/newsfirstlive-kannada/media/post_attachments/wp-content/uploads/2025/06/hug-man-mum-Trend.jpg)
ಅಪ್ಪುಗೆ ಅನ್ನೋದು ಆನಂದಕ್ಕೂ ಮಿಗಿಲಾದ ಆಲಿಂಗನ. ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮ, ಸಂಗಾತಿಯ ಅಪ್ಪುಗೆಗೆ ವಿಶೇಷ ಬಾಂಧವ್ಯ ಇದೆ. ಮೊದಲ ಮುತ್ತು, ಮೊದಲ ಅಪ್ಪುಗೆಗೆ ಚಡಪಡಿಸೋದು ಪ್ರೀತಿಸೋ ಪ್ರೇಮಿಗಳ ಲಕ್ಷಣ.
ಚೀನಾದಲ್ಲಿ ‘man mum’ ಅನ್ನೋ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಇದರ ಅರ್ಥ ಇಷ್ಟೇ ಅಮ್ಮನ ಅಪ್ಪುಗೆ. ಮನುಷ್ಯತ್ವ, ತಾಯ್ತನ, ಮಮತೆ, ಪ್ರೀತಿಯಿಂದ 5 ನಿಮಿಷಗಳ ಕಾಲ ತಬ್ಬಿಕೊಳ್ಳುವುದು.
‘man mum’ ಅನ್ನೋದು ಹೊಸದಾಗಿದ್ರು, ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಯಾವ ಪುರುಷರು ಅಮ್ಮನ ಅಪ್ಪುಗೆಗಾಗಿ ಪ್ರೀತಿಯಿಂದ ತಬ್ಬಿಕೊಳ್ಳಲು ಬಯಸುತ್ತಾರೋ ಅವರನ್ನ ತಬ್ಬಿಕೊಂಡು ಸಂತೈಸಲಾಗುತ್ತಿದೆ.
ಜೀವನದ ಜಂಜಾಟ, ಕೆಲಸದ ಒತ್ತಡ, ಡೆಡ್‌ಲೈನ್‌ಗಳು, ಬಿಡುವಿಲ್ಲದೆ ಬದುಕುವವರು ಮಾನಸಿಕ ಸ್ಥೈರ್ಯವನ್ನೇ ಕಳೆದುಕೊಂಡಿರುತ್ತಾರೆ. ಇಂತಹವರಿಗೆ ತಾಳ್ಮೆ, ಸಹನೆ, ಪ್ರೀತಿಯಂದ ಸಾಂತ್ವನ ಹೇಳುವವರ ಅಗತ್ಯವಿದೆ. ಹೀಗಾಗಿಯೇ ಚೀನಾದಲ್ಲಿ ಈ ‘man mum’ ಅನ್ನೋದು ಗಮನ ಸೆಳೆದಿದೆ.
5 ನಿಮಿಷದ ‘man mum’ಗೆ ಎಷ್ಟು ರೂಪಾಯಿ?
ಚೀನಾದ ಯುವತಿಯರು 5 ನಿಮಿಷದ ‘man mum’ಗೆ ಒಪ್ಪಿಕೊಂಡು 20-50 ಯುವಾನ್ ಚಾರ್ಜ್ ಮಾಡುತ್ತಿದ್ದಾರೆ. 20-50 ಯುವಾನ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 250-600 ರೂಪಾಯಿಗಳು. ಇಷ್ಟು ದುಡ್ಡು ಕೊಟ್ಟರೂ ತಬ್ಬಿಕೊಳ್ಳಲು ಯುವತಿಯರು ಒಪ್ಪಿಕೊಳ್ಳೋದಿಲ್ಲ. 5 ನಿಮಿಷ ತಬ್ಬಿಕೊಳ್ಳುವ ಯುವಕರು ಕೆಲವೊಂದು ಗುಣ-ಲಕ್ಷಣ ಮತ್ತು ಷರತ್ತುಗಳನ್ನು ಪೂರೈಸಬೇಕು.
5 ನಿಮಿಷ ತಬ್ಬಿಕೊಳ್ಳಲು ಬಯಸುವ ಯುವಕರು, ಯುವತಿಯರು ಇಷ್ಟಪಡುವ ಸ್ವಭಾವ ಹೊಂದಿರಬೇಕು. ನೋಡಲು ಚೆನ್ನಾಗಿರಬೇಕು. ಗುಡ್ ಲುಕ್ಕಿಂಗ್, ಹ್ಯಾಂಡ್ಸಮ್, ಸೌಮ್ಯತೆ, ತಾಳ್ಮೆಯನ್ನು ಮೊದಲಿಗೆ ನಿರೀಕ್ಷೆ ಮಾಡಲಾಗುತ್ತದೆ. ಎಲ್ಲಾ ಓಕೆ ಆದ ಮೇಲೆ ಮಾಲ್‌ಗಳು, ಸಬ್‌ವೇ ಸ್ಟೇಷನ್ ಸೇರಿದಂತೆ ಸಾರ್ವಜನಿಕ ಜಾಗಗಳಲ್ಲಿ ಈ ರೀತಿ ತಬ್ಬಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಅಪ್ಪುಗೆಗೊಂದು ರೇಟು, ಮುತ್ತಿಗೆ ಮತ್ತೊಂದು ರೇಟು; ಹೊಸ ಟ್ರೆಂಡ್ ಸೃಷ್ಟಿಸಿದ ಚೀನಾ ಹುಡುಗಿಯರು
ಝೌ ಎಂಬ ಯುವಕ ಹೀಗೆ ಚಾಟ್ ಆ್ಯಪ್‌ಗಳಲ್ಲಿ 34 ಯುವತಿಯರಿಗೆ ಇಂತಹ ಅವಕಾಶ ಕೊಟ್ಟು ಬರೋಬ್ಬರಿ 21,000 ರೂಪಾಯಿಗಳನ್ನು ಸಂಪಾದಿಸಿದ್ದಾನೆ. ನನ್ನಿಂದ ಕೆಲವು ಮಹಿಳೆಯರು ನಿರಾಳರಾಗುವ ಅವಕಾಶ ಸಿಕ್ಕಿದೆ. ಆದರೆ ಇದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಳ್ಳುವ ಆಸೆ ನನಗಿಲ್ಲ ಎಂದಿದ್ದಾರೆ. ಕೆಲವರು 5 ನಿಮಿಷ ತಬ್ಬಿಕೊಂಡ ಬಳಿಕ ಗಿಫ್ಟ್‌ಗಳನ್ನು ಕೊಟ್ಟು ಹೋಗಿದ್ದಾರೆ.
ಸೋಷಿಯಲ್ ಮೀಡಿಯಾ ಚಾಟ್ ಆ್ಯಪ್‌ಗಳಲ್ಲಿ ಸ್ಥಳ ಹಾಗೂ ಸಮಯ ನಿಗದಿ ಮಾಡಿಕೊಳ್ಳಲಾಗುತ್ತದೆ. ಯುವತಿಯ ಷರತ್ತುಗಳು ಪೂರೈಸಿದ ಯುವಕರು 5 ನಿಮಿಷ ತಬ್ಬಿಕೊಳ್ಳುವ ಮುಖಾಂತರ ಚೀನಾದಲ್ಲಿ ಒತ್ತಡ ಹಾಗೂ ಹಲವಾರು ಮಾನಸಿಕ ಖಿನ್ನತೆಗಳಿಂದ ಹೊರ ಬರುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