯ ಕಟ್ಟಿದ್ದು, ಲವ್ ಜಿಹಾದ್ ಬ್ರಿಗೇಡ್ ನಿರ್ಮಿಸಿದ್ದು, ಐಎಸ್‌ಐ ಸಂಪರ್ಕ, ಕೋಮುಗಲಭೆಯ ಸಂಚಿನ ಬಗ್ಗೆ ಕೇಳಿದ್ರೆ ಯಾರೇ ಆದ್ರೂ ಶಾಕ್ ಆಗೋದು ಪಕ್ಕಾ.
ಚಂಗೂರ್ ಬಾಬಾ ಈತ ನಮ್ಮ ನಿಮ್ಮ ಕಲ್ಪನೆಗೂ ಮೀರಿದ ವಿನಾಶಕಾರಿ ಬಾಬಾ. ಖತರ್ನಾಕ್‌ಗಳಲ್ಲೇ ಖತರ್ನಾಕ್ ಬಾಬಾ. ಈತ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯ ಮಾಧ್‌ಪುರ್ ಅನ್ನೋ ಕುಗ್ರಾಮದ ನಿವಾಸಿಯಾಗಿದ್ದ. ಕಳೆದ ವಾರ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಈ ಬಾಬಾ, ಈತನ ಆಪ್ತ ಸಹಾಯಕಿ ನೀತು ಅಲಿಯಾಸ್ ನಸ್ರೀನ್, ನಸ್ರೀನ್ ಪತಿ ಜಮಾಲುದ್ದೀನ್, ಚಂಗೂರ್ ಬಾಬಾ ಮಗ ಮೆಹಬೂಬ್ ಅನ್ನ ಎಟಿಸಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇನ್ನೊಂದ್ ಕಡೆ ಯೋಗಿ ಸರ್ಕಾರ ಆತನ ಅತ್ಯಾಧುನಿಕ ಐಷಾರಾಮಿ ಬಂಗಲೆಗೆ ಬುಲ್ಡೋಜರ್‌ಗಳನ್ನ ನುಗ್ಗಿಸಿ ಚಿಂದಿ ಚಿತ್ರನ್ನ ಮಾಡಿ ಬಿಟ್ಟಿದೆ. ನಿಜಕ್ಕೂ ಈ ಬಾಬಾನ ಜಾಲ ಹೇಗಿತ್ತು? ಇತನ ಸಂಚು ಎಂಥಾದ್ದು? ಅನ್ನೋದ್ ಒಂದೊಂದಾಗಿಯೇ ಹೊರಬರ್ತಿದೆ. ಅದನ್ನ ಕೇಳಿ ಸ್ವತಃ ಎಟಿಎಸ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಏನದು ಬಾಬಾ ಪುರಾಣ?.
1000 ಮುಸ್ಲಿಂ ಯುವ ಸೈನ್ಯ, ಮತಾಂತರಕ್ಕೆ ಹಣದ ಹೊಳೆ!
ತಲೆಗೆ ಟೋಪಿ, ಬಿಳಿ ಗಡ್ಡ ಬಿಟ್ಟಿರೋ ಈ ಚಂಗೂರ್ ಬಾಬಾ ಬಹುಮುಖ್ಯ ಉದ್ದೇಶವೇ ಭಾರತದಲ್ಲಿ ಹಿಂದೂಗಳ ಸಂಖ್ಯೆಯನ್ನ ಕಡಿಮೆ ಮಾಡಿ ಮುಸ್ಲಿಂ ಸಂಖ್ಯೆಯನ್ನ ಏರಿಸ್ಬೇಕು ಅನ್ನೋದಾಗಿತ್ತು. ಆದ್ರೆ, ಇದು ಅಷ್ಟು ಸುಲಭದಲ್ಲಿ ಆಗೋ ಕೆಲ್ಸ ಅಲ್ಲ ಅಂತಾ ಬಾಬಾಗೆ ಗೊತ್ತಿತ್ತು. ಹೀಗಾಗಿ ಅದ್ಕೆ ಈತ ಕಂಡುಕೊಂಡ ಮಾರ್ಗ ಅಂದ್ರೆ ಮತಾಂತರ. ಹಿಂದೂಗಳನ್ನ ಭಾರೀ ದೊಡ್ಡ ಸಂಖ್ಯೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡ್ಬೇಕು ಅಂತಾ ಸ್ಕೆಚ್ ರೂಪಿಸಿದ್ದ. ಹೀಗಾಗಿ ಹಿಂದೂಗಳು ದೇಶದಲ್ಲಿ ಯಾವ್ ಯಾವ್ ಜಿಲ್ಲೆಯಲ್ಲಿ ಜಾಸ್ತಿ ಇದ್ದಾರೆ ಅನ್ನೋದನ್ನ ನೋಟ್ ಮಾಡ್ಕೊಂಡಿದ್ದ. ಸದ್ಯ ಎಟಿಎಸ್ ಅಧಿಕಾರಿಗಳಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಬರೋಬ್ಬರಿ 579 ಜಿಲ್ಲೆಗಳನ್ನ ಟಾರ್ಗೆಟ್ ಮಾಡ್ಕೊಂಡಿದ್ದ ಅಂತಾ ಹೇಳಲಾಗ್ತಿದೆ. ಆ ಜಿಲ್ಲೆಯಲ್ಲಿರೂ ಮುಸ್ಲಿಂ ಯುವಕರನ್ನ ಬಳ್ಕೆ ಮಾಡ್ಕೊಂಡ್ ಲವ್ ಜಿಹಾದ್‌ಗೆ ಸ್ಕೆಚ್ ಹಾಕಿದ್ದ. ಅದನ್ನ ಜಾರಿಗೂ ತಂದಿದ್ದ.
ಈತನ ಜಾಲದಲ್ಲಿ ಸುಮಾರು 2000 ಜನ ಕೆಲ್ಸ ಮಾಡ್ತಾ ಇದ್ರು. ಅದ್ರಲ್ಲಿ ಸಾವಿರಕ್ಕೂ ಹೆಚ್ಚಿನ ಮುಸ್ಲಿಂ ಯುವಕರು ಲವ್ ಜಿಹಾದ್‌ಗೆ ತರಬೇತಿ ಪಡ್ಕೊಂಡಿದ್ರು. ಈ ತರಬೇತಿ ಪಡ್ಕೊಂಡ್ ಯುವಕರು ಹಿಂದೂ ಯುವತಿಗೆಯರಿಗೆ ಗಾಳ ಹಾಕ್ತಾ ಇದ್ರು. ಪ್ರೀತಿ ಪ್ರೇಮ ಅನ್ನೋ ಹೆಸರಲ್ಲಿ ಮದುವೆ ಮಾಡ್ಕೊಂಡ್ ಆಮೇಲೆ ಮತಾಂತರ ಮಾಡಿ ಬಿಡ್ತಾ ಇದ್ರು. ಅದ್ಕೂ ಮೊದಲು ಮುಸ್ಲಿಂ ಯುವಕರಿಗೆ ಮೈಂಡ್ ವಾಶ್ ಮಾಡಿ ಲವ್ ಜಿಹಾದ್ ಹೇಗೆ ಮಾಡ್ಬೇಕು ಅನ್ನೋ ಮಾರ್ಗ ತೋರಿಸ್ತಿದ್ದ. ಹಾಗೇ ಆ ಯುವಕರಿಗೆ ಬೇಕಾದಷ್ಟು ಹಣವನ್ನು ಕೊಡ್ತಾ ಇದ್ದ. ಹೀಗಾಗಿ 1000 ಕ್ಕೂ ಹೆಚ್ಚಿನ ಯುವಕರು ಲವ್ ಜಿಹಾದ್ ಕಾರ್ಯಾಚರಣೆಯಲ್ಲಿದ್ರು ಅನ್ನೋದ್ ಕನ್ಫರ್ಮ್ ಆಗಿದೆ.
ಚಾಕೊಲೇಟ್ ಬಾಯ್‌ಗಳ ಆಯ್ಕೆ, ಅವರಿಗೆ ಟ್ರೈನಿಂಗ್!
