newsfirstkannada.com

ಬಣ್ಣದ ಮಾತಾಡಿ ಗಾಳ ಹಾಕಿದ್ರು.. ಜೇಬು ಖಾಲಿ ಆದ್ಮೇಲೆ ಗೊತ್ತಾಯ್ತು 35 ಲಕ್ಷ ರೂ. ಸ್ವಾಹಾ ಎಂದು..!

Share :

Published January 12, 2024 at 2:33pm

  ಸ್ವಲ್ಪ ಯಾಮಾರಿದ್ರೂ ನಿಮ್ಮ ದುಡ್ಡಿಗೆ ಇರಲ್ಲ ಗ್ಯಾರಂಟಿ

  ಸದ್ದಿಲ್ಲದೆ, ನಿಮಗೆ ಅರಿವಿಲ್ಲದೇ ಗಾಳ ಹಾಕುತ್ತೆ ಈ ಗ್ಯಾಂಗ್

  ಇಳಿ ವಯಸ್ಸಿಗಾಗಿ ಇಟ್ಕೊಂಡಿದ್ದ ವೃದ್ಧನ ಹಣ ಮಂಗಮಾಯ

ಬೆಂಗಳೂರು: ಸುಲಭವಾಗಿ‌ ಹಣ ಗಳಿಸಬೇಕು ಅನ್ನೋ ಯೋಚನೆಯಲ್ಲಿರೋರು ನೋಡಲೇಬೇಕಾದ ಸ್ಟೋರಿ ಇದಾಗಿದೆ. ಯಾಕಂದರೆ ನೀವು ಒಮ್ಮೆ ಮೋಸ ಹೋದರೆ ನಿಮ್ಮ ಹಣಕ್ಕೆ ಗ್ಯಾರಂಟಿಯೇ ಇರಲ್ಲ.

ಐದು ಪರ್ಸೆಂಟ್ ಲಾಭದ ಆಸೆಗಾಗಿ 35 ಲಕ್ಷ ಹೂಡಿಕೆ ಮಾಡಿ ಹಣವನ್ನು ಕಳೆದುಕೊಂಡು ವೃದ್ಧರೊಬ್ಬರು ಬನಶಂಕರಿ ಠಾಣೆಯ ಮೆಟ್ಟಿಲೇರಿದ್ದಾರೆ. ಠಾಣಾ ವ್ಯಾಪ್ತಿಯ ವೃದ್ಧರೊಬ್ಬರು ಪ್ರಾಪರ್ಟಿ ಮಾರಿ 35 ಲಕ್ಷ ರೂಪಾಯಿ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು.

ವೃದ್ಧನ ಬಳಿ ಹಣ ಇದೆ ಎಂದು ತಿಳಿದುಕೊಂಡಿದ್ದ ಓರ್ವ ಮಹಿಳೆಯಿದ್ದ ಐವರ ಖತರ್ನಾಕ್ ಗ್ಯಾಂಗ್ 50 ಪರ್ಸೆಂಟ್ ಲಾಭ ಕೊಡೋದಾಗಿ ನಂಬಿಸಿದ್ದಾರೆ. ಅದರಂತೆ ಹೂಡಿಕೆ 35 ಲಕ್ಷ ಹಣವನ್ನು ಹೂಡಿಕೆ ಮಾಡಿಸಿದ್ದಾರೆ. ಆರಂಭದಲ್ಲಿ 6 ಲಕ್ಷ ರೂಪಾಯಿ ಲಾಭಾಂಶ ಎಂದು ವೃದ್ಧನಿಗೆ ಕೊಟ್ಟಿದ್ದರು. ಅದಾದ ಬಳಿಕ ಅಸಾಮಿಗಳು ಫೋನ್ ಸ್ವಿಚ್​ ಆಫ್ ಮಾಡಿ ನಾಪತ್ತೆ ಆಗಿದ್ದಾರೆ. ಹಣವನ್ನು ಕಳೆದುಕೊಂಡ ಹಿರಿಯ ಜೀವ ಇದೀಗ ಠಾಣೆ ಮೆಟ್ಟಿಲೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಣ್ಣದ ಮಾತಾಡಿ ಗಾಳ ಹಾಕಿದ್ರು.. ಜೇಬು ಖಾಲಿ ಆದ್ಮೇಲೆ ಗೊತ್ತಾಯ್ತು 35 ಲಕ್ಷ ರೂ. ಸ್ವಾಹಾ ಎಂದು..!

https://newsfirstlive.com/wp-content/uploads/2024/01/BANASHANKARI.jpg

Load More