ತಮಿಳುನಾಡಲ್ಲಿ ರಣಭೀಕರ ಮಳೆಯ ಮುನ್ಸೂಚನೆ! ಶಾಲಾ ಕಾಲೇಜ್​ಗಳು ಬಂದ್​! ವರ್ಕ್​ ಫ್ರಮ್ ಹೋಮ್​ಗೆ ಸೂಚನೆ

author-image
Gopal Kulkarni
Updated On
Rain Alert: ಬೆಂಗಳೂರಲ್ಲಿ ಮತ್ತೆ ಮಳೆ.. ನಾಳೆ ಹೇಗಿರುತ್ತೆ? ಹವಾಮಾನ ಇಲಾಖೆ ಹೇಳಿದ್ದೇನು?
Advertisment
  • ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ
  • ತಮಿಳುನಾಡು ಸರ್ಕಾರಕ್ಕೆ ಮುನ್ನೆಚ್ಚರಿಕೆ ಕೊಟ್ಟ ಭಾರತೀಯ ಹವಾಮಾನ ಇಲಾಖೆ
  • 4 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಬಂದ್, ವರ್ಕ್​ ಫ್ರಮ್ ಹೋಮ್​ಗೆ ಸಲಹೆ

ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ರಣಭೀಕರ ಮಳೆ ಬೀಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು. ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಚೆನ್ನೈ, ತಿರುವಲ್ಲೂರು, ಕಾಂಚಿಪುರಂ ಹಾಗೂ ಚೆಂಗಲಪಟ್ಟುಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು. ಅಕ್ಟೋಬರ್ 18 ವರೆಗೆ ಶಾಲಾ ಕಾಲೇಜ್​ಗಳನ್ನು ಬಂದ್ ಇಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯದಲ್ಲಿರುವ ಎಲ್ಲಾ ಐಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ 18ರವರೆಗೆ ಯಾವ ಕಂಪನಿಗಳೂ ಕೂಡ ಕಚೇರಿಯನ್ನು ತೆರೆಯುವಂತಿಲ್ಲ. ಅಲ್ಲಿಯವರೆಗೂ ಎಲ್ಲ ಐಟಿ ಕಂಪನಿಗಳು ವರ್ಕ್​ ಫ್ರಮ್ ಹೋಮ್ ಅಳವಡಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಮೊದಲ ಬಾರಿ ನದಿಯಲ್ಲಿರುವ ಡಾಲ್ಫಿನ್​ಗಳ ಗಣತಿ! ಯಾವ್ಯಾವ ನದಿಗಳಲ್ಲಿ ಇವೆ ಡಾಲ್ಫಿನ್ ಸಂತತಿ?

ಇನ್ನು ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಳೆಯಿಂದ ಆಗಲಿರುವ ಅನಾಹುತಗಳನ್ನು ಸಮರ್ಪಕವಾಗಿ ಎದುರಿಸಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳಲ್ಲಿ ತಮಿಳುನಾಡಿನ ಹಲವೆಡೆ ರಣಭೀಕರ ಮಳೆ ಬೀಳಲಿದ್ದು. ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ತಮಿಳುನಾಡು , ಪಾಂಡಿಚೆರಿ ಹಾಗೂ ಆಂಧ್ರಪ್ರದೇಶದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬೆಳ್ಳಂಬೆಳಗ್ಗೆ ಮಳೆರಾಯ ಕಿರಿಕಿರಿ; ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ..?

ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಲವು ಅಧಿಕಾರಿಗಳೊಂದಿಗೆ ಸಬೆ ನಡೆಸಿದರು. ಭೀಕರ ಮಳೆಯನ್ನು ಸಮರ್ಥವಾಗಿ ಎದುರಿಸುವ ಸಿದ್ಧತೆಗಳ ಕುರಿತಾಗಿ ಚರ್ಚೆ ನಡೆಸಿದರು. ಇದೇ ಸಭೆಯಲ್ಲಿ ಹಾಜರಿದ್ದ, ಚೆನ್ನೈ ಮಹಾನಗರ ಪಾಲಿಕೆ ಕಮಿಷನರ್, ಈಗಾಗಲೇ 990 ಪಂಪ್ಸ್, 57 ಟ್ರ್ಯಾಕ್ಟರ್​ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ. ಅದರ ಜೊತೆಗೆ 36 ಮೋಟಾರ್​​ಬೋಟ್​, 46 ಮೆಟ್ರಿಕ್ ಟನ್ ಬ್ಲೀಚ್ ಪೌಡರ್ ಹಾಗೂ 25 ಮೆಟ್ರಿಕ್ ಟನ್ ಲೈಮ್ ಪೌಡರ್​ಗಳನ್ನು ಸಿದ್ಧವಾಗಿರಿಸಿಕೊಂಡಿದ್ದೇವೆ. ಎಂತಹ ಸ್ಥಿತಿಯನ್ನು ಕೂಡ ಎದುರಿಸಲು ಪಾಲಿಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment