/newsfirstlive-kannada/media/post_attachments/wp-content/uploads/2024/08/NIKHIL.jpg)
ರಾಮನಗರ: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪಚುನಾವಣೆಗೆ ಮತದಾನ ಬಿರುಸಾಗಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಕ್ಷೇತ್ರದ ಮತದಾರರು ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 3 ಉಪಚುನಾವಣಾ ಕ್ಷೇತ್ರದಲ್ಲಿ ಚನ್ನಪಟ್ಟಣದಲ್ಲಿ ಶೇಕಡಾವಾರು ಮತದಾನ ಹೆಚ್ಚು ಕಂಡು ಬರುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. ಬೆಳಗ್ಗೆ 7 ರಿಂದ 11 ಗಂಟೆಯ ಹೊತ್ತಿಗೆ ಶೇ.27.02ರಷ್ಟು ಮತದಾನ ದಾಖಲಾಗಿದೆ. ಯುವಕರು, ಯುವತಿಯರು, ವಯೋವೃದ್ಧರಾದಿಯಾಗಿ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: By-Election: ಮೂರು ಕ್ಷೇತ್ರಗಳಿಗೂ ಮತದಾನ ಶುರು; ಒಟ್ಟು ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ..?
ಬೆಳಗ್ಗೆ 11 ಗಂಟೆ ಹೊತ್ತಿಗೆ ಮೂರೂ ಕ್ಷೇತ್ರಗಳ ಶೇಕಡಾವಾರು ಮತದಾನ ಹೀಗಿದೆ
1. ಚನ್ನಪಟ್ಟಣ - ಶೇ. 27.02
2. ಸಂಡೂರು - ಶೇ. 25.96
3. ಶಿಗ್ಗಾಂವಿ - ಶೇ. 26.01
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ತಮ್ಮ ಸ್ವಗ್ರಾಮ ಚಕ್ಕೆರೆಯಲ್ಲಿ ದಂಪತಿ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ. ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಗೆ ಆಗಮಿಸಿದ ಯೋಗೇಶ್ವರ್ ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರಿಗೆ ಪತ್ನಿ ಶೀಲಾ ಯೋಗೇಶ್ವರ್ ಸಾಥ್ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಬಿಜೆಪಿ ಝೀರೋ!
ಮತದಾನದ ಬಳಿಕ ಮಾತನಾಡಿರುವ ಸಿ.ಪಿ ಯೋಗೇಶ್ವರ್ ಅವರು, ಈ ಉಪಚುನಾವಣೆ ನಮ್ಮ ಪರವಾಗಿ ಇದೆ. ಹಳೇ ಮೈಸೂರು ಭಾಗದಲ್ಲಿ ಬೈ ಎಲೆಕ್ಷನ್ ನಡೆಯುತ್ತಿರುವುದರಿಂದ ಇಷ್ಟೊಂದು ಪ್ರಾಮುಖ್ಯತೆ ಬಂದಿದೆ. ಈ ಚುನಾವಣೆ ಸರ್ಕಾರದ ಯೋಜನೆ, ಅಭಿವೃದ್ಧಿಗಳ ಬಗ್ಗೆ ಜನರು ಸರ್ಟಿಫಿಕೇಟ್ ಕೊಡುತ್ತಾರೆ. ಚುನಾವಣೆ ಗೆದ್ದ ಬಳಿಕ ರಾಜ್ಯ ಸರ್ಕಾರ ಮತ್ತಷ್ಟು ಭದ್ರವಾಗಲಿದೆ. ಜನರು ನಮ್ಮ ಪರವಾಗಿ ಇದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷ ಅಸ್ತಿತ್ವವೇ ಇಲ್ಲ. ನಾನು ಪಕ್ಷ ಬಿಟ್ಟು ಬಂದ ಮೇಲೆ ಬಿಜೆಪಿ ಇಲ್ಲಿ ಝೀರೋ. ಅವರ ರಾಜಕೀಯ ತಂತ್ರಗಾರಿಕೆ ಇಲ್ಲಿ ವರ್ಕೌಟ್ ಆಗುವುದಿಲ್ಲ ಎಂದಿದ್ದಾರೆ.
ಇನ್ನು, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಇಂದು ಚನ್ನಪಟ್ಟಣದಲ್ಲಿ ಟೆಂಪಲ್ ರನ್ ನಡೆಸಿದ್ದಾರೆ. ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಿಖಿಲ್, ತಮ್ಮ ಗೆಲುವಿಗೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೆಂಗಲ್ ಆಂಜನೇಯ ಸ್ವಾಮಿ ಬಳಿ ಬೇಡಿಕೊಂಡ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಜೆಡಿಎಸ್ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ನಿಖಿಲ್, ಗೆಲುವಿನ ವಿಶ್ವಾಸ ಹೇಗಿದೆ ಎಂಬ ಮಾಹಿತಿ ಪಡೆದರು.
ಕ್ಷೇತ್ರದ ಮತದಾರರು ನಾಮಪತ್ರ ಸಲ್ಲಿಸಿದ ದಿನದಿಂದಲೂ ನನಗೆ ಆತ್ಮವಿಶ್ವಾಸ ಮೂಡಿಸಿದ್ದಾರೆ. ಒಬ್ಬ ಯುವಕನಿಗೆ ಪರೀಕ್ಷೆ ಮಾಡ್ತಾರೆ ಎಂಬ ವಿಶ್ವಾಸವಿದೆ. ನನಗೆ ಎರಡು ಚುನಾವಣೆ ಯಾವ ರೀತಿ ನಡೆದುಕೊಂಡು ಬಂದಿದ್ದೇನೆ. ವಿರೋಧ ಪಕ್ಷಕ್ಕೆ ನಾನು ಪ್ರಾಮುಖ್ಯತೆ ಕೊಟ್ಟಿಲ್ಲ, ಮಹತ್ವ ಕೊಡಲಿಲ್ಲ. ನನಗೆ ಇರೋದು ಒಂದೇ ದೇವೇಗೌಡ, ಕುಮಾರಣ್ಣನ ಕೊಡುಗೆ. ಜೊತೆಯಲ್ಲಿ ಚನ್ನಪಟ್ಟಣ ಹೇಗೆ ಇರಬೇಕು ಎಂಬ ಕಲ್ಪನೆ ಇದೆ. ಅದನ್ನ ಚರ್ಚೆ ಮಾಡಿದ್ದೇನೆ. ಉಳಿದಿದ್ದು ಚನ್ನಪಟ್ಟಣ ಜನತೆಗೆ ಬಿಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