Advertisment

Chenab bridge: ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇಂದು ಕಾಶ್ಮೀರದಲ್ಲಿ ಉದ್ಘಾಟನೆ..!

author-image
Ganesh
Updated On
ಪಹಲ್ಗಾಮ್ ದಾಳಿ ನಂತರ ಮೋದಿ ಫಸ್ಟ್​ ಟೈಂ ಕಾಶ್ಮೀರ ಭೇಟಿ.. ಕಣಿವೆ ನಾಡಿನಲ್ಲಿ ನಾಳೆ ಪ್ರಮುಖ 6 ಬೆಳವಣಿಗೆಗಳು..!
Advertisment
  • ಚೆನಾಬ್ ರೈಲು ಸೇತುವೆ ಉದ್ಘಾಟಿಸುವ ಪ್ರಧಾನಿ ಮೋದಿ
  • ಕಟ್ರಾದಿಂದ ಶ್ರೀನಗರಕ್ಕೆ 3 ಗಂಟೆಗಳಲ್ಲಿ ವಂದೇ ಭಾರತ್ ಪ್ರಯಾಣ
  • ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆ ಉದ್ಘಾಟನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಪ್ರಮುಖ ಮೂಲಸೌಕರ್ಯ ಉದ್ಘಾಟನೆಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸುವರು.

Advertisment

ಚಿನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಐಕಾನಿಕ್ ಚೆನಾಬ್ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಎಂಜಿನಿಯರಿಂಗ್ ಅದ್ಭುತ ಎಂದು ಕರೆಯಲ್ಪಡುವ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯನ್ನು ಕಠಿಣ ಭೂಕಂಪ ಮತ್ತು ಬಿರುಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಭಾರತೀಯ ರೈಲ್ವೆ ನಿರ್ಮಾಣದಲ್ಲಿ ಹೊಸ ಯುಗದ ಆರಂಭದ ಸಂಕೇತವಾಗಿದೆ.

ಇದನ್ನೂ ಓದಿ: ಕೊನೆಗೂ FIR ದಾಖಲಿಸಿದ ಪೊಲೀಸರು.. ಮೂವರ ವಿರುದ್ಧ ಕೇಸ್​..!

ಕಾಶ್ಮೀರವನ್ನು ಸೀದಾ ದೇಶದ ಉಳಿದ ಭಾಗದ ಜೊತೆ ಸಂಪರ್ಕಿಸುವ ರೈಲು ಸೇವೆಗೆ ಇಂದು ಪ್ರಧಾನಿ ಮೋದಿ ಅಧಿಕೃತವಾಗಿ ಚಾಲನೆ ನೀಡುವರು. ಜಮ್ಮುವಿನಿಂದ ಸೀದಾ ಕಾಶ್ಮೀರಕ್ಕೆ ರೈಲು ಸಂಪರ್ಕಕ್ಕೆ ಕೂಡ ಇಂದು ಪ್ರಧಾನಿ ಮೋದಿ ಚಾಲನೆ ನೀಡುವರು.
ಕಟ್ರಾದಿಂದ ಶ್ರೀನಗರಕ್ಕೆ 3 ಗಂಟೆಗಳಲ್ಲಿ: ವಂದೇ ಭಾರತ್ ಪ್ರಯಾಣ

ಚೆನಾಬ್ ಸೇತುವೆಯ ಜೊತೆಗೆ, ಪ್ರಧಾನಿಯವರು ಜಮ್ಮುವಿನ ಕಟ್ರಾ ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 2-3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಒಟ್ಟು ಪ್ರಯಾಣವನ್ನು ಕೇವಲ 3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ರಾಜ್ಯದೊಳಗಿ ರೈಲ್ವೇ ಪ್ರಯಾಣವನ್ನು ಸುಲಭಗೊಳಿಸುತ್ತದೆ.

Advertisment

ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆ

ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆಯಾದ ಅಂಜಿ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ದೇಶದ ಅತ್ಯಂತ ಭೌಗೋಳಿಕವಾಗಿ ಸವಾಲಿನ ಭೂಪ್ರದೇಶಗಳಲ್ಲಿ ಒಂದಕ್ಕೆ ಸೇವೆ ಸಲ್ಲಿಸಲು ನಿರ್ಮಿಸಲಾಗಿದೆ, ಇದು ಜಮ್ಮು ಕಾಶ್ಮೀರ ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ.

ಇದನ್ನೂ ಓದಿ: ಆರ್​ಸಿಬಿಗೆ ಸಂಕಷ್ಟಗಳು ಹೆಚ್ಚಾಗಲಿವೆ.. ಹೈಕೋರ್ಟ್ ಕಟಕಟೆಯಲ್ಲಿ ಇಂದು ಏನಾಯ್ತು..?

publive-image

ಕಾಶ್ಮೀರಕ್ಕೆ ₹43,780 ಕೋಟಿ

ಮತ್ತೊಂದು ಪ್ರಮುಖ ಘೋಷಣೆಯೆಂದರೆ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ಉದ್ಘಾಟನೆ. 272 ​​ಕಿ.ಮೀ. ಉದ್ದದ ಇದು 36 ಸುರಂಗಗಳು (119 ಕಿ.ಮೀ. ವ್ಯಾಪ್ತಿ) ಮತ್ತು 943 ಸೇತುವೆಗಳನ್ನು ಹೊಂದಿದೆ. ಕಾಶ್ಮೀರ ಮತ್ತು ಭಾರತದ ಉಳಿದ ಭಾಗಗಳ ನಡುವೆ ಎಲ್ಲಾ ಹವಾಮಾನ ರೈಲು ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.

Advertisment

ಗಡಿ ರಸ್ತೆಗಳ ಸುಧಾರಣೆ

ಪ್ರಧಾನಿ ಮೋದಿ ಅವರು ಹಲವಾರು ರಸ್ತೆ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ, ವಿಶೇಷವಾಗಿ ಕೊನೆಯ ಮೈಲಿ ಮತ್ತು ಗಡಿ ಪ್ರದೇಶದ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ.

publive-image

ವೈದ್ಯಕೀಯ ಕಾಲೇಜು: ಕಟ್ರಾದಲ್ಲಿ ಆರೋಗ್ಯ ಸೇವೆ ಉತ್ತೇಜನ

ಜಮ್ಮು ಕಾಶ್ಮೀರ ಪ್ರದೇಶದ ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚುವರಿಯಾಗಿ ಪ್ರಧಾನಿಯವರು ₹350 ಕೋಟಿ ಯೋಜನೆಯಾದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಶ್ರೇಷ್ಠತೆಯ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ರಿಯಾಸಿ ಜಿಲ್ಲೆಯ ಮೊದಲ ವೈದ್ಯಕೀಯ ಕಾಲೇಜು ಆಗಿದ್ದು ಪ್ರಾದೇಶಿಕ ವೈದ್ಯಕೀಯ ಶಿಕ್ಷಣ ಮತ್ತು ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್​ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment