500 ವರ್ಷದ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ; ಟಾಪ್‌ 10 ಫೋಟೋ ಇಲ್ಲಿದೆ ನೋಡಿ

author-image
admin
Updated On
500 ವರ್ಷದ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ; ಟಾಪ್‌ 10 ಫೋಟೋ ಇಲ್ಲಿದೆ ನೋಡಿ
Advertisment
  • ಭವ್ಯ ರಾಮಮಂದಿರದಲ್ಲಿ ಮೊದಲ ಶ್ರೀರಾಮನವಮಿಯನ್ನು ಸಂಭ್ರಮ
  • ಅಯೋಧ್ಯೆಯಲ್ಲಿ ಬೆಳಗ್ಗೆ 3.30ರಿಂದಲೇ ರಾಮನ ದರ್ಶನಕ್ಕೆ ವಿಶೇಷ ವ್ಯವಸ್ಥೆ
  • ರಾಮನಿಗೆ ಸೂರ್ಯತಿಲಕದ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಭಕ್ತರು

ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಮೊದಲ ಶ್ರೀರಾಮನವಮಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಭವ್ಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

publive-image

ಮೊದಲ ರಾಮನವಮಿಯಂದು ರಾಮಲಲ್ಲಾನಿಗೆ ಸೂರ್ಯನ ತಿಲಕ ಸ್ಪರ್ಶಿಸಿದ್ದು, ಸೂರ್ಯವಂಶಸ್ಥನಿಗೆ ಸೂರ್ಯನ ಅಭಿಷೇಕ ನೆರವೇರಿಸಲಾಗಿದೆ.

publive-image

ಸಾವಿರಾರು ಭಕ್ತರು ಭವ್ಯ ರಾಮಮಂದಿರದಲ್ಲಿ ಬಾಲರಾಮನ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ.

publive-image

ರಾಮನವಮಿ ಅಂಗವಾಗಿ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ 4 ನಿಮಿಷಗಳ ಕಾಲ ಬಾಲರಾಮನ ಮೂರ್ತಿಗೆ ಸೂರ್ಯ ತಿಲಕ ಸ್ಪರ್ಶಿಸಿದ್ದು, ರಾಮನ ಭಕ್ತರ ಸಂಭ್ರಮ ಮುಗಿಲು ಮುಟ್ಟಿದೆ.

publive-image

ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲು ನಿನ್ನೆಯಿಂದಲೇ ರಾಮನೂರಿಗೆ ಭಕ್ತಸಾಗರ ಹರಿದು ಬಂದಿದೆ. ಇಂದು ಮತ್ತು ನಾಳೆಯೂ ಅಯೋಧ್ಯೆಯಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ.

publive-image

ರಾಮನವಮಿಯಂದು ರಾಮಮಂದಿರಕ್ಕೆ ಭೇಟಿ ನೀಡುವ ಮುನ್ನ ಭಕ್ತರು ಸರಯೂ ನದಿಯಲ್ಲಿ ಸ್ನಾನ ಮಾಡಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ.

publive-image

ಅಯೋಧ್ಯೆಯಲ್ಲಿ ಇಂದು ಬೆಳಗ್ಗೆ 3.30ರಿಂದಲೇ ರಾಮನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

publive-image

ಶ್ರೀರಾಮನಿಗೆ ನೈವೇದ್ಯ, ವಿಶೇಷ ಮಂಗಳಾರತಿ ನೆರವೇರಿಸುವಾಗ 5 ನಿಮಿಷ ಪರದೆ ಹಾಕಲಾಗುತ್ತಿದೆ. ಉಳಿದಂತೆ ರಾತ್ರಿ 11 ಗಂಟೆಯವರೆಗೂ ನಿರಂತರ 19 ಗಂಟೆಗಳ ಕಾಲ ಭಕ್ತರಿಗೆ ಶ್ರೀರಾಮನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

publive-image

ಅಯೋಧ್ಯೆಯಲ್ಲಿ ಇಂದು ರಾಮನಿಗೆ ಸೂರ್ಯನ ತಿಲಕಾಭಿಷೇಕ ನೆರವೇರಿಸಿದ್ದು, ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಆವರಣದಲ್ಲಿ 100 LED ಸ್ಕ್ರೀನ್‌ಗಳನ್ನು ಅಳವಡಿಸಲಾಗಿತ್ತು.

ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾನಿಗೆ ಸೂರ್ಯನ ತಿಲಕ.. ಅದ್ಭುತ ದೃಶ್ಯದ ವಿಡಿಯೋ ಇಲ್ಲಿದೆ ನೋಡಿ

publive-image

ಸಾವಿರಾರು ಭಕ್ತರು ಅಯೋಧ್ಯೆಯಲ್ಲಿ ವಿಶೇಷ ಸೂರ್ಯತಿಲಕದ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡು ಸಂತಸಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment