/newsfirstlive-kannada/media/post_attachments/wp-content/uploads/2024/08/CP_YOGESHWARA_NIKHIL.jpg)
ರಾಮನಗರ: ಜಿದ್ದಾಜಿದ್ದಿಯ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು, ಮೂರು ಪಕ್ಷದ ನಾಯಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಚನ್ನಪಟ್ಟಣದ ಮೆಗಾ ಯುದ್ಧದಲ್ಲಿ ಯಾರ್ ಗೆಲ್ತಾರೆ ಅನ್ನೋದು ಇಡೀ ರಾಜ್ಯದ ಕುತೂಹಲದ ಕೇಂದ್ರಬಿಂದು ಆಗಿದೆ.
ಇದನ್ನೂ ಓದಿ: 30 ಸಾವಿರ ಅಂತರದಲ್ಲಿ ಚನ್ನಪಟ್ಟಣ ಗೆಲುವು.. ಸಿಎಂ, ಡಿಸಿಎಂಗೆ ರಹಸ್ಯ ವರದಿ ನೀಡಿದ ಸಿ.ಪಿ ಯೋಗೇಶ್ವರ್!
ಚನ್ನಪಟ್ಟಣ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿರುವಾಗ ಜಿಲ್ಲಾಡಳಿತ ಫಲಿತಾಂಶಕ್ಕೆ ಸಕಲ ತಯಾರಿಯನ್ನು ಕೈಗೊಂಡಿದೆ. ತೀವ್ರ ಜಿದ್ದಾಜಿದ್ದಿಯ ಚನ್ನಪಟ್ಟಣ ಕ್ಷೇತ್ರಕ್ಕೆ ವಿಶೇಷ ಭದ್ರತೆ ಒದಗಿಸಲು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಮುಂದಾಗಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಯಶವಂತ್ ಅವರು ಚನ್ನಪಟ್ಟಣ ಉಪಚುನಾವಣೆಯ ಮತಎಣಿಕೆಯ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಚನ್ನಪಟ್ಟಣದಲ್ಲಿ ಶಾಂತಿಯುತ ಚುನಾವಣೆ ಮುಗಿದಿದೆ. ನವೆಂಬರ್ 23ರಂದು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತಎಣಿಕಾ ಕಾರ್ಯ ನಡೆಯಲಿದೆ ಎಂದಿದ್ದಾರೆ.
ಮತ ಎಣಿಕೆ ಕಾರ್ಯ ಹೇಗಿರುತ್ತೆ?
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 2 ಲಕ್ಷ 60 ಸಾವಿರದ 886 ಮತಗಳು ಚಲಾವಣೆ ಆಗಿದೆ. ಮೂರು ಕೊಠಡಿಗಳಲ್ಲಿ ಈ ಮತ ಎಣಿಕಾ ಕಾರ್ಯ ನಡೆಯಲಿದೆ. ಒಟ್ಟು 14 ಟೇಬಲ್‌ನಲ್ಲಿ 69 ಸಿಬ್ಬಂದಿ ಮತ ಎಣಿಕೆಯಲ್ಲಿ ಭಾಗಿಯಾಗಲಿದ್ದು, ಒಟ್ಟು 20 ಸುತ್ತುಗಳ ಮತ ಎಣಿಕೆಯ ಬಳಿಕ ಫಲಿತಾಂಶ ಪ್ರಕಟ ಮಾಡಲಾಗುತ್ತಿದೆ.
ಶನಿವಾರ ಬೆಳಗ್ಗೆ 6:30ಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಲಾಗುತ್ತದೆ. ಬೆಳಗ್ಗೆ 7:30ಕ್ಕೆ ಮತ ಎಣಿಕೆ ಕಾರ್ಯ ಆರಂಭ ಆಗಲಿದ್ದು, ಮೊದಲು ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆ ಬಳಿಕ ಇವಿಎಂ ಮತ ಎಣಿಕೆ ಆರಂಭವಾಗಲಿದೆ. ಸಿಸಿಟಿವಿ ಕಣ್ಗಾವಲಿನ ಜೊತೆಗೆ ಮತ ಎಣಿಕಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.
ನಾಳೆ ಸಂಜೆಯಿಂದಲೇ ರಾಮನಗರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗಲಿದ್ದು, ಮದ್ಯಮಾರಾಟ ಬಂದ್ ಮಾಡಲಾಗುತ್ತಿದೆ. ಚನ್ನಪಟ್ಟಣದ ಚುನಾವಣೆಯ ಭದ್ರತೆಗೆ ಪ್ಯಾರಾಮಿಲಿಟರಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದು, ವಿಜಯೋತ್ಸವ, ಪಟಾಕಿ ಸಿಡಿಸಲು ಅವಕಾಶ ಇಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಎಚ್ಚರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