ಚೆನ್ನೈಗೆ ಮಾಸ್ಟರ್​ ಸ್ಟ್ರೋಕ್​​ ಕೊಟ್ಟ RCB ಮಾಜಿ ಪ್ಲೇಯರ್ ಹಸರಂಗ​; ಮತ್ತೊಂದು ಮುಖಭಂಗ..!

author-image
Ganesh
Updated On
ಚೆನ್ನೈಗೆ ಮಾಸ್ಟರ್​ ಸ್ಟ್ರೋಕ್​​ ಕೊಟ್ಟ RCB ಮಾಜಿ ಪ್ಲೇಯರ್ ಹಸರಂಗ​; ಮತ್ತೊಂದು ಮುಖಭಂಗ..!
Advertisment
  • ಐಪಿಎಲ್​​ನಲ್ಲಿ ನಿನ್ನೆ ಚೆನ್ನೈ vs ರಾಜಸ್ಥಾನ್ ಪಂದ್ಯ
  • ರಾಜಸ್ಥಾನ ವಿರುದ್ಧ ಸಿಎಸ್​​ಕೆಗೆ ವಿರೋಚಿತ ಸೋಲು
  • ಕೇವಲ 6 ರನ್​ಗಳ ಅಂತರದಿಂದ ಗೆದ್ದ ರಾಜಸ್ಥಾನ್

ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡೆಯಿತು. ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗೆಲುವು ಸಾಧಿಸಿದೆ.

ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ 9 ವಿಕೆಟ್‌ಗೆ 182 ರನ್ ಗಳಿಸಿತು. ರಾಜಸ್ಥಾನ ನೀಡಿದ 183 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ತಂಡಕ್ಕೆ ಸಸತ 2ನೇ ಸೋಲು ಇದಾಗಿದೆ.

ಚೆನ್ನೈ ವಿರುದ್ಧ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ 18ನೇ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಮೂರು ಪಂದ್ಯಗಳನ್ನು ಆಡಿರುವ ರಾಜಸ್ಥಾನ್ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಇನ್ನು, ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ ಪರ ಓಪನರ್ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್​ ಉತ್ತಮ ಆರಂಭವೇನು ಪಡೆಯಲಿಲ್ಲ. ಜೈಸ್ವಾಲ್ ಕೇವಲ 4 ರನ್​ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರೆ ಸಂಜು ಕೂಡ 20 ರನ್​ಗೆ ಆಟ ಮುಗಿಸಿದರು.

ಇದನ್ನೂ ಓದಿ: ಮ್ಯಾಚ್ ಸೋತರೂ ಹಾರ್ದಿಕ್​ ಪಾಂಡ್ಯ 12 ಲಕ್ಷ ರೂಪಾಯಿ ದಂಡ ಕಟ್ಟಬೇಕು.. ಯಾಕೆ?

publive-image

ಜೈಸ್ವಾಲ್ ಬಳಿಕ ಕ್ರೀಸ್​ಗೆ ಆಗಮಿಸಿದ್ದ ನಿತೀಶ್ ರಾಣಾ, ಚೆನ್ನೈ ಬೌಲರ್​ಗಳನ್ನ ಬೆಂಡೆತ್ತಿದರು. ರಿಯಾನ್ ಪರಾಗ್ ಜೊತೆ ಉತ್ತಮ ಇನ್ನಿಂಗ್ಸ್​ ಕಟ್ಟಿದ ನಿತೀಶ್ ರಾಣಾ, ಕೇವಲ 21 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಇದರಲ್ಲಿ 7 ಬೌಂಡರಿ, 3 ಅತ್ಯುತ್ತಮವಾದ ಸಿಕ್ಸರ್​ಗಳು ಸೇರಿದ್ದವು. ಅರ್ಧಶತಕದ ಬಳಿಕ ಬ್ಯಾಟಿಂಗ್​​ನಲ್ಲಿ ಆರ್ಭಟಿಸಿದ ರಾಣಾ, ಕೇವಲ 36 ಎಸೆತಗಳಲ್ಲಿ 10 ಫೋರ್, 5 ಬಿಗ್ ಸಿಕ್ಸರ್​ನಿಂದ​ 81 ರನ್​ಗಳನ್ನ ಗಳಿಸಿದರು. ಈ ವೇಳೆ ಧೋನಿ ಅವರ ಚಮತ್ಕಾರದಲ್ಲಿ ಸ್ಟಂಪ್​ಔಟ್ ಆದರು. ಕ್ಯಾಪ್ಟನ್ ರಿಯಾನ್ ಪರಾಗ್ 37, ಹೆಟ್ಮರ್ 19 ರನ್​ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್​ ನಿಗದಿತ 20 ಓವರ್​ಗಳಲ್ಲಿ 182 ರನ್​ಗಳ ಗುರಿಯನ್ನು ಚೆನ್ನೈಗೆ ನೀಡಿತ್ತು.

ಈ ಗುರಿ ಬೆನ್ನು ಹತ್ತಿದ ಚೆನ್ನೈ ಸೂಪರ್​ ಕಿಂಗ್ಸ್​, 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್​ಗಳಿಸಿತು. ಸಿಎಸ್​​ಕೆ ಪರ ಋತುರಾಜ್ ಗಾಯಕ್ವಾಡ್, 63, ರವೀಂದ್ರ ಜಡೇಜಾ 32, ರಾಹುಲ್ ತ್ರಿಪಾಠಿ 23, ಎಂಎಸ್​ ಧೋನಿ 16 ರನ್​ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಹಸರಂಗ 4 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ: 6, 6, 6, 6, 6; ಹೊಡಿಬಡಿ ಬ್ಯಾಟಿಂಗ್​, ರಾಣ ವೇಗದ ಅರ್ಧಶತಕ.. ಚೆನ್ನೈಗೆ ಬಿಗ್ ಟಾರ್ಗೆಟ್ ಕೊಟ್ಟ RR

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment