Advertisment

ಐವರು ಸಾವು, 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ.. ಚೆನ್ನೈ ಏರ್​​ ಶೋದಲ್ಲಿ ಆಗಿದ್ದೇ ಬೇರೆ!

author-image
AS Harshith
Updated On
ಐವರು ಸಾವು, 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ.. ಚೆನ್ನೈ ಏರ್​​ ಶೋದಲ್ಲಿ ಆಗಿದ್ದೇ ಬೇರೆ!
Advertisment
  • 15 ಲಕ್ಷಕ್ಕೂ ಅಧಿಕ ಜನರು ಸೇರಿದ್ದ ಏರ್​ ಶೋ
  • 2 ದಶಕಗಳ ಬಳಿಕ ನಡೆದ ಅತೀ ದೊಡ್ಡ ಏರ್​ ಶೋ
  • ಚೆನ್ನೈನ ಮರೀನಾ ಬೀಚ್​ನಲ್ಲಿ ನಡೆದ ಘೋರ ದುರಂತ

ನಿನ್ನೆ 2 ದಶಕಗಳ ಬಳಿಕ ನಡೆದ ಅತೀ ದೊಡ್ಡ ಏರ್​ ಶೋನಲ್ಲಿ ಭಾರೀ ಅವಘಡ ಸಂಭವಿಸಿದೆ. 15 ಲಕ್ಷಕ್ಕೂ ಅಧಿಕ ಜನರು ಸೇರಿದ್ದರಿಂದ ಚೆನ್ನೈನಲ್ಲಿ ದುರಂತವೇ ನಡೆದಿದೆ. ಬಿಸಿಲಿನ ತಾಪಕ್ಕೆ ಹಾಗೂ ಕಾಲ್ತುಳಿತಕ್ಕೆ ಲಿಮ್ಕಾ ದಾಖಲೆ ಜೊತೆಗೆ ಸಾವಿನ ದಾಖಲೆಯೂ ಆಗಿದೆ.

Advertisment

ಎಲ್ಲಿ ನೋಡಿದ್ರೂ ಜನರ ರಾಶಿ. ರೈಲಿನಲ್ಲಿ ನಿಲ್ಲೋಕೂ ಕೂಡ ಜಾಗವಿಲ್ಲದಂತೆ ಕಿಕ್ಕಿರಿದು ಸೇರಿರುವ ಜನ. ಒಂದಲ್ಲ ಎರಡಲ್ಲ ಬರೋಬ್ಬರಿ ಸುಮಾರು 15 ಲಕ್ಷಕ್ಕೂ ಅಧಿಕ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಭಾರೀ ದೊಡ್ಡ ಅವಘಡ ಸಂಭವಿಸಿದೆ.


">October 6, 2024

ಚೆನ್ನೈ ಏರ್​​ ಶೋದಲ್ಲಿ ಘೋರ ದುರಂತ

ದುರಂತ ಅಲ್ಲಲ್ಲ ಘೋರ ದುರಂತವೊಂದು ಸಂಭವಿಸಿದೆ. ಭಾರತೀಯ ವಾಯುಪಡೆ 92 ವರ್ಷ ಪೂರೈಸಿದ ಹಿನ್ನೆಲೆ ಚೆನ್ನೈನ ಮರೀನಾ ಬೀಚ್​ನಲ್ಲಿ ವಾಯುಪಡೆ ಏರ್‌ ಶೋ ಹಮ್ಮಿಕೊಂಡಿತ್ತು. ಈ ಸಾಹಸದಲ್ಲಿ ಒಟ್ಟು 72 ವಿಮಾನಗಳು ಭಾಗವಹಿಸಿ ವಿವಿಧ ಸಾಹಸ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವು. ಆದ್ರೆ ಹೀಗೆ ಖುಷ್​ ಖುಷಿಯಾಗಿ ಏರ್​ ಶೋ ನೋಡಲು ಬಂದಿದ್ದವರ ಸಂತಸ ಕೆಲವೇ ಕ್ಷಣಗಳಲ್ಲಿ ಮಾಯವಾಗಿತ್ತು.

Advertisment

ಲಿಮ್ಕಾ ದಾಖಲೆ ಬರೆಯುವ ಬದಲು ಸಾವಿನ ದಾಖಲೆ!