ದೇಶದಲ್ಲಿ ಲವ್ ಜಿಹಾದ್ ನಡೀತಾ ಇದೆ, ಹಿಂದೂ ಯುವತಿಯರೇ ಟಾರ್ಗೆಟ್ ಅನ್ನೋದ್ ಎಲ್ಲರಿಗೂ ಗೊತ್ತಿರೋ ವಿಚಾರ. ಯಾಕಂದ್ರೆ, ಅದ್ಕೆ ಸಂಬಂಧ ಪಟ್ಟಂತೆ ಆಗಾಗ ಕೇಸ್‌ಗಳು ದಾಖಲಾಗ್ತಾ ಇದ್ವು. ಪೊಲೀಸ್ರಿಗೆ ಅದ್ಕೆ ಸಂಬಂಧ ಪಟ್ಟ ಸಾಕ್ಷಿಗಳು ಸಿಕ್ತಾ ಇದ್ವು. ಆದ್ರೆ, ಮತಾಂತ್ರ ಮಾಡೋದಕ್ಕಾಗಿಯೇ ಒಂದು ಬ್ರಿಗೇಡ್ ಸ್ಥಾಪನೆ ಮಾಡ್ಕೊಂಡಿದ್ದಾರೆ. ಅಲ್ಲಿ ತರಬೇತಿ ನೀಡಲಾಗುತ್ತೆ. ಆ ಯುವಕರಿಗೆ ಬೇಕಾಗೋ ಹಣದ ವ್ಯವಸ್ಥೆಯನ್ನೂ ಮಾಡಲಾಗುತ್ತೆ. ಹಾಗೇ ಮತಾಂತರ ಮಾಡಿದ್ಮೇಲೆ ಬ್ರಾಹ್ಮಣ ಹುಡ್ಗಿಯಾಗಿದ್ರೆ ಇಂತಿಷ್ಟು ಲಕ್ಷ, ಕ್ಷತ್ರಿಯ ಹುಡ್ಗಿಯಾಗಿದ್ರೆ ಇಂತಿಷ್ಟು ಲಕ್ಷ ಅಂತಾ ಹಣ ಕೊಡಲಾಗ್ತಿತ್ತು. ಇದೀಗ ಅದೆಲ್ಲವೂ ರಿವೀಲ್ ಆಗಿದೆ. ಈ ಛಾಂಗೂರ್ ಬಾಬಾನ ಲವ್ ಜಿಹಾದ್ ಬ್ರಿಗೇಡ್ ಇದೇ ಕೆಲ್ಸ ಮಾಡ್ತಾ ಇತ್ತು. ಅದ್ಕೆ ಸುಮಾರು ಸಾವಿರಕ್ಕೂ ಹೆಚ್ಚು ಮುಸ್ಲಿಂ ಯುವಕರನ್ನ ನೇಮಕ ಮಾಡಿದ್ದ. ಯಾರು ನೋಡೋದಕ್ಕೆ ಸುಂದರವಾಗಿ ಇರ್ತಾರೋ? ಚಾಕೊಲೇಟ್ ಬಾಯ್‌ಗಳ ರೀತಿಯಲ್ಲಿ ಸುಂದರವಾಗಿ ಇರ್ತಾರೋ ಅಂತಾ ಯುವಕರಿಗೆ ಆಫರ್ ಕೊಡ್ತಾ ಇದ್ದ ಈ ಬಾಬಾ.
ಲವ್ ಜಿಹಾದ್ ಬ್ರಿಗೇಡ್‌ಗೆ ಆಯ್ಕೆ ಮಾಡ್ಕೊಂಡ್ ಹಾಗೇ ಬಿಟ್ರೆ ತಾನು ಅಂದ್ಕೊಂಡ್ ಕೆಲ್ಸ ಆಗಲ್ಲ ಅನ್ನೋದ್ ಬಾಬಾಗೆ ಗೊತ್ತಿತ್ತು. ಹೀಗಾಗಿ ಆತ ಏನ್ ಮಾಡ್ತಾನೆ ಅಂದ್ರೆ, ಆಯ್ಕೆಯಾದ ಯುವಕರಿಗೆ ಟ್ರೈನಿಂಗ್ ಕೊಡ್ಬೇಕು ಅಂತಾನೇ ದುಬೈಯಿಂದ ನುರಿತ ವ್ಯಕ್ತಿಗಳನ್ನ ಕರೆಯಿಸ್ತಿದ್ದ ಅಂತಾ ಹೇಳಲಾಗ್ತಿದೆ. ಅವರ ಮೂಲಕ ಯುವಕರಿಗೆ ಆರಂಭದಲ್ಲಿ ತಾವೊಬ್ಬ ಹಿಂದೂ ಆಗಿ ಹೇಗೆ ಗುರ್ತಿಸಿಕೊಳ್ಳಬೇಕು? ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಗಾಳ ಹಾಕ್ಬೇಕೂ ಅನ್ನೋದನ್ನ ಹೇಳಿಕೊಡ್ತಿದ್ರು. ಇದೆಲ್ಲವೂ ಇದೀಗ ಉಡೀಸ್ ಆಗಿರೋ ಈತನ ಐಶಾರಾಮಿ ಬಂಗಲೆಯ ನೆಲಮಾಳಿಗೆಯಲ್ಲಿ ನಡೀತಿತ್ತು ಅನ್ನೋದ್ ವಿಶೇಷ.
