/newsfirstlive-kannada/media/post_attachments/wp-content/uploads/2024/10/WhatsApp-Image-2024-10-23-at-10.45.37-PM.jpeg)
ಸೈನಿಕ ತುದಿಗಾಲಲ್ಲಿ ನಿಂತಿದ್ರೂ, ಸಾರಥಿ ಬಾಚಿ ತಬ್ಬಲು ಸಜ್ಜಾಗಿದ್ರು. ಬಿಜೆಪಿ ತೊರೆದು ಕಾಂಗ್ರೆಸ್ ಮನೆ ಸೇರಿದ ಯೋಗೇಶ್ವರ್ ವಿಚಾರ ಮುಗಿದು ಹೋದ ಅಧ್ಯಾಯ. ಆದ್ರೆ, ಚನ್ನಪಟ್ಟಣದ ಮೈತ್ರಿಗೆ ಸಂಕಷ್ಟ ಮಾತ್ರ ತಂದೊಡ್ಡಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸುವ ಚಾನ್ಸ್​​ ಬಗ್ಗೆ ಲೆಕ್ಕ ಹಾಕಿದ್ದ ಅಲಯನ್ಸ್​​​ ಪಡೆ, ಆ ಲೆಕ್ಕಾಚಾರಗಳನ್ನೇಲ್ಲ ಕಾಂಗ್ರೆಸ್​​​ ತಲೆಕೆಳಗು ಮಾಡಿದೆ.
ಡಿಸಿಎಂ ಡಿಕೆಶಿ ಮಾಸ್ಟರ್​ಸ್ಟ್ರೋಕ್​​ಗೆ ದಳಪತಿ ಗಲಿಬಿಲಿ!
ಈ ಕಾಂಬಿನೇಷನ್​​ ಮೊದಲೇ ಅರಿತಿದ್ದ ದಳಪತಿ, ಸವಾಲಿನ ಸಮುದ್ರ ಈಜಬೇಕಿದೆ. ಆದ್ರೆ ಅಭ್ಯರ್ಥಿ ಯಾರು ಅನ್ನೋದನ್ನ ನಿರ್ಧರಿಸುವಲ್ಲಿಯೇ ಜೆಡಿಎಸ್​ಗೆ ಬೆಟ್ಟದಂತ ಸ್ಪರ್ಧೆ ಎದುರಿಸಬೇಕಾಗಿದೆ. ಕ್ಷೇತ್ರದ ಟಿಕೆಟ್​​ಗೆ ನಾಲ್ವರು ಮುಂಚೂಣಿಯಲ್ಲಿದ್ದು ಯಾರಿಗೆ ಟಿಕೆಟ್​ ಒಪ್ಪಿಸಿದ್ರೆ ಗೆಲ್ಲಬಹುದು ಅನ್ನೋ ಮಂಥನಕ್ಕೆ ದಳಪತಿಗಳು ಕೂತಿದ್ದಾರೆ. ಈ ನಡುವೆ ಮೊಮ್ಮಗ ನಿಖಿಲ್​ ಕರೆಸಿಕೊಂಡ ಜೆಡಿಎಸ್​ ವರಿಷ್ಠ ದೇವೇಗೌಡ್ರು ಚರ್ಚೆ ನಡೆಸಿರೋದು ಕುತೂಹಲಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ಮೈತ್ರಿ ರಣ ತಂತ್ರಕ್ಕೆ ಕೈಕೊಟ್ಟ ಸೈನಿಕ; ದಳಪತಿಗೆ ಬಿಗ್​ ಟೆನ್ಶನ್, ಕಾರಣ ಇಲ್ಲಿದೆ..
ಈ ನಾಲ್ವರಲ್ಲಿ ಮೈತ್ರಿ ಪಡೆಗೆ ಯಾರು ಹಿತವರು?
ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಬಯಸಿದ್ದ ದಳಪತಿ, ಅದಕ್ಕಾಗಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ನಿಲ್ಲಿಸುವ ಲೆಕ್ಕಾಚಾರ ಇತ್ತು. ಆದ್ರೆ, ಈಗ ನೇರ ಹಣಾಹಣಿ ಕಾರಣಕ್ಕೆ ಪ್ಲಾನ್​​​ ಚೇಂಜ್​​ ಆಗಿದೆ. ನಿಖಿಲ್​​ ಬದಲಿಗೆ ಅನಿತಾ ಕುಮಾರಸ್ವಾಮಿ ಹೆಸರು ತೇಲಿ ಬರುತ್ತಿದ್ದು, ಆ ಅವಕಾಶದ ಸಾಧ್ಯತೆ ಕಡಿಮೆ ಇದೆ.. ಆದ್ರೆ 3ನೇ ಅಭ್ಯರ್ಥಿ ಮಾತ್ರ ಅಚ್ಚರಿ ಡಿ.ಕೆ.ಸುರೇಶ್​ರನ್ನ ಕಟ್ಟಿಹಾಕಿದ್ದ ಡಾ.ಸಿ.ಎನ್.ಮಂಜುನಾಥ್ ಟ್ರಿಕ್ ಬಳಸಲು ಪ್ಲಾನ್​​ ಏನೋ ಇದೆ. ಅದಕ್ಕಾಗಿ ಗೌಡರ ಪುತ್ರಿ ಮಂಜುನಾಥ್​​ರ ಪತ್ನಿ ಅನಸೂಯಾ ಹೆಸರು ಪಟ್ಟಿಯಲ್ಲಿದೆ. ಆದ್ರೆ, ಮಂಜುನಾಥ್​ ಗ್ರೀನ್​ ಸಿಗ್ನಲ್​ ನೀಡುತ್ತಿಲ್ಲ. ಫೈನಲಿ ಜೆಡಿಎಸ್​ನ ಲೋಕಲ್​ ಲೀಡರ್​​ ಜಯಮುತ್ತು ಪರ ಗೌಡರ ಚಿತ್ತ ನೆಟ್ಟಿದೆ. ಕುಟುಂಬ ರಾಜಕಾರಣ ಇಲ್ಲ ಅನ್ನೋದನ್ನ ಸಾರಿ, ಸಾಮಾನ್ಯ ಕಾರ್ಯಕರ್ತನ ಹಣೆಪಟ್ಟಿ ಮೇಲೆ ಎಲೆಕ್ಷನ್​ ನಡೆಸುವ ಲೆಕ್ಕಾಚಾರವೂ ಇದೆ.
/newsfirstlive-kannada/media/post_attachments/wp-content/uploads/2024/10/CHANNAPATTANA-PROBLEM-1.jpg)
ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವು.. 5 ಬಾರಿ ಪಕ್ಷದಿಂದ ಪಕ್ಷಕ್ಕೆ ಜಂಪ್; ಸಿ.ಪಿ ಯೋಗೇಶ್ವರ್ ರಾಜಕೀಯದ ಇತಿಹಾಸ ಇಲ್ಲಿದೆ
ಈ ನಾಲ್ಕು ಲೆಕ್ಕಾಚಾರಗಳು ಏನೇ ಇದ್ರೂ ಎನ್​ಡಿಎ ಸಭೆಯಲ್ಲಿ ಫೈನಲ್​ ಆಗಬೇಕಿದೆ. ಮತ್ತೊಂದು ಸುತ್ತಿನ ಸಭೆ ಕರೆದಿರುವ ಕುಮಾರಸ್ವಾಮಿ ನಾಳೆ ಹೊತ್ತಿಗೆ ಎನ್‌ಡಿಎ ಟಿಕೆಟ್ ಘೋಷಿಸುವುದು ಬಹುತೇಕ ದಟ್ಟವಾಗಿದೆ. ನಾವೆಲ್ಲಾ ಕುಳಿತು ಚರ್ಚೆ ಮಾಡುತ್ತೇವೆ ಅಂತ ಜೆಡಿಎಸ್​-ಬಿಜೆಪಿ ನಾಯಕರು ಹೇಳಿದ್ದಾರೆ.
ಒಟ್ಟಾರೆ, ಮೈತ್ರಿ ನಾಯಕರ ಲೆಕ್ಕಾಚಾರಗಳು ಪಲ್ಟಿ ಆಗಿದ್ದು, ಸಂದಿಗ್ಧತೆಗೆ ಸಿಲುಕಿದ್ದಾರೆ.. ಇವತ್ತು ಅಥವಾ ನಾಳೆ ಬೆಳಗ್ಗೆವರೆಗೆ ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಅನ್ನೋ ತೀರ್ಮಾನ ಪ್ರಕಟ ಆಗಲಿದ್ದು, ಸಸ್ಪೆನ್ಸ್​ ಜಾರಿಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us