ಅಂದಹಾಗೆಯೇ ಈ ಲೋಹದ ಹಕ್ಕಿಗಳ ಸಾಹಸವನ್ನು ಕಣ್ತುಂಬಿಕೊಳ್ಳಲು ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಲಿಮ್ಕಾ ದಾಖಲೆ ಬರೆದಿದೆ. ಮಾತ್ರವಲ್ಲದೇ ಸಾವಿನಲ್ಲೂ ದಾಖಲೆ ಬರೆದಿದೆ. ನಿನ್ನೆ ಭಾನುವಾರ ರಜೆ ಹಾಗೂ ಚೆನ್ನೈನಲ್ಲಿ ನಡೆದ ಅತಿ ದೊಡ್ಡ ಏರ್ ಶೋ ವೀಕ್ಷಿಸಲು ಜನರು ಮಕ್ಕಳು ಹಾಗೂ ವೃದ್ಧರೊಂದಿಗೆ ನೆರೆದಿದ್ದರು. ಏರ್​ ಶೋ ಕಣ್ತುಂಬಿಕೊಂಡು ಹಿಂದಿರುಗುತ್ತಿದ್ದ ಜನರಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಬಿಸಿಲಿನ ಝಳ ಹೆಚ್ಚಿದ ಕಾರಣ ಕೆಲವರು ತಲೆ ಸುತ್ತಿ ಬಿದ್ದಿದ್ದಾರೆ. ಇದರ ಜೊತೆಗೆ ಸರಿಯಾದ ನಿರ್ವಹಣೆ, ಪೂರ್ವ ಸಿದ್ಧತೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ ಐದಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇನ್ನು ಬಿಸಿಲಿಗೆ ಪ್ರಜ್ಞೆ ತಪ್ಪಿದ 200ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


">October 6, 2024

ಇದನ್ನೂ ಓದಿ: ಸರ್ಕಾರಿ ಉದ್ಯೋಗ ಬೇಕಾ? ಈಗಲೇ ಅಪ್ಲೈ ಮಾಡಿ; ನೇರ ಸಂದರ್ಶನ; ಸ್ಯಾಲರಿ ಎಷ್ಟು ಗೊತ್ತಾ?

Advertisment

ಇನ್ನು ಏರ್​ ಶೋ ಮುಗಿದ ಬಳಿಕ ಮನೆಗೆ ತೆರಳುವಾಗಲೂ ಅವಘಡ ಸಂಭವಿಸಿದೆ. ರೈಲ್ವೇ ನಿಲ್ದಾಣದಲ್ಲಿ ಕಿಕ್ಕಿರಿದು ಜನ ಸೇರಿದ್ದರಿಂದ ಹಾಗೂ ರೈಲು ಹತ್ತಲು ಅವಸರ ಮಾಡಿದ್ದರಿಂದ ಅನಾಹುತ ಸಂಭವಿಸಿದೆ. ಈ ವೇಳೆ ಆರು ಜನ ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ ಎಂಬ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ಚೆನ್ನೈನಲ್ಲಿ ಭಾರೀ ಟ್ರಾಫಿಕ್ ಜಾಮ್‌ ಆಗಿದ್ದರಿಂದ ಜನರು ಪರದಾಡಿದ್ರು.

ಇದನ್ನೂ ಓದಿ: ದೇವಿ ಲುಕ್​​ನಲ್ಲಿ ಕಾಣಿಸಿಕೊಂಡ ಸರಿಗಮಪ ಖ್ಯಾತಿಯ ದಿಯಾ ಹೆಗ್ಡೆ; ಕ್ಯೂಟ್​​ ವಿಡಿಯೋ ಇಲ್ಲಿದೆ!

ಒಟ್ಟಾರೆ 21 ವರ್ಷಗಳ ನಂತರ ನಡೆದ ವೈಮಾನಿಕ ಪ್ರದರ್ಶನದಲ್ಲಿ ಸಾವಿನ ನರ್ತನವಾಗಿದೆ. ಒಂದು ದೊಡ್ಡ ಕಾರ್ಯಕ್ರಮವನ್ನು ವೀಕ್ಷಿಸಲು ತಮಿಳುನಾಡು ಮಾತ್ರವಲ್ಲದೇ ಇತರೆ ರಾಜ್ಯಗಳಿಂದಲೂ 15 ಲಕ್ಷಕ್ಕೂ ಅಧಿಕ ಜನ ಬಂದಾಗ ಅಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಆದ್ರೆ ಕಾರ್ಯಕ್ರಮ ಆಯೋಜಕರು ಹಾಗೂ ತಮಿಳುನಾಡು ಸರ್ಕಾರ ಇದರಲ್ಲಿ ವಿಫಲವಾಗಿದೆ. ಇದರಿಂದ ಹಲವರು ರಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment