/newsfirstlive-kannada/media/post_attachments/wp-content/uploads/2025/04/Dhoni-1.jpg)
ಐಪಿಎಲ್ ಸೀಸನ್ 18ರ ಫಸ್ಟ್ ಹಾಫ್ ಅಂತ್ಯಕ್ಕೆ ಕಂಡಿದೆ. ಸೆಕೆಂಡ್ ಹಾಫ್ ವಾರ್ ಆರಂಭ ಶುರುವಾಗಿದೆ. ಮೊದಲಾರ್ಧ ಅಂತ್ಯವಾದ ಬೆನ್ನಲ್ಲೇ ಪ್ಲೇ ಆಫ್ನ ಲೆಕ್ಕಾಚಾರಗಳೂ ಜೋರಾಗಿ ನಡೀತಿವೆ. ಐಪಿಎಲ್ನ ಚಾಂಪಿಯನ್ ತಂಡಗಳು ಈ ಸೀಸನ್ನಲ್ಲಿ ಮಕಾಡೆ ಮಲಗಿವೆ. ಆರಂಭಕ್ಕೂ ಮುನ್ನ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದ ತಂಡಗಳು ಪ್ಲೇ ಆಫ್ ರೇಸ್ನಲ್ಲಿ ಮುಂಚೂಣಿಯಲ್ಲಿವೆ.
ಧೋನಿ ಅಭಿಮಾನಿಗಳಿಗೆ ಬಿಗ್ ಶಾಕ್
ಮತ್ತೊಮ್ಮೆ ಕಪ್ ಎತ್ತಬಹುದು ಅಂದ್ಕೊಂಡಿದ್ದ ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ದೊಡ್ಡ ಆಘಾತ ಆಗಿದೆ. ಆರಂಭದಲ್ಲಿ ಕಪ್ ಗೆಲ್ಲುವ ನಿರೀಕ್ಷೆ ಇಟ್ಕೊಂಡಿದ್ದ ಸಿಎಸ್ಕೆಗೆ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಯಾಕೆಂದರೆ ಸಿಎಸ್ಕೆ ಪ್ಲೇ-ಆಫ್ ರೇಸ್ನಿಂದ ಹೊರ ಬಿದ್ದಿದೆ.
ಇಲ್ಲಿಯವರೆಗೆ 9 ಪಂದ್ಯಗಳನ್ನು ಆಡಿರುವ ಸಿಎಸ್ಕೆ, ಸತತ 7 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಅಲ್ಲದೇ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ, ಚೆನ್ನೈ ತಂಡ ಪ್ಲೇ-ಆಫ್ ಪ್ರವೇಶ ಮಾಡೋದು ಕಷ್ಟ.
ಇದನ್ನೂ ಓದಿ: ಪ್ಲೇ-ಆಫ್ ರೇಸ್ನಲ್ಲಿ ಒಟ್ಟು 6 ತಂಡಗಳು.. ಯಾವ್ಯಾವ ತಂಡದ ಲಕ್ ಬದಲಾಗಬೇಕು..?
ರಾಜಸ್ಥಾನ್ ರಾಯಲ್ಸ್ ಕತೆಯೂ ಅಷ್ಟೇ 9 ಪಂದ್ಯಗಳಲ್ಲಿ 7ರಲ್ಲಿ ಸೋತಿದೆ. ಕೇವಲ 2 ಪಂದ್ಯವನ್ನು ಗೆದ್ದಿರುವ ರಾಜಸ್ಥಾನ್, 4 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ. ಹಾಗಾಗಿ ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಪ್ರವೇಶದ ಹಾದಿ ತುಂಬಾ ದುರ್ಗಮವಾಗಿದೆ. ಅದೇ ರೀತಿ ಎಸ್ಆರ್ಹೆಚ್ ಭವಿಷ್ಯ ಕೂಡ ಅಷ್ಟೇ, ಮೂರು ಪಂದ್ಯವನ್ನು ಗೆದ್ದಿರುವ ಹೈದರಾಬಾದ್ 6 ಅಂಕಪಡೆದುಕೊಂಡು 8ನೇ ಸ್ಥಾನದಲ್ಲಿದೆ. ಪ್ಲೇ-ಆಫ್ ಪ್ರವೇಶ ಮಾಡಬೇಕು ಅಂದರೆ, ಉಳಿದಿರುವ ಐದು ಪಂದ್ಯಗಳಲ್ಲಿ ಮ್ಯಾಜಿಕ್ ಮಾಡಬೇಕು. ಅಲ್ಲದೇ, ನೆಟ್ರನ್ ರೇಟ್ ತುಂಬಾನೇ ಮುಖ್ಯವಾಗುತ್ತದೆ.
ಇದನ್ನೂ ಓದಿ: ಮತ್ತೆ ಚಿಗುರಿದ ಕನಸು.. ರಾಜಸ್ಥಾನ್ ವಿರುದ್ಧದ ಗೆಲುವು ಆರ್ಸಿಬಿಗೆ 3 ಸಂಭ್ರಮ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್