ISI ಸಂಪರ್ಕ? ಕೋಡ್ ವರ್ಡ್.. ಹಿಂದೂ ಹುಡ್ಗೀರ್ ನಾಪತ್ತೆ!
ಚಂಗೂರ್ ಬಾಬಾ ಸಾಮಾನ್ಯ ಬಾಬಾ ಅಲ್ಲವೇ ಅಲ್ಲ. ಇವನೊಬ್ಬ ಪ್ರಳಯಾಂತಕ ಬಾಬಾ. ನೋಡೋದಕ್ಕೆ ಒಂದು ಕುಗ್ರಾಮದಲ್ಲಿ ವಾಸವಾಗಿದ್ದ ಅಷ್ಟೇ, ಆದ್ರೆ ಈತನ ನೆಕ್‌ವರ್ಟ್ ಬೇರೆ ಬೇರೆ ದೇಶಕ್ಕೂ ವ್ಯಾಪಿಸಿತ್ತು. ಅಷ್ಟೇ ಅಲ್ಲ, ನಮ್ಮ ವಿರೋಧಿ ಪಾಕಿಸ್ತಾನದ ಐಎಸ್‌ಐ ಜೊತೆಗೂ ನೇರವಾಗಿ ಲಿಂಕ್ ಇಟ್ಕೊಂಡಿತ್ತು ಅಂತಾ ಹೇಳಲಾಗ್ತಿದೆ. ಈ ನಿಟ್ಟಿನಲ್ಲೂ ಎಟಿಎಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ.
ಈತ ಆಗಾಗ ಅರಬ್ ರಾಷ್ಟ್ರಗಳಿಗೆ ಪ್ರಯಾಣ ಮಾಡ್ತಾ ಇದ್ದ. ಇನ್ನು ನೇಪಾಳಕ್ಕೆ ಪದೇ ಪದೇ ಹೋಗಿ ಬರೋದು ಮಾಡ್ತಾ ಇದ್ದ. ಬಹುಶಃ ನೇಪಾಳದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಮೀಟಿಂಗ್ ನಡೆಸ್ತಾ ಇದ್ದ ಅಂತಾ ಹೇಳಲಾಗ್ತಿದೆ. ಈತ ತಾನು ಮಾಡೋ ಮತಾಂತರ ದಂದೆಗೆ, ಹಲ್ಕಾ ಕೆಲ್ಸಕ್ಕೆ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳ ನೆರವು ಪಡೆದಿರೋ ಸಾಧ್ಯತೆಯೂ ಇದೆ.
ಈ ಚಂಗೂರ್ ಬಾಬಾ ಅದೆಷ್ಟು ಖತರ್ನಾಕ್ ಆಗಿದ್ದ ಅಂದ್ರೆ, ಒಂದ್ ಕಡೆ ಐಎಸ್‌ಐ ಅಧಿಕಾರಿಗಳ ಜೊತೆ ಲಿಂಕ್ ಬಳಸಿದ್ದ. ಇನ್ನೊಂದ್ ಕಡೆ ತಾನು ಮಾಡ್ತಿರೋ ಖತರ್ನಾಕ್ ಬುದ್ದಿ ಗೊತ್ತಾಗ್ಬಾರದು ಅಂತಾನೇ ಮತಾಂತರಕ್ಕೆ ಕೋಡ್ ವರ್ಡ್‌ಗಳನ್ನ ಬಳಕೆ ಮಾಡ್ತಾ ಇದ್ದ. ಲವ್ ಜಿಹಾದ್ ಮಾಡು ಅನ್ನೋದಕ್ಕೆ, ಮತಾಂತರ ಮಾಡು ಅನ್ನೋದಕ್ಕೆ ಎಲ್ಲವೂ ಕೋಡ್ ವರ್ಡ್‌ನಲ್ಲಿಯೇ ವ್ಯವಹಾರ ನಡೆಸ್ತಿದ್ದ. ಲವ್ ಜಿಹಾದ್ ಬ್ರಿಗೇಡ್‌ಗೆ ನೇಮಕವಾಗಿದ್ದ 1,000ಕ್ಕೂ ಹೆಚ್ಚಿನ ಯುವಕರಿಗೆ ಈತ ಆ ಕೋಡ್ ವರ್ಡ್ ಬಗ್ಗೆ ಮನವರಿಗೆ ಮಾಡಿಕೊಡಲಾಗ್ತಾ ಇತ್ತು. ಕಾರಣ, ಏನಾದ್ರೂ ಅಪ್ಪಿ ತಪ್ಪಿ ಲವ್ ಜಿಹಾದ್ ಬ್ರಿಗೇಡ್‌ನ ಹುಡುಗರು ಸಿಕ್ಕಿಹಾಕಿ ಕೊಂಡ್ರೆ ತಾನು ತಗ್ಲಾಕೊಳ್ಳಬಾರದು ಅನ್ನೋದ್ ಈ ಬಾಬಾನ ಕುತಂತ್ರವಾಗಿತ್ತು.
