/newsfirstlive-kannada/media/post_attachments/wp-content/uploads/2024/11/Hd-Devegowda-on-nikhil-kumaraswamy-1.jpg)
ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ಜಿದ್ದಾಜಿದ್ದಿ ರಂಗೇರಿದ್ದು, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ಖುದ್ದು ಹೆಚ್.ಡಿ ದೇವೇಗೌಡರು ಅಖಾಡಕ್ಕೆ ಇಳಿದಿದ್ದಾರೆ. ಮೊದಲ ದಿನ ಚನ್ನಪಟ್ಟಣ ಕ್ಷೇತ್ರದ 5 ಕಡೆ ದೇವೇಗೌಡರು ಬಿರುಸಿನ ಪ್ರಚಾರ ನಡೆಸಿದರು. ಮೈತ್ರಿ ಅಭ್ಯರ್ಥಿಗೆ ಮತಯಾಚಿಸಿದ ದೇವೇಗೌಡರು, ರಾಜಕೀಯ ಎದುರಾಳಿಗೆ ಖಡಕ್ ಸಂದೇಶ ನೀಡಿ ಅಕ್ಷರಶಃ ಅಬ್ಬರದ ಮಾತುಗಳನ್ನಾಡಿದರು.
ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಹೆಚ್.ಡಿ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಅವರನ್ನ ವಿಧಾನಸಭೆಗೆ ಕಳುಹಿಸುವ ಯಾವ ಸಂಶಯವೂ ನಮಗೆ ಇಲ್ಲ. ಇದು ನನ್ನ ಪ್ರಾಮಾಣಿಕ ಮಾತು. ನನಗೆ ವಯಸ್ಸಿನ ಪ್ರಶ್ನೆ ಅಲ್ಲ, ಇದು ಪಕ್ಷದ ಪ್ರಶ್ನೆ. ಇವತ್ತು ನನ್ನ ಮೊಮ್ಮಗ ಅಭ್ಯರ್ಥಿ ಆಗಿದ್ದಾನೆ. ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾಗಿದ್ದಾರೆ. ನಾನು ರಾಷ್ಟ್ರೀಯ ಘಟಕದ ಅಧ್ಯಕ್ಷನಾಗಿದ್ದೇನೆ. ನಾನು ಈ ಪಕ್ಷ ಉಳಿಸಲು ಬಂದಿದ್ದೇನೆ ಎಂದರು.
/newsfirstlive-kannada/media/post_attachments/wp-content/uploads/2024/11/dk-shivakumar.jpg)
ನನಗೆ ಆರೋಗ್ಯ ಸಮಸ್ಯೆ ಸರಿ ಇಲ್ಲ, ನನಗೆ ಮಂಡಿ ನೋವಿದೆ. ಈ ಸರ್ಕಾರದ ಬಗ್ಗೆ ನಾನು ಗುಣಗಾನ ಮಾಡೋಕೆ ಬಂದಿಲ್ಲ. ಮಂಡ್ಯ ಜಿಲ್ಲೆಯ ಜನರು ಕುಮಾರಸ್ವಾಮಿಯನ್ನು ಲೋಕಸಭೆಗೆ ಕಳುಹಿಸಿದ್ದಾರೆ. ಪ್ರಧಾನಿಗಳು ನಿಲ್ಲಲೇಬೇಕು ಎಂದು ಹಠ ಮಾಡಿದ್ರಿಂದ ಅವರು ಲೋಕಸಭಾ ಚುನಾವಣೆಗೆ ನಿಲ್ಲಲೇಬೇಕಾಯಿತು. ಅವರಿಂದ ರಾಜೀನಾಮೆ ಆದ ಚನ್ನಪಟ್ಟಣ ಕ್ಷೇತ್ರ ಈಗ ಖಾಲಿಯಾಗಿದೆ.
ಇದನ್ನೂ ಓದಿ: ₹500 ಕೋಟಿ ಲೂಟಿ.. ವಸೂಲಿಗೆ ರೇಟ್ ಫಿಕ್ಸ್? ಅಬಕಾರಿ ಸಚಿವರ ಮೇಲೆ ಲೋಕಾಯುಕ್ತಕ್ಕೆ ದೂರು
ಡಿ.ಕೆ ಬ್ರದರ್ಸ್‌ಗೆ ಹೆಚ್‌ಡಿಡಿ ತಿರುಗೇಟು!
ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಹೆಸರನ್ನು ಪ್ರಸ್ತಾಪಿಸದ ಹೆಚ್.ಡಿ ದೇವೇಗೌಡರು ಮಾತಿನಲ್ಲೇ ತಿರುಗೇಟು ಕೊಟ್ಟರು. ಮೂರು ತಿಂಗಳು ದೇವೇಗೌಡರು ಅಂತಾರಾಷ್ಟ್ರೀಯ ಕ್ರಿಮಿನಲ್ ಆಗಿದನಾ? ನಿಮ್ಮ ಮುಂದೆ ಎದೆ ಚಾಚಿ ಮಾತಾಡ್ತೀನಿ. ಇನ್ನು ನಾಲ್ಕಾರು ವರುಷ ಬದುಕಿರುತ್ತೇನೆ. ಕೊನೆ ಉಸಿರು ಇರೋವರೆಗೆ ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.
ಆರು ತಿಂಗಳಿಂದ ಅಣಕದ ಮಾತನಾಡಿದ್ದಾರೆ. ನಾನು ವೆಂಟಿಲೇಟರ್‌ನಲ್ಲೂ ಭಾಷಣ ಮಾಡೋಕೆ ಬರ್ತೇನೆ ಎಂದು ಬಹಳ ಲಘುವಾಗಿ ಮಾತಾಡಿದರು. ನಾನು ಅವರ ಹೆಸರು ತೆಗೆದು ಮಾತಾಡಲ್ಲ. ಇಗ್ಗಲೂರು ಕಟ್ಟಿದವರು ಯಾರು? ಗೋಲಿಬಾರ್ ನಿಂದ ಸತ್ತರಲ್ಲ ಆ ಪ್ರಕರಣದ ಬಗ್ಗೆ ಸ್ವಲ್ಪ ಸ್ಮರಿಸೋಕೆ ಹೇಳಿ. ನಾನು ನಿಮ್ಮ ಮುಂದೆ ಕೂತಿದ್ದೇನೆ. ಯಾವ ವೆಂಟಿಲೇಟರ್ ಇಲ್ಲ, ಕೈಯೂ ನಡಗಲ್ಲ ಯಾಕೆ ಎನ್ನುತ್ತಾ ಡಿ.ಕೆ ಬ್ರದರ್ಸ್ ಮಾತುಗಳಿಗೆ ದೇವೇಗೌಡರು ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us