ಆಫ್ರಿಕಾದ ಗಾಮಿನಿ ಚೀತಾ ಜನ್ಮ ನೀಡಿದ್ದು 5ಕ್ಕೆ ಅಲ್ಲ, 6 ಮರಿಗಳಿಗೆ.. ಇನ್ನೊಂದು ಮರಿ ಎಲ್ಲಿತ್ತು?

author-image
Bheemappa
Updated On
ಆಫ್ರಿಕಾದ ಗಾಮಿನಿ ಚೀತಾ ಜನ್ಮ ನೀಡಿದ್ದು 5ಕ್ಕೆ ಅಲ್ಲ, 6 ಮರಿಗಳಿಗೆ.. ಇನ್ನೊಂದು ಮರಿ ಎಲ್ಲಿತ್ತು?
Advertisment
  • ಗಾಮಿನಿಯ ಇನ್ನೊಂದು ಮರಿ ಎಲ್ಲಿ ಇತ್ತು ಎನ್ನುವುದೇ ಕುತೂಹಲ!
  • ವಾರದ ಹಿಂದೆ 5 ಮರಿಗಳು ಜನನವೆಂದು ವರದಿ ಮಾಡಲಾಗಿತ್ತು
  • ಕೇಂದ್ರ ಸಚಿವರು ವಿಡಿಯೋ ಶೇರ್ ಮಾಡಿ ಹೇಳಿರುವುದು ಏನು?

ಭೋಪಾಲ್: ಆಫ್ರಿಕಾದಿಂದ ಭಾರತಕ್ಕೆ ತಂದಂತಹ ಗಾಮಿನಿ ಚೀತಾ 5 ಮರಿಗಳಲ್ಲ 6 ಮರಿಗಳಿಗೆ ಜನ್ಮ ನೀಡಿರುವುದು ಎಂದು ಕೇಂದ್ರದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭುಪೇಂದ್ರ ಯಾದವ್ ಅವರು ಹೇಳಿದ್ದಾರೆ. ವಾರದ ಹಿಂದೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಗಾಮಿನಿ ಮರಿಗಳಿಗೆ ಜನ್ಮ ನೀಡಿತ್ತು.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್​ನಲ್ಲಿ ವಿಡಿಯೋ, ಫೋಟೋ ಶೇರ್ ಮಾಡಿರುವ ಕೇಂದ್ರ ಸಚಿವ ಭುಪೇಂದ್ರ ಯಾದವ್ ಅವರು, ಒಂದು ವಾರದ ಹಿಂದೆ ಗಾಮಿನಿ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ವರದಿ ಮಾಡಲಾಗಿತ್ತು. ಆದರೆ ಗಾಮಿನಿ ಜನ್ಮ ನೀಡುರುವುದು ಐದು ಮರಿಗಳಿಗಲ್ಲ, ಒಟ್ಟು ಆರು ಮರಿಗಳಿಗೆ. ಆದರೆ ಇನ್ನೊಂದು ಮರಿ ಎಲ್ಲಿತ್ತು ಎಂಬುದು ಗೊತ್ತಿಲ್ಲ. ಆದರೆ ಇದೀಗ ಸೆರೆಯಾಗಿರುವ ವಿಡಿಯೋದಲ್ಲಿ ಒಟ್ಟು 6 ಮರಿಗಳಿವೆ ಎಂದು ಸಚಿವರು ಬರೆದುಕೊಂಡಿದ್ದಾರೆ.

ಇದನ್ನು ಓದಿ: 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದ ಗಾಮಿನಿ.. ಭಾರತದಲ್ಲಿ ಚೀತಾಗಳ ಸಂಖ್ಯೆ ಈಗ ಎಷ್ಟು?

ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ಹೆಚ್ಚಿಸಲು ಆಫ್ರಿಕಾ ನಾಡಿನಿಂದ ಕೆಲ ಚೀತಾಗಳನ್ನು ಏರ್​ಕ್ರಾಫ್ಟ್​ ಮೂಲಕ ಭಾರತಕ್ಕೆ ತರಲಾಗಿತ್ತು. ಇವುಗಳಲ್ಲಿ ಗಾಮಿನಿ ಚೀತಾ ಕೂಡ ಒಂದಾಗಿದೆ. ಅಲ್ಲದೇ ಭಾರತದಲ್ಲಿ ಗಾಮಿನಿ ಮೊದಲ ಬಾರಿಗೆ ಊಹೆಗಿಂತ ಹೆಚ್ಚು ಮರಿಗಳಿಗೆ ಜನ್ಮ ಕೊಟ್ಟಿರುವುದು ಖುಷಿ ಸಂಗತಿ ಆಗಿದೆ. ಆಫ್ರಿಕಾದಿಂದ ತಂದಂತಹ 27 ಚೀತಾಗಳಲ್ಲಿ ಅರ್ಧದಷ್ಟು ಮರಿ ಚೀತಾಗಳಿವೆ. ಅಂದರೆ ಸದ್ಯ ಈ ಆರು ಮರಿಗಳು ಸೇರಿ ಒಟ್ಟು 14 ಮರಿ ಚೀತಾಗಳಾಗಿವೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment