/newsfirstlive-kannada/media/post_attachments/wp-content/uploads/2025/01/SACHIN-CHANT.jpg)
ಸಚಿನ್... ಕ್ರಿಕೆಟ್ ಜಗತ್ತು ಮಾತ್ರವಲ್ಲ, ಕ್ರಿಕೆಟ್ ಕಾಣದ ದೇಶವೂ ಕೂಡ ಈ ಜಾದೂಗಾರನ ಹೆಸರು ಬಲ್ಲದು. ವಿಶ್ವದ ಪುಟ್ಟ ಅದ್ಭುತವೇ ಆಗಿ ಹೋದವರು ಸಚಿನ್. ಒಂದು ಕಾಲದಲ್ಲಿ ಸಚಿನ್​ ವಿಕೆಟ್ ಒಪ್ಪಿಸಿ ಪೆವಿಲಿನ್​ನತ್ತ ಹೊರಟರೆ ಜನರು ಟಿವಿಯನ್ನು ಆಫ್ ಮಾಡಿ ತಮ್ಮ ಬೇರೆ ಕೆಲಸದತ್ತ ಹೊರಡುತ್ತಿದ್ದರು. ಇದು ಸುಮಾರು ಎರಡು ದಶಕಗಳ ಕಾಲದಿಂದಲೂ ನಡೆದುಕೊಂಡೇ ಬಂದಿತ್ತು. ಜಗತ್ತಿನ ಘಟಾನುಘಟಿ ಬೌಲರ್​ಗಳನ್ನು ಬೆಂಡೆತ್ತುವ ತಾಕತ್ತು ಇರುವ ಸಚಿನ್ ತೆಂಡೂಲ್ಕರ್​ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಅಲ್ಲೊಂದು ಹರ್ಷೋದ್ಘಾರ ಹೊಮ್ಮುತ್ತಿತ್ತು. ಅದೇ ಸಚಿನ್.. ಸಚಿನ್​.. ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದ ಜನರೆಲ್ಲರೂ ಒಂದೇ ಕಂಠದಿಂದ ಸಚಿನ್.. ಸಚಿನ್​ ಎಂದು ಕೂಗುತ್ತಿದ್ದರೆ ಇಡೀ ಕ್ರಿಕೆಟ್ ಪ್ರೇಮಿಗಳ ಮೈಯಲ್ಲಿರುವ ರೋಮಗಳಿಗೆಲ್ಲಾ ರೋಮಾಂಚನದ ನಿಮಿರುವಿಕೆ.
/newsfirstlive-kannada/media/post_attachments/wp-content/uploads/2023/10/SACHIN_BATTING-1.jpg)
ಈ ವಿಷಯವನ್ನು ಸಚಿನ್ ತೆಂಡೂಲ್ಕರ್ ತಮ್ಮ ನಿವೃತ್ತಿಯ ದಿನದಂದು ವಿದಾಯದ ಭಾಷಣದಲ್ಲಿಯೂ ಕೂಡ ಹೇಳಿದ್ದರು. ನನ್ನ ಕೊನೆಯ ಉಸಿರು ಇರುವವರೆಗೂ ನಿಮ್ಮ ಸಚಿನ್.. ಸಚಿನ್ ಎಂಬ ಕೂಗು ಸದಾ ನನ್ನ ಕಿವಿಯಲ್ಲಿ ರಿಂಗಣಿಸುತ್ತಿರುತ್ತದೆ ಎಂದು. ಈಗ ಸಚಿನ್ ಕ್ರಿಕೆಟ್ ಅಂಗಳ ತೊರೆದು ಹೆಚ್ಚು ಕಡಿಮೆ 12 ವರ್ಷಗಳೇ ಸಂದಿವೆ. ಭಾರತೀಯ ಕ್ರಿಕೆಟ್ ತಂಡ ನೂರಾರು ಆಟಗಾರರನ್ನು ಕಂಡಿದೆ. ಹಲವಾರು ದಾಖಲೆಗಳನ್ನು ಬರೆದ ದಿಗ್ಗಜರನ್ನು ಕಂಡಿದೆ. ಆದರೆ ಭಾರತ ತಂಡದಲ್ಲಿ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್​​ನಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಸಚಿನ್ ನಮಗೆ ಕಾಣುತ್ತಿಲ್ಲ. ಭಾರತದಲ್ಲಿ ಕ್ರಿಕೆಟ್ ಧರ್ಮವಾದರೆ ಆ ಧರ್ಮಕ್ಕೆ ಸಚಿನ್ ದೇವರಾಗಿ ಹೋಗಿದ್ದರು. ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆದಿದ್ದರು.