ಇಲ್ಲಿಯವರೆಗೂ ಈ ಚಂಗೂರ್ ಬಾಬಾ ವಿರುದ್ಧ ಯಾರೊಬ್ಬರೂ ತುಟಿಕ್ ಪಿಟಿಕ್ ಅಂತಾ ಇರ್ಲಿಲ್ಲ. ಆದ್ರೆ, ಇದೀಗ ಬಾಬಾ ಅರೆಸ್ಟ್ ಆಗ್ತಾ ಇದ್ದಂತೆ, ಲವ್ ಜಿಹಾದ್‌ನ ಸಿಂಡಿಕೇಟ್‌ನ ಬಣ್ಣ ಬಟಾಬಯಲಾಗ್ತಾ ಇದ್ದಂತೆ ಒಬ್ಬೊಬ್ಬರೇ ಬಂದು ನಾಪತ್ತೆ ದೂರು ದಾಖಲು ಮಾಡ್ತಿದ್ದಾರೆ. ತಮ್ಮ ಮಗಳನ್ನ ಕಿಡ್ನಾಪ್ ಮಾಡಲಾಗಿದೆ. ತನ್ನ ಮಗಳನ್ನ ಲವ್ ಜಿಹಾದ್‌ಗೆ ಬೀಳಿಸಿಕೊಂಡು ಮತಾಂತರ ಮಾಡಲಾಗಿದೆ ಅಂತಾ ಉತ್ತರ ಪ್ರದೇಶ ಮತ್ತು ಅಕ್ಕ ಪಕ್ಕದ ರಾಜ್ಯದಲ್ಲಿ ಕಂಪ್ಲೇಂಟ್ ದಾಖಲಿಸ್ತಿದ್ದಾರೆ. ಚಂಗೂರ್ ಬಾಬಾ ಅರೆಸ್ಟ್ ಆದ್ಮೇಲೆ ಸುಮಾರು 20 ಕ್ಕೂ ಹೆಚ್ಚಿನ ದೂರು ದಾಖಲಾಗಿದ್ದು. ಹುಡ್ಗೀಯರು ಕಣ್ಮರೆಯಾಗಿದ್ದಾರೆ. ಆ ಹುಡ್ಗೀರು ಬದುಕಿದ್ದಾರೋ ಇಲ್ವೋ? ವಿದೇಶಕ್ಕೆ ಸರಬರಾಜು ಮಾಡಲಾಗಿದೆಯಾ? ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಕಪ್ಪು ಹಣ ಬಿಳಿಯಾಗಿಸೋ ಕಲೆ ಈ ಬಾಬಾಗೆ ಗೊತ್ತಿತ್ತು!
