Advertisment

ರಾಜಕೀಯ ಬದ್ಧ ವೈರಿಗಳ ಸಮಾಗಮ; ಕೇಂದ್ರ ಸಚಿವ ಹೆಚ್​ಡಿಕೆಯನ್ನು ಸನ್ಮಾನಿಸಿದ ಚೆಲುವರಾಯಸ್ವಾಮಿ!

author-image
Gopal Kulkarni
Updated On
ರಾಜಕೀಯ ಬದ್ಧ ವೈರಿಗಳ ಸಮಾಗಮ; ಕೇಂದ್ರ ಸಚಿವ ಹೆಚ್​ಡಿಕೆಯನ್ನು ಸನ್ಮಾನಿಸಿದ ಚೆಲುವರಾಯಸ್ವಾಮಿ!
Advertisment
  • ರಾಜಕೀಯ ಸಿಟ್ಟಿನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸ್ವಾಮಿ-ಸ್ವಾಮಿ
  • ಕೇಂದ್ರ ಸಚಿವ ಹೆಚ್​ಡಿಕೆಯನ್ನ ಸನ್ಮಾನಿಸಿದ ಚಲುವರಾಯಸ್ವಾಮಿ
  • ರಾಜಕೀಯ ವೈರಿ ಚಲುವರಾಯಸ್ವಾಮಿಯನ್ನ ಶ್ಲಾಘಿಸಿದ ಹೆಚ್​ಡಿಕೆ!

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಬಾಡೂಟದ ಗಲಾಟೆ, ಸಿಟಿ ರವಿ ವಿರುದ್ಧ ಪ್ರತಿಭಟನೆ ಸೇರಿದಂತೆ ಕೆಲವು ಜಟಾಪಟಿ ನಡೆದರೂ, ಸಾಹಿತ್ಯ ಸಮ್ಮೇಳನ ಸುಗಮವಾಗಿ ನೆರವೇರಿತು. ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕುಮಾರಸ್ವಾಮಿ - ಚಲುವರಾಯಸ್ವಾಮಿ ಮುಖಾಮುಖಿಯಾಗಿದ್ರು.. ಈ ಬಗ್ಗೆ ಒಂದು ಕಪ್ಲೀಟ್​ ವರದಿ ಇಲ್ಲಿದೆ.

Advertisment

ರಾಜಕೀಯ ಸಿಟ್ಟಿನ ಮಧ್ಯೆ ಒಟ್ಟಿಗೆ ಕಾಣಿಸಿಕೊಂಡ ಸ್ವಾಮಿ-ಸ್ವಾಮಿ
ಈ ವರ್ಷದ ಸಮ್ಮೇಳನದಲ್ಲಿ ಏನ್ ಸ್ಪೆಷಲ್ ಅಂದ್ರೆ.. ಇಷ್ಟು ದಿನ ಬದ್ಧವೈರಿಗಳಂತೆ ಸಿಕ್ಕ ಸಿಕ್ಕ ಕಡೆ ವಾಗ್ದಾಳಿಗಳನ್ನ ಮಾಡ್ಕೊಂಡು.. ಚೆಲುವರಾಯಸ್ವಾಮಿನ ಬೆಳೆಸಿದ್ದೇ ನಾವು ಅಂತಾ ಹೆಚ್​ಡಿಕೆ.. ಕುಮಾರಸ್ವಾಮಿನ ಸಿಎಂ ಮಾಡಿದ್ದೇ ನಾನು ಅಂತಾ ಚೆಲುವರಾಯಸ್ವಾಮಿ ಬಡಿದಾಟ ನಡೇತಾನೆ ಇರ್ತಿತ್ತು. ಆದ್ರೀಗ ಅದೆಷ್ಟೋ ವರ್ಷಗಳ ನಂತರ ಇವರಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

publive-image

ಕೇಂದ್ರ ಸಚಿವ ಹೆಚ್​ಡಿಕೆಯನ್ನ ಸನ್ಮಾನಿಸಿದ ಚಲುವರಾಯಸ್ವಾಮಿ
ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಕೇಂದ್ರ ಸಚಿವ ಹೆಚ್.​​ಡಿ ಕುಮಾರಸ್ವಾಮಿ ಕುಚಿಕು ಗೆಳೆಯರು. ಆದ್ರೆ, ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಚಲುವರಾಯಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ರು. ಅಲ್ಲಿಂದು ಕುಮಾರಣ್ಣ ಹಾಗೂ ಚಲುವರಾಸ್ವಾಮಿ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು ಉಂಟು. ಆದ್ರೆ, ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಕುಮಾರಸ್ವಾಮಿಯನ್ನ ಚಲುವರಾಯಸ್ವಾಮಿ ಸನ್ಮಾನಿಸಿದ್ದಾರೆ. ವೇದಿಕೆ ಮೇಲೆ ಕುಮಾರಸ್ವಾಮಿಗೆ ಸನ್ಮಾನ ಮಾಡುವ ನೆರೆದಿದ್ ಜನರು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ.

ರಾಜಕೀಯ ವೈರಿ ಚಲುವರಾಯಸ್ವಾಮಿಯನ್ನ ಶ್ಲಾಘಿಸಿದ ಹೆಚ್​ಡಿಕೆ!
ಹೆಚ್‌ಡಿಕೆ ವೇದಿಕೆ ಏರುತ್ತಿದ್ದಂತೆ ಚಲುವರಾಯಸ್ವಾಮಿ ಎದ್ದುನಿಂತ್ರು.. ಪ್ರಭಾವಿ ಒಕ್ಕಲಿಗ ಮಠದ ಶ್ರೀಗಳ‌ ಸಮ್ಮುಖದಲ್ಲೇ ವೇದಿಕೆಯಲ್ಲಿ ಹೆಚ್‌ಡಿಕೆ- ಚಲುವರಾಯಸ್ವಾಮಿ ಕಾಣಿಸಿಕೊಂಡ್ರು. ನಿರ್ಮಲಾನಂದ ಶ್ರೀ ಹಾಗೂ ಸಿದ್ದಲಿಂಗ ಶ್ರೀಗಳು ಬದ್ಧವೈರಿಗಳ ಮಧ್ಯೆ ಕುಳಿತಿದ್ರು. ಮಾಜಿ ದೋಸ್ತಿಗಳ ಸಮಾಗಮ ಕಂಡು ಮಂಡ್ಯ ಜನರ ಹರ್ಷೋದ್ಗರ ಜೋರಾಗಿತ್ತು. ಈ ವೇಳೆ ಕುಮಾರಣ್ಣ, ಚಲುವಣ್ಣನ ಕಾರ್ಯವನ್ನ ಶ್ಲಾಘಿಸಿದ್ರು.
ಉಸ್ತುವಾರಿ ಸಚಿವರಿಂದಲೇ ಹೆಚ್‌ಡಿಕೆಗೆ ಸನ್ಮಾನ, ಚಲುವರಾಯಸ್ವಾಮಿಯನ್ನ ಕುಮಾರಸ್ವಾಮಿ ಶ್ಲಾಘನೆ, ಮಾಜಿ ದೋಸ್ತಿಗಳ ಸಮಾಗಮ. ಇದೆಲ್ಲಾ ಮಂಡ್ಯ ಜಿಲ್ಲೆ ಜನರ ಶಿಳ್ಳೆ, ಚಪ್ಪಾಳೆಗಳನ್ನ ಗಿಟ್ಟಿಸಿಕೊಂಡಿದೆ. ಅಮೋಘ ದೃಶ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment