/newsfirstlive-kannada/media/post_attachments/wp-content/uploads/2024/12/CHEATER-WIFE.jpg)
ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ಗಳಲ್ಲಿ ಶ್ರೀಮಂತ ಹುಡುಗರನ್ನು ನೋಡಿ ಗಾಳ ಹಾಕಿ ಕೋಟಿ ಕೋಟಿ ವಂಚಿಸಿದ್ದ ಚಾಲಾಕಿಯೊಬ್ಬಳನ್ನು ಉತ್ತರಾಖಂಡ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಬಲೆಗೆ ಬಿದ್ದಿರುವ ಸೀಮಾ ಎನ್ನುವ ಮಹಿಳೆ, ಇಲ್ಲಿಯವೆಗೂ ಒಟ್ಟು ಮೂರು ಮದುವೆಯಾಗಿ 1.25 ಕೋಟಿ ರೂಪಾಯಿ ಲೂಟಿ ಮಾಡಿದ್ದಾಳೆ. ಹಣ ಆಸ್ತಿ ಇರೋರನ್ನ ಮದುವೆಯಾಗೋದೆ ವೃತ್ತಿಯನ್ನು ಮಾಡಿಕೊಂಡಿದ್ದ ಈಕೆ ಆಮೇಲೆ ವಂಚಿಸಿ, ಲೂಟಿ ಹೊಡೆದು ಪರಾರಿಯಾಗುತ್ತಿದ್ದಳು.
ಈಗಾಗಲೇ ಹೇಳಿದಂತೆ ಮ್ಯಾಟ್ರಿಮೋನಿಯಲ್ ವೆಬ್​​ಸೈಟ್​ಗಳಲ್ಲಿ ಶ್ರೀಮಂತ ಹುಡುಗರನ್ನು ಹುಡುಕಿ ಈಕೆ ಮದುವೆಯಾಗುತ್ತಿದ್ದಳು. ಗಂಡನ ಮನೆಯವರ ನಂಬಿಕೆ, ವಿಶ್ವಾಸ ಗಳಿಸಿಕೊಂಡು, ಮೂರು ನಾಲ್ಕು ತಿಂಗಳಲ್ಲಿ ಗಂಡನ ಮನೆ ದೋಚಿಕೊಂಡು ಪರಾರಿಯಾಗುವುದು ಈಕೆಯ ಪ್ಲ್ಯಾನ್​. 2013ರಲ್ಲಿ ಆಗ್ರದ ಒಬ್ಬ ಬ್ಯುಸಿನೆಸ್ ಮೆನ್​ನನ್ನು ಮದುವೆಯಾಗಿದ್ದ ಈಕೆ, ಕೆಲ ತಿಂಗಳ ಬಳಿಕ ಗಂಡನ ಮನೆಯವರ ವಿರುದ್ಧ ಕಾನೂನು ದುರ್ಬಳಕೆ ಮಾಡಿಕೊಂಡು ಕೇಸ್ ದಾಖಲಿಸಿದ್ದಳು ಕೇಸ್ ರಾಜಿ ಮಾಡಿಕೊಳ್ಳಲು 75 ಲಕ್ಷ ರೂಪಾಯಿ ಪಡೆದಿದ್ದಳು ಎಂದು ತಿಳಿದು ಬಂದಿದೆ.
2017ರಲ್ಲಿ ಗುರುಗ್ರಾಮದ ಸಾಫ್ಟ್​ವೇರ್ ಇಂಜಿನಿಯರ್​ ಜೊತೆಗೆ ಮದುವೆ ಮಾಡಿಕೊಂಡ ಈಕೆ ಇಲ್ಲಿಯೂ ಕೂಡ ಕೇಸ್ ಹಾಕಿ ರಾಜಿ ಮಾಡಿಕೊಳ್ಳಲು 10 ಲಕ್ಷ ರೂಪಾಯಿ ಕಿತ್ತುಕೊಂಡಿದ್ದಳು. 2023ರಲ್ಲಿ ಜೈಪುರದ 3ನೇ ಗಂಡನ ಮನೆಗೆ ಹೋದಾಗ ಯಾವುದೇ ಕೇಸ್ ಹಾಕದೇ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಲೂಟಿ ಮಾಡಿ ಕಾಲ್ಕಿತ್ತಿದ್ದಳು. ಜೈಪುರದ 3ನೇ ಪತಿ ನೀಡಿದ ದೂರಿನ ಮೇರೆಗೆ ಈಗ ಸೀಮಾಳನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟು 3 ಮದುವೆಗಳಿಂದ 1.25 ಕೋಟಿ ರೂಪಾಯಿಗೂ ಅಧಿಕ ಹಣ ಕಿತ್ತಿದ್ದಾಳೆ ಎಂದು ತಿಳಿದು ಬಂದಿದೆ. ಶ್ರೀಮಂತರನ್ನ , ಹಣವಂತರನ್ನ ನೋಡುತ್ತಿದ್ದಳು ಸೀಮಾ, ಅದರಲ್ಲೂ ಡಿವೋರ್ಸ್​ ಆಗಿರುವ ಹಣವಂತರೇ ಈಕೆಯ ಟಾರ್ಗೆಟ್ ಆಗಿರುತ್ತಿದ್ದರು. ಸದ್ಯ ಸೀಮಾಳನ್ನು ಬಂಧಿಸಿರುವ ಪೊಲೀಸರು ಈಕೆಯಿಂದ ಮತ್ತೆ ಬೇರೆ ಯಾರಾದರೂ ವಂಚನೆಗೆ ಒಳಗಾಗಿದ್ದರೆ ದೂರು ನೀಡುವಂತೆ ಕೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us