ಚಂಗೂರ್ ಬಾಬಾ , ನೀತು ಅಲಿಯಾಸ್ ನಸ್ರೀನ್, ನಸ್ರೀನ್ ಪತಿ ಜಮಾಲುದ್ದೀನ್, ಬಾಬಾ ಮಗ ಮೆಹಬೂಬ್ ಅನ್ನ ಎಟಿಎಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈಗಾಗಲೇ ಈ ಬಾಬಾನಿಗೆ ಸಂಬಂಧ ಪಟ್ಟ ಸುಮಾರು 40ಕ್ಕೂ ಹೆಚ್ಚಿನ ಬ್ಯಾಂಕ್ ಅಕೌಂಟ್‌ಗಳನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಹಾಗೇ 106 ಕೋಟಿ ರೂಪಾಯಿಯನ್ನ ವಶಕ್ಕ ಪಡ್ಕೊಂಡಿದ್ದಾರೆ. ಬಾಬಾನ ಹಲವಾರು ಅಕೌಂಟ್‌ಗಳು ವಿದೇಶಿ ಬ್ಯಾಂಕ್‌ಗಳದ್ದು. ಇನ್ನು ಅನಧಿಕೃತವಾಗಿ ಅದೆಷ್ಟು ದುಡ್ಡು ಮಾಡಿದ್ದಾನೋ ಗೊತ್ತಿಲ್ಲ. ಯಾಕಂದ್ರೆ, ಈತನಿಗೆ ದುಬೈ ಸೇರಿದಂತೆ ನಾನಾ ಅರಬ್ ದೇಶಗಳಿಂದ ಹಣದ ಹೊಳೆಯೇ ಹರಿದು ಬರ್ತಾ ಇತ್ತು. ಆ ಹಣದಲ್ಲಿ ಲವ್ ಜಿಹಾದ್ ಮಾಡಿಸೋದು, ಮತಾಂತರ ಮಾಡಿಸೋದು ಮಾಡಿಸ್ತಿದ್ದ. ಹಾಗೇ ತನ್ನ ಮಗನನ್ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸೇರಿಸ್ಬೇಕು ಅಂತಾ ಮಾಸ್ಟರ್ ಪ್ಲ್ಯಾನ್ ಮಾಡ್ಕೊಂಡಿದ್ದ.
ಹೌದು, ಈ ಬಾಬಾ ತನ್ನ ಮಗ ಮೆಹಬೂಬ್ ಅನ್ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸೇರುವಂತೆ ಮಾಡ್ಬೇಕು ಅನ್ನೋ ಛಲ ಹಠ ಇಟ್ಕೊಂಡಿದ್ದ. ಆ ಪ್ಲ್ಯಾನ್ ಪ್ರಕಾರವೇ ವಿದೇಶದಿಂದ ಭಾರೀ ಪ್ರಮಾಣದ ಹಣವನ್ನ ಸಂಗ್ರಹ ಮಾಡ್ತಿದ್ದ. ಸದ್ಯಕ್ಕೆ ಹಣದ ವ್ಯವಹಾರ ಎಲ್ಲವೂ ನಸ್ರೀನ್ ಬಳಿ ಇತ್ತು. ಆದ್ರೆ, ಸದ್ಯದಲ್ಲಿಯೇ ಅದೆಲ್ಲವನ್ನು ತನ್ನ ಮಗನಿಗೆ ಟ್ರಾನ್ಸ್‌ಫರ್ ಮಾಡಿಸೋ ಪ್ಲ್ಯಾನ್ ಇಟ್ಕೊಂಡಿದ್ದ. ಅದು ನಸ್ರೀನ್‌ಗೆ ಗೊತ್ತಾಗಿಯೇ ಬಾಬಾ ತಗ್ಲಾಕೊಂಡಿದ್ದಾನೆ.
ನೇಪಾಳ ಗಡಿಯಲ್ಲಿ ಮತಾಂತರ ಕೇಂದ್ರಕ್ಕೆ ಸಿದ್ಧತೆ!
ಛಾಂಗೂರ್ ಬಾಬಾನ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಅರೆಸ್ಟ್ ಮಾಡದೇ ಹೋಗಿದ್ರೆ ಆತ ಶೀಘ್ರದಲ್ಲಿಯೇ ಇನ್ನೊಂದ್ ವಿನಾಶಕಾರಿ ಹೆಜ್ಜೆ ಇಡೋದಕ್ಕೆ ರೆಡಿಯಾಗಿದ್ದ. ಅದೇನ್ ಅಂದ್ರೆ, ನೇಪಾಳ ಗಡಿಗೆ ಹೊಂದಿಕೊಂಡ ಭಾರತದಲ್ಲಿ ಮತಾಂತರ ಕೇಂದ್ರ ತೆರೆಯೋದಕ್ಕೆ ಸಿದ್ಧತೆ ಮಾಡ್ಕೊಂಡಿದ್ದ. ಅದಕ್ಕಾಗಿಯೇ ಈಗಾಗಲೇ 10 ಕೋಟಿ ಹಣವನ್ನೂ ವಿನಿಯೋಗಿಸಿದ್ದ ಅಂತಾ ಹೇಳಲಾಗ್ತಿದೆ.
