/newsfirstlive-kannada/media/post_attachments/wp-content/uploads/2025/06/ELEPHANTS.jpg)
ಗುಜರಾತ್ನ ಅಹಮದಾಬಾದ್ ಹಾಗೂ ಒಡಿಶಾದ ಪುರಿಯಲ್ಲಿ ಜಗನ್ನಾಥನ ಆರಾಧನೆ ಜೋರಾಗಿದೆ. ಜಗನ್ನಾಥನ ಭಕ್ತರು ಭಕ್ತಿ, ಭಾವದಿಂದ ರಥಯಾತ್ರೆಯಲ್ಲಿ ಭಾಗಿಯಾಗಿ ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಬೆನ್ನಲ್ಲೇ, ಅಹ್ಮದಾಬಾದ್ನ ಕಡಿಯಾ ಏರಿಯಾದಲ್ಲಿ ಆತಂಕಕಾರಿ ಬೆಳವಣಿಗೆ ನಡೆದಿದೆ.
ಆನೆಗಳು ಮನಸೋ ಇಚ್ಛೆ ಓಡಿವೆ. ರಥಯಾತ್ರೆಯ ವೇಳೆ ಮದವೇರಿದ ಮೂರು ಆನೆಗಳು ದಿಕ್ಕಾಪಾಲಾಗಿ ಓಡಿವೆ. ಇದರಿಂದ ಕೆಲವು ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದರು. ಕೆಲವು ಭಕ್ತರು ಆ ಕ್ಷಣದಲ್ಲಾದ ನೂಕು, ನುಗ್ಗಲಿನಿಂದ ಇಬ್ಬರು ಭಕ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆನೆಗಳ ನಿಯಂತ್ರಣ ಮಾಡೋದೇ ದೊಡ್ಡ ಸವಾಲಾಗಿತ್ತು. ಕೊನೆಗೆ ಮಾವುತರು ಆನೆಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ: ಐದು ಹುಲಿಗಳ ಕಳೆಬರ ಪತ್ತೆ ಆಗಿದ್ದೇಗೆ..? ಪ್ರಕರಣ ಬೆಳಕಿಗೆ ಬಂದ ಇಂಚಿಂಚೂ ಮಾಹಿತಿ ಕೊಟ್ಟ ಅಧಿಕಾರಿ
ಆನೆಗಳು ಓಡಿದ ಕೆಲವು ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿವೆ. ಬೆಳಗ್ಗೆ 10.15ಕ್ಕೆ ರಥಯಾತ್ರೆ ಆರಂಭವಾಗಿತ್ತು. ಈ ವೇಳೆ ಆನೆಗಳು ಆತಂಕ ಸೃಷ್ಟಿಸಿದ್ದವು. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಆನೆಗಳು ತಾವು ಸಾಗುತ್ತಿದ್ದ ರಸ್ತೆಯಲ್ಲಿ ಹೋಗುವುದರ ಬದಲಾಗಿ, ವಿರುದ್ಧ ದಿಕ್ಕಿನಲ್ಲಿ ಓಡಿವೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣಾವಾಯಿತು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ರಥಯಾತ್ರೆಯಲ್ಲಿ ಒಟ್ಟು 18 ಆನೆಗಳು ಭಾಗಿಯಾಗಿವೆ. ನೂರಾರು ಮ್ಯೂಜಿಕ್ ಗ್ರೂಪ್ಸ್, ಭಜನಾ ಮಂಡಳಿ, 30 ಅಖಾಡಗಳುಗಳು ಹಾಗೂ ಭಕ್ತರು ರಥಯಾತ್ರೆಯಲ್ಲಿ ಭಾಗಿಯಾಗಿವೆ. ರಥಯಾತ್ರೆಯು ಸುಮಾರು 16 ಕಿಲೋ ಮೀಟರ್ ದೂರ ಸಾಗಲಿದೆ. ನೂರಕ್ಕೂ ಹೆಚ್ಚು ಟ್ರಕ್ಗಳು ಅಲ್ಲಿಗೆ ಆಗಮಿಸಿದ್ದು, ಅವುಗಳು ಕೂಡ ರಥಯಾತ್ರೆಯಲ್ಲಿ ಸಾಗುತ್ತ, ಭಕ್ತ ಪರಂಪರೆಯ ಇತಿಹಾಸವನ್ನು ಸಾರಲಿವೆ. ಸುಮಾರು 14 ರಿಂದ 15 ಲಕ್ಷ ಭಕ್ತರು ಇಂದು ಜಗನ್ನಾಥನ ದರ್ಶನ ಪಡೆಯಲಿದ್ದಾರೆ. ಪ್ರತಿ ವರ್ಷ ಅಹ್ಮದಾಬಾದ್ನಲ್ಲಿ ರಥಯಾತ್ರೆ ನಡೆಯುತ್ತದೆ.
ಇದನ್ನೂ ಓದಿ: ಹರ್ಷಿತ್ ರಾಣಾ, ಬುಮ್ರಾ ಬೆನ್ನಲ್ಲೇ ಟೀಂ ಇಂಡಿಯಾದಿಂದ ಮತ್ತೊಂದು ಕೆಟ್ಟ ಸುದ್ದಿ..!
Watch | Three elephants in Ahmedabad Rath Yatra procession went out of control and started running in the Khadia area of the city. pic.twitter.com/iqNGRjROVo
— DeshGujarat (@DeshGujarat) June 27, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