ಈಗಾಗಲೇ ಹೇಳಿದಂತೆ ಸಚಿನ್ ಕ್ರಿಕೆಟ್ ಅಂಗಳ ತೊರೆದು ದಶಕಗಳು ಸಂದಿವೆ. ಆದ್ರೆ ಜಗತ್ತು ಇಂದಿಗೂ ಅವರ ಆ ಆಟವನ್ನು ನೆನಪಿಟ್ಟಿದೆ. ಸಚಿನ್ ಎಂಬ ಕ್ರಿಕೆಟ್ ಜಗತ್ತಿನ ಪುಟ್ಟ ಅದ್ಭುತದ ಇತಿಹಾಸವನ್ನು ನೆನಪಿನಲ್ಲಿಟ್ಟುಕೊಂಡಿದೆ. 90ರ ದಶಕದಲ್ಲಿ ಕ್ರಿಕೆಟ್ ಮೈದಾನದಲ್ಲಿ ಹೊಮ್ಮುತ್ತಿದ್ದ ಸಚಿನ್.. ಸಚಿನ್.. ಎಂಬ ಉದ್ಘೋಷ ಈಗ ಮತ್ತೊಮ್ಮೆ ಹೊರ ಹೊಮ್ಮಿದೆ. ಆದ್ರೆ ಕ್ರಿಕೆಟ್ ಅಂಗಳದಲ್ಲಿ ಅಲ್ಲ ನವಿ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ
Sachin Sachin chant in Cold play Concert.#SachinTendulkarpic.twitter.com/u3eTbVTmk8
— AT10 (@Loyalsachfan10)
Sachin Sachin chant in Cold play Concert.#SachinTendulkarpic.twitter.com/u3eTbVTmk8
— AT10 (@Loyalsachfan10) January 19, 2025
">January 19, 2025
ಡಿ.ವೈ, ಪಾಟೀಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೋಲ್ಡ್​ ಪ್ಲೇ ಮ್ಯೂಸಿಕ್ ಕಾರ್ಯಕ್ರಮಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಅವರ ಪತ್ನಿ ಅಂಜಲಿ ಹಾಗೂ ಅವರ ಪುತ್ರಿ ಸಾರಾ ಬಂದಿದ್ದರು. ಅತ್ತ ಬ್ರಿಟಿಷ್ ಬ್ಯಾಂಡ್​ಗಳು ಅಭಿಮಾನಿಗಳನ್ನು ಥ್ರಿಲ್​ಗೊಳಿಸಲು ಅಂತ ಸಜ್ಜಾಗಿದ್ದರೆ. ಇತ್ತ ಇಡೀ ಜನಸ್ತೋಮ ಎದ್ದು ನಿಂತು ಸಚಿನ್.. ಸಚಿನ್ ಎಂದು ಘೋಷಣೆ ಕೂಗಲು ಆರಂಭಿಸಿತು. ಅಭಿಮಾನಿಗಳ ಆ ಹರ್ಷೋದ್ಘಾರದ ಮುಂದೆ ಕೋಲ್ಡ್​ ಪ್ಲೇ ಮ್ಯೂಸಿಕ್​ ಶಬ್ದವೇ ಒಂದುಷ್ಟು ನಿಮಿಷಗಳ ಕಾಲ ಕ್ಷೀಣಿಸಿ ಹೋಗಿತ್ತು.
ಕೊನೆಗೆ ಸಚಿನ್ ಎಲ್ಲ ಅಭಿಮಾನಿಗಳತ್ತ ಕೈ ಬೀಸಿದರು. ಇಂದಿಗೂ ಭಾರತೀಯರ ಎದೆಯಲ್ಲಿ ತಾವು ಮೊದಲಿನಷ್ಟೇ ಪ್ರೀತಿಯನ್ನು ಉಳಿಸಿಕೊಂಡು ಬಂದಿದ್ದಕ್ಕೆ ಸಚಿನ್​ಗೆ ಒಳಗೊಳಗೆ ಹೆಮ್ಮೆಯಾಯಿತೇನೋ ಅನ್ನುವಷ್ಟು ಪ್ರೀತಿಯಿಂದ ಅಭಿಮಾನಿಗಳತ್ತ ಕೈ ಬೀಸಿದರು. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹತ್ತು ವರ್ಷವಲ್ಲ ಮುಂದಿನ ನೂರು ವರ್ಷಗಳ ತನಕ ಸಚಿನ್ ಎಂಬ ಹೆಸರು ಜಗತ್ತಿನಲ್ಲಿ ಎಂದಿಗೂ ಅಳಿಯದೇ ಉಳಿಯುತ್ತದೆ. ಇದೇ ಉದ್ಘೋಷಗಳು ಸಚಿನ್ ಕಂಡಲ್ಲಿ ಜನರು ಕೂಗುತ್ತಾರೆ ಎಂದು ಜನ ಕಮೆಂಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us