ಇದನ್ನೂ ಓದಿ:ನಾಗರ ಪಂಚಮಿ ವಿಶೇಷ.. ಈ ಪ್ರದೇಶದಲ್ಲಿ ಜೀವಂತ ನಾಗರ ಹಾವುಗಳನ್ನು ಹಿಡಿದು ಏನ್ ಮಾಡ್ತಾರೆ ಗೊತ್ತಾ?
ಗಡಿಯಲ್ಲಿ ಮತಾಂತರ ಕೇಂದ್ರ ಸ್ಥಾಪನೆ ಮಾಡೋ ಮುಖ್ಯ ಉದ್ದೇಶ ಭಾರತ ಮತ್ತು ನೇಪಾಳ ಆಗಿತ್ತು. ಈ ಎರಡೂ ರಾಷ್ಟ್ರದಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡ್ಬೇಕು. ಅದು ಆಗ್ಬೇಕು ಅಂತಾದ್ರೆ ಮುಸ್ಲಿಂ ಯುವಕರಿಗೆ ತರಬೇತಿ ನೀಡ್ಬೇಕು. ಆ ತರಬೇತಿಗೆ ಇದನ್ನೇ ಕೇಂದ್ರವಾಗಿಸ್ಕೊಳ್ಳಬೇಕು ಅನ್ನೋದಾಗಿತ್ತು. ಹಾಗೇ ಗಡಿಯಲ್ಲಿರೋ 46 ಗ್ರಾಮಗಳ ಯುವಕರ ಮೇಲೂ ಕಣ್ಣು ಹಾಕಿದ್ದ. ಇಂತಾವೊಂದ್ ಉದ್ದೇಶ ಇಟ್ಕೊಂಡ್ ಕೇಂದ್ರವನ್ನ ತೆರೆಯೋದಕ್ಕೆ ಭಾರೀ ಸಿದ್ಧತೆ ಮಾಡ್ಕೊಂಡಿದ್ದ. ಅಷ್ಟರಲ್ಲೇ ಎಟಿಎಸ್ ಆಧಿಕಾರಿಗಳು ಬಾಬಾನ ಬೆನ್ನೆಲುಬು ಮುರಿದ್ದಿದ್ದಾರೆ.
500 ಕೋಟಿ ಒಡೆಯ
ಇನ್ನೊಂದ್ ಗಮನಿಸ್ಬೇಕಾದ ವಿಷ್ಯ ಅಂದ್ರೆ, ಈತ ಕೇವಲ ಸೈಕಲ್ ಮೇಲೆ ತಾಯ್ತಾ ಮಾರ್ತಾ ಇದ್ದವನು ಸುಮಾರು 500 ಕೋಟಿ ಒಡೆಯನಾಗಿದ್ದಾನೆ, ಲವ್ ಜಿಹಾದ್ ಬ್ರಿಗೇಟ್ ಮಾಡ್ಕೊಂಡಿದ್ದಾನೆ ಅನ್ನೋದ್ ಸ್ಥಳೀಯರಿಗೆ ಗೊತ್ತಿರ್ಲ್ವಾ? ಖಂಡಿತವಾಗಿಯೂ ಗೊತ್ತಿತ್ತು. ಬಟ್, ದೂರು ಕೊಡೋದಕ್ಕೆ ಭಯ ಬೀಳುತ್ತಿದ್ದರು.
ಈ ಬಾಬಾ ಉಂಡ ಮನೆಗೆ ದ್ರೋಹ ಬಗೆಯೋ ವ್ಯಕ್ತಿಯಾಗಿದ್ದ. ಸಮಾಜದಲ್ಲಿ, ದೇಶದಲ್ಲಿ ಏನೇನ್ ವಿನಾಶ ಮಾಡಲು ಸಾಧ್ಯನೋ ಅದೆಲ್ಲದಕ್ಕೂ ಕೈ ಜೋಡಿಸಿದ್ದ. ಹಾಗಾದ್ರೆ, ಈತನ ಕೃತ್ಯ ಸ್ಥಳೀಯರಿಗೆ ಗೊತ್ತಿರಲಿಲ್ವಾ? ಖಂಡಿತ ಗೊತ್ತಿತ್ತು. ಆದ್ರೆ, ಅವ್ರು ಸ್ಟೇಷನ್ ಮೆಟ್ಟಿಲು ಏರೋದಕ್ಕೆ ಭಯ ಬೀಳುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