/newsfirstlive-kannada/media/post_attachments/wp-content/uploads/2024/11/Ramnagar-1.jpg)
ಚನ್ನಪಟ್ಟಣ ಉಪ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಪಾಲಿಗೆ ಇದು ಪ್ರತಿಷ್ಠೆಯ ಕದನವಾಗಿದೆ. ಇದೇ ಕಾರಣಕ್ಕೆ ಉಪ ಕದನವನ್ನು ಗೆಲ್ಲಲೇ ಬೇಕೆಂದು ಪಣತೊಟ್ಟಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೂ ತೆರಳಿ, ಅಬ್ಬರದ ಪ್ರಚಾರದ ಮೂಲಕ ಮತಬೇಟೆಯಾಡ್ತಿದ್ದಾರೆ. ಇದರ ಜೊತೆಗೆ ವಿವಿಧ ಆಮಿಷಗಳ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿರುವ ಅನುಮಾನ ಮೂಡಿದೆ.
ರಾಮನಗರ ಜಿಲ್ಲೆಯ ಭೀಮೇನಹಳ್ಳಿ ಬಳಿಯ ಗೋಡೌನ್​ವೊಂದರಲ್ಲಿ ಅಪಾರ ಪ್ರಮಾಣದ ಸೀರೆ, ಪಂಚೆ, ಶರ್ಟ್​ಗಳು ಪತ್ತೆ ಆಗಿವೆ. ಖಚಿತ ಮಾಹಿತಿ ಮೇರೆಗೆ ಎಸಿ ಬಿನೋಯ್ ನೇತೃತ್ವದಲ್ಲಿ ಸ್ಟೋರಿ ಫ್ಯಾಷನ್ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸಂಗ್ರಹಿಸಿಟ್ಟಿದ್ದ ಸೀರೆ, ಪಂಚೆಗಳ ಬಂಡಲ್​ಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕೊ*ಲೆ, ಸೇಲಂನಲ್ಲಿ ಮೃತದೇಹ; ಸಾಫ್ಟ್‌ವೇರ್ ದಂಪತಿ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು!
/newsfirstlive-kannada/media/post_attachments/wp-content/uploads/2024/11/ramnagar.jpg)
ಮತದಾರರಿಗೆ ಹಂಚಲು ಸೀರೆ, ಪಂಚೆ ಸಂಗ್ರಹಿರುವ ಶಂಕೆ
ಚನ್ನಪಟ್ಟಣ ಉಪ ಚುನಾವಣೆ ವೇಳೆಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೀರೆ, ಪಂಚೆಗಳು ಸಿಕ್ಕಿರೋದು, ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಶಂಕೆ ವ್ಯಕ್ತವಾಗಿದೆ. ಆದ್ರೆ, ಬಂಡಲ್, ಬಾಕ್ಸ್ ಮೇಲೆ ಯಾವುದೇ ಪಕ್ಷದ ಚಿಹ್ನೆಯೂ ಇಲ್ಲ.
ಪೊಲೀಸರಿಂದ ಗೋಡೌನ್ ಮಾಲೀಕ, ಸಿಬ್ಬಂದಿಯ ವಿಚಾರಣೆ
ಸ್ಟೋರಿ ಫ್ಯಾಷನ್ ಕಂಪನಿಯ ಗೋಡೌನ್ ಇದಾಗಿದ್ದು, ಸದ್ಯ ಪೊಲೀಸರು ಗೋಡೌನ್​ ಮಾಲೀಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇಷ್ಟೊಂದು ಪ್ರಮಾಣದ ಸೀರೆ, ಪಂಚೆಗಳು ಯಾರಿಗೆ ಸೇರಿದ್ದು, ಯಾಕೆ ಸಂಗ್ರಹಿಸಲಾಗಿತ್ತು ಎಂದು ವಿಚಾರಣೆ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Ramnagar-2.jpg)
ಇದನ್ನೂ ಓದಿ: ನಾಡಿನೆಲ್ಲೆಡೆ 69ನೇ ಕರ್ನಾಟಕ ರಾಜ್ಯೋತ್ಸವ.. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವ ಜನತೆ
ಒಟ್ಟಾರೆ. ಚನ್ನಪಟ್ಟಣ ಉಪ ಚುನಾವಣೆ ಟೈಮ್​ನಲ್ಲೇ ಪತ್ತೆ ಆಗಿರೋದು ಹಲವು ಅನುಮಾನಗಳಿಗೆ ನಾಂದಿಯಾಡಿದೆ. ಮತದಾರರಿಗೆ ಹಂಚಲು ಸೀರೆ, ಪಂಚೆ ಸಂಗ್ರಹಿಸಿದ್ದರಾ ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us